ಆಸೆ ಹೆಚ್ಚಾದಂತೆ ಆಯಸ್ಸು, ಐಶ್ವರ್ಯ ಎಲ್ಲವೂ ಕಡಿಮೆ ಯಾಗುವುದು

ಭಾಲ್ಕಿ:”ಶ್ರೀಯಸ್ಚ ಪ್ರೆಯಶ್ಚ ಮನುಷ್ಯ ಮೀಥಃ ತೈಸಂಪರಿಥ್ಯ ನಿತ್ಯವಿಭಿನ್ನಾತಿತಿರಃ”
ಇದೊಂದು ಸುಂದರವಾದ ಮಾತು. ಸಾವಿರಾರು ವರ್ಷಗಳ ಹಿಂದೆ ಸುಂದರವಾದ ವನದ ಮಧ್ಯದಲ್ಲಿ ಕುಟೀರದಲ್ಲಿ ಬಾಳಿಬದುಕಿದ ಜನ ಅವರು. ಈ ವಿಶ್ವವನ್ನು ಬಹಳ ಪ್ರೀತಿಸಿದರು. ಮನಸ್ಸನ್ನು ಆಕಾಶದಲ್ಲಿ ಹರಡಿಸಿದರು. ಹೃದಯದಲ್ಲಿ ಬೆಳಕನ್ನು, ಶಾಂತಿಯನ್ನು ತುಂಬಿಕೊಂಡವರು ಈ ಮಾತನ್ನು ಹೇಳಿದರು.
ಎರಡು ಮಾರ್ಗಗಳು ಬದುಕಿನಲ್ಲಿ ಬಹಳ ಮುಖ್ಯ.
ಎಲ್ಲರ ಎದುರು ನಾವೇನು ಭೂಮಂಡಲಕ್ಕೆ ಬರುತ್ತೇವೆ ನಮ್ಮಲ್ಲಿ ಎರಡು ಮಾರ್ಗಗಳಿರುತ್ತವೆ
ಒಂದು ಶ್ರೆಯೊಮಾರ್ಗ ಇನ್ನೊಂದು ಪ್ರಯೋಮಾರ್ಗ.
ಒಂದು ಬೆಳಕಿನ ಮಾರ್ಗ ಇನ್ನೊಂದು ಮಂದಬೆಳಕಿನ ಮಾರ್ಗ.
ಪ್ರಯೋಮಾರ್ಗ ಇದು ಸುಖದ ಮಾರ್ಗ. ಯಾವ ಮಾರ್ಗ ಹಿಡಿದು ಹೋದರೆ ಸುಖ ಸಂತೋಷ ಸಿಗುವುದು, ಇಂದ್ರಿಯಗಳಿಗೆ ಸೌಖ್ಯ ಸಿಗುವುದು, ಕೇಳಿ ಸುಖ ನೋಡಿ ಸುಖ ಅನುಭವಿಸಿ ಸುಖ ಪಡೆಯುವುದು ಒಂದು ಮಾರ್ಗ.
ಶ್ರಯೋಮಾರ್ಗ ಇದು ಪರಮ ಶಾಂತಿಯ ಮಾರ್ಗ.
ಯಾವ ಮಾರ್ಗದಲ್ಲಿ ನಡೆದರೆ ಜಗತ್ತಿನ ಎಲ್ಲಾ ಬೇಕುಬೇಡಗಳನ್ನು ತೊರೆದು ಶಾಂತಿಯ ಮಾರ್ಗದತ್ತ ದೇವನ ಕಡೆ ಸಾಗುವ ಮಾರ್ಗ.
ಈ ಎರಡು ಮಾರ್ಗಗಳಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಬೇಕು.
ಈ ಜಗತ್ತಿನಲ್ಲಿ ಅನೇಕ ಜನರು ಸುಖದ ಮಾರ್ಗ ಹುಡುಕುತ್ತಾರೆ. ಕೆಲವೇ ಕೆಲವು ಜನ ಶಾಂತಿಯ ಮಾರ್ಗ ದೇವನ ಮಾರ್ಗದತ್ತ ನಡೆಯುವರು.
ಉಂಡು ತಿಂದು ಕುಡಿದು ಮಜಾ ಮಾಡಿ ಸುಂದರವಾದ ಮನೆ ಎಲ್ಲಾ ಅನುಕೂಲಗಳು ಇರುವ ಜೀವನ ಬಯಸುವರು ಇದು ಪ್ರಯೋಮಾರ್ಗ.
ಕುಳಿತಲ್ಲಿಯೇ ಎಲ್ಲವನ್ನೂ ಬೇಕೆನ್ನುವ ಜೀವನ. ಈ ಮಾರ್ಗದಲ್ಲಿ ಅನೇಕ ಜನರು ಹೋಗುತ್ತಾರೆ. ಇರೋದು ಒಂದೇ ಜೀವನ ಇದನ್ನು ಮಜವಾಗಿ ಅನುಭವಿಸಬೇಕು ಎಂದು ಅನ್ನಿಸುವ ಜನರೇ ಹೆಚ್ಚು. ಬರೇ ಸುಖ ಬೇಕಾದರೆ ಪ್ರಯೋಮಾರ್ಗ ಹಿಡಿಯಿರಿ ಇದನ್ನು ಸುಖದ ಮಾರ್ಗ ಎನ್ನುತ್ತಾರೆ.
ಶಾಂತಿ ಸಮಾಧಾನ ಸ್ವಾತಂತ್ರ್ಯ ವಿಮುಕ್ತ ಸ್ಥಿತಿಯ ಮಾರ್ಗವನ್ನು ಶ್ರಯೋಮಾರ್ಗ ಅನ್ನುತ್ತಾರೆ. ಯಾವುದೋ ಒಂದು ಗುಡಿಸಲಲ್ಲಿ ನಮಗಾಗಿ ಯಾರಿಲ್ಲದೆ ಇದ್ದಿದ್ದನ್ನು ಅನುಭವಿಸಿ ಶಾಂತಿ ಸಮಾಧಾನವನ್ನು ಅನುಭವಿಸುತ್ತ ಸಾಗಿಸುವ ಮಾರ್ಗ ಶ್ರಯೋಮಾರ್ಗ.
ಹಿಂದಿನ ಕಾಲದಲ್ಲಿ ನಚಿಕೇತ ಯನ್ನುವ ಬಾಲಕ ಎಂಟು ಹತ್ತು ವರ್ಷದ ಸಾಮಾನ್ಯ ಹುಡುಗ ಯಮಲೋಕಕ್ಕೆ ಹೋಗಿ ಯಮಧರ್ಮನಿಗೆ ಭೇಟಿಮಾಡಿದ. ಯಮಧರ್ಮ ಆಶೀರ್ವದಿಸಿ ಹಾರೈಸಿ ನಿನಗೇನು ಬೇಕು ಎಂದು ಕೇಳಿದನು.
ಆಗ ನಚಿಕೇತ: ಯಾವುದರಿಂದ ನನ್ನ ಬದುಕು ಅರಳಿತು ಯಾವುದರಿಂದ ಶಾಂತಿ ಸಮಾಧಾನ ಸಿಕ್ಕಿತು ಅಂತಹ ಜ್ಞಾನವನ್ನು ನನಗೆ ಕರುಣಿಸಿ ಎಂದನು.
ಆಗ ಯಮಧರ್ಮರಾಜ ಅದನ್ನು ತೆಗೆದುಕೊಂಡು ಮಾಡುತ್ತೀಯಾ? ಅದರಲ್ಲೇನಿದೆ.? ನೀನು ನಿನಗಾಗಿ ಬೇರೆ ಏನಾದರೂ ಕೇಳು, ರಾಜ್ಯ ಅಷ್ಟೈಶ್ವರ್ಯ ಸಿರಿ ಸಂಪತ್ತು ಇಂತಹ ಎಲ್ಲವನ್ನೂ ಕೇಳು ಕೊಡುತ್ತೇನೆ. ಈ ಶಾಂತಿಯ ಮಾರ್ಗದಲ್ಲಿ ಏನಿದೆ?. ಈ ಜಗತ್ತಿನಲ್ಲಿ ಎಲ್ಲರೂ ಬಯಸುವುದನ್ನು ಬೇಡು ಈ ಶಾಂತಿಯ ಮಾರ್ಗ ಕೈಬಿಡು ಎಂದು ಹೇಳುತ್ತಾರೆ.
“ಎ ಕಾಮ ಮತ್ರ್ಯಲೋಕೇ”
ಅವಾಗ ನಚಿಕೇತ: ನನಗೆ ಈ ಶಾಂತಿಯ ಮಾರ್ಗ ಒಂದಿದ್ದರೆ ಸಾಕು.
ಯಮಧರ್ಮ: ಯಾಕೆ ಬೇಕು ನಿನಗೆ ಶಾಂತಿಯ ಮಾರ್ಗ.
ನಚಿಕೇತ: ಏನಿದು ಏನು ಫಲ ಒಂದು ದಿವಸ ಎಲ್ಲವನ್ನು ಬಿಟ್ಟು ಎಲ್ಲರೂ ಮಣ್ಣಲ್ಲಿ ಮಣ್ಣಾಗುವುದು ಇದ್ದೇ ಇದೆ.
ನೀನು ರಾಜ್ಯವನ್ನು ಕೊಟ್ಟಿದ್ದೆ ಆದರೆ ಅದನ್ನು ಬಿಟ್ಟು ನಿನ್ನ ಬಳಿ ಬರಬೇಕಲ್ಲ.
ನನಗೆ ಈ ಮಾರ್ಗ ಬೇಡ, ನನಗೆ ಇಂತಹ ಮಾರ್ಗ ಕಲ್ಪಿಸು ಯಾವ ಮಾರ್ಗದಿಂದ ಹೋದರೆ ಮಾನಸಿಕ ಬಂಧನಗಳಿಂದ ಹರಿದುಹೋಗಿ, ಮನಸ್ಸು ಮುಕ್ತವಾಗುತ್ತದೆಯೋ ಅಂತಹ ಮಾರ್ಗವನ್ನು ನನಗೆ ಉಪದೇಶ ಮಾಡು.
ಯಮಧರ್ಮ: ನೀನು ಬಾಲಕ ನಿನಗೆ ತಿಳಿಯುವುದಿಲ್ಲ ಎಲ್ಲರನ್ನೂ ನೋಡು ನೋಡಿ ತಿಳಿದುಕೋ ಎಲ್ಲರಿಗೂ ಏನು ಬೇಕು. ಎಲ್ಲರೂ ಸೌಖ್ಯ ಸ್ವರ್ಗ ಅಧಿಕಾರ ಆಯುಷ್ಯ ಬೇಡುವರು.
“ಏ ಏ ಕಾಮಾ ದುರ್ಲಭ ಮತ್ರ್ಯಲೋಕೇ ಸರ್ವನ್ ಕಾಮಾನ್ ಛಂದದ ಪ್ರಾಸ್ಥಯಸ್ವ”
ಜಗತ್ತಿನಲ್ಲಿ ಏನೇನು ಸುಖವನ್ನು ಬಯಸುವ ಅದನ್ನು ಕೇಳು ಕೊಡುತ್ತೇನೆ.
ನಚಿಕೇತ: ಆಳುವವರಲ್ಲ ಸೋತಿದ್ದಾರೆ ಮೇಲೆ ಹೋದವರೆಲ್ಲ ಕೆಳಗೆ ಬಿದ್ದಿದ್ದಾರೆ.
ನನಗೆ ಅಂತಹ ಮಾರ್ಗವು ಬೇಡ ನಾನು ಎಂಟು ಹತ್ತು ವರ್ಷಗಳಿಂದ ಎಲ್ಲವನ್ನೂ ನೋಡಿದ್ದೇನೆ ಈ ಮಾರ್ಗ ನನಗೆ ಬೇಡ ನನಗೆ ಬೇಕಾಗಿರುವುದು ಶಾಂತಿ ಅದನ್ನು ನೀಡು ಮನಸ್ಸು ವಿಸ್ತಾರವಾಗಬೇಕು.
“ತವೈವಾವಾಹ ತವನೃತ್ಯಾಗೀತೆ” ಬೇಕು ಬೇಡ ಎನ್ನುವ ಮಾರ್ಗವನ್ನು ನನಗೆ ಕರುಣಿಸಬೇಡ ನೀನೇನು ನನಗೆ ನೀಡುತ್ತಿದ್ದಿಯೇ ಈ ನೃತ್ಯ ಗೀತೆ ವಾಹನ ಇವೆಲ್ಲವೂ ನಿನಗೆ ಇರಲಿ ನನಗೆ ಮಾತ್ರ ಶಾಂತಿಯ ಮಾರ್ಗವನ್ನು ನೀಡು ಕರುಣಿಸು.
ಇಂದು ಎಲೆಹಸಿರು ನಾಳೆ ಬಾಡುವುದು, ಇಂದು ಹಣ್ಣು ಮರದ ಮೇಲೆ ನಾಳೆ ನೆಲದ ಮೇಲೆ ಬೀಳುವುದು. ಇಂತಹ ಮುಪ್ಪು ಅವಸ್ಥೆಯ ಬದುಕು ನನಗೆ ಬೇಡ. ಈ ಬದುಕಿನಲ್ಲಿ ನಾನು ಬಂದಿದ್ದೇನೆಂದರೆ ನಾನು ದುಡಿಯುತ್ತೇನೆ ನಿನ್ನಿಂದ ತೆಗೆದುಕೊಂಡು ನಾನು ಮಾಡುವುದೇನು? ನನಗೇನು ಸಾಧ್ಯವಿದೆ ಜೀವನದಲ್ಲಿ ಅದನ್ನು ಮಾಡಿ ಆನಂದವಾಗಿರುತ್ತೇನೆ. ಈ ಜೀವನದಲ್ಲಿ ಲೌಕಿಕವಾಗಿ ಅಲೌಕಿಕವಾಗಿ ಸ್ವಾತಂತ್ರ್ಯವನ್ನು ನೀಡಿ ಕರುಣಿಸು. ಅಮೃತತ್ವದ ಅಂಶ ಇರುವಂತದ್ದು ನೀಡು.
ಯಮಧರ್ಮ: ಆಗಲಿ, ಏನು ತೆಗೆದುಕೊಂಡರೆ ಮೃತ್ಯುವಿನ ಭಯ ಇರುವುದಿಲ್ಲವೋ ಅದನ್ನು ಅಂತಹ ಜ್ಞಾನವನ್ನು ನಿನಗೆ ನೀಡುವೆ ಎಂದು ಆಶೀರ್ವದಿಸಿದನು.
ಒಂದು ದಿನ ಒಬ್ಬ ವ್ಯಕ್ತಿ ಮನೆಯಿಂದ ಹೊರಟು ಕಾಡಿನ ಮಧ್ಯದಿಂದ ಮತ್ತೊಂದು ಊರಿಗೆ ನಡೆದುಕೊಂಡು ಹೋಗುತ್ತಿದ್ದ. ನಡೆದು ನಡೆದು ದಣಿವಾಗಿ ವಿಶ್ರಾಂತಿ ಪಡೆಯಲು ಒಂದು ಮರದಡಿ ಕುಳಿತನು. ಮಲಗಿದ್ದಲ್ಲಿಯೇ ಸುಮ್ಮನೆ ಕೈಯಾಡಿಸಲು ಆತನಿಗೆ ಒಂದು ಹೊನ್ನಿನ ಮಡಿಕೆ ಸಿಕ್ಕಿತು. ಅದನ್ನು ನೋಡಿ ಸಂತೋಷದಿಂದ ಹೊರತೆಗೆದು ಏಣಿಸಲಾರಂಭಿಸಿದ. ಅದರಲ್ಲಿ ಬರೋಬ್ಬರಿ 9999 ಬಂಗಾರದ ನಾಣ್ಯಗಳು ಇದ್ದವು.
ಆತ ಒಂದು ಸಲ ಯೋಚಿಸಿ ಯಾರೇ ಇಟ್ಟರು ಪರಿಪೂರ್ಣ 10000 ಇಡಬಹುದು. ನನ್ನಿಂದಲೇ ಎಣಿಸಲು ತಪ್ಪಾಗಿರಬಹುದು ಎಂದು ಮತ್ತೊಮ್ಮೆ ಎಣಿಸಲು ಶುರುಮಾಡಿದ. ಈ ಸಲ ಎರಡು ಕಡಿಮೆಯಾಯಿತು. ಮತ್ತೊಮ್ಮೆ ಎಣಿಸಲು ಶುರುಮಾಡಿದ ಮತ್ತೆ ಕಡಿಮೆಯಾಯಿತು. ಅದೇ ಸಮಯಕ್ಕೆ ಆ ಕಾಡಿನ ಮಧ್ಯದಲ್ಲಿ ಹುಲಿಯೊಂದು ಅವನಿರುವಲ್ಲಿಗೆ ಬಂತು. ಅವನನ್ನು ನೋಡಿ ಘರ್ಜಿಸಿತು ಅವನು ಅದನ್ನೆಲ್ಲ ಬಿಟ್ಟು ಓಡಿ ಹೋಗಲು ಪ್ರಯತ್ನಿಸಿದ. ಅವನು ತನ್ನಲ್ಲಿ ಇರುವುದೆಲ್ಲವನ್ನೂ ಬಿಟ್ಟು ಬಂಗಾರದ ನಾಣ್ಯಗಳನ್ನು ಬಿಟ್ಟು ಆಸೆ ಹೆಚ್ಚಾದಂತೆ ಇರುವುದೆಲ್ಲವೂ ಕಡಿಮೆಯಾಗುವುದು ಎನ್ನುವಂತೆ ಓಡಲಾರಂಭಿಸಿದ. ಇತ್ತಕಡೆ ಹುಲಿ ನನಗೆ ದಷ್ಟಪುಷ್ಟವಾದ ಆಹಾರ ಸಿಕ್ಕಿತು ಎಂದು ಬೇಟೆಯಾಡಲು ಹೊಂಚು ಹಾಕಿತು. ಹುಲಿಯ ತಲೆಯಲ್ಲಿ ಮೃಷ್ಟಾನ್ನ ಭೋಜನ ಆಹಾರದ ಅಲೋಚನೆ, ಇವತ್ತಿನ ತಲೆಯಲ್ಲಿ 10000 ನಾಣ್ಯದ ಆಲೋಚನೆ. ಒಂದು ಕಡೆ ಮೃತ್ಯು ಇನ್ನೊಂದು ಕಡೆ ಪ್ರಪಂಚದ ಸಂಪತ್ತು ಇವೆರಡರ ನಡುವೆ ನಮ್ಮ ಜೀವನ.
ಸಂಗ್ರಹ: ಸಿದ್ದಲಿಂಗ ಶಿವಯೋಗಿ ಮಠಪತಿ ಉಚ್ಚ ತಾ ಭಾಲ್ಕಿ ಜಿ. ಬೀದರ