ಆಸೆ ತಪ್ಪಲ್ಲ ಆದರೆ ದುರಾಸೆ ತಪ್ಪು

ಚಿತ್ರದುರ್ಗ.ಸೆ.೩; ಆಸೆಯ ಕಾರಣದಿಂದ ಮಾನವ ಒಳಿತಿನ ಜೊತೆ ಕೆಡಕನ್ನೂ ಮಾಡುತ್ತಿದ್ದಾನೆ. ಆಸೆ ತಪ್ಪಲ್ಲ; ಆದರೆ ದುರಾಸೆ ತಪ್ಪು. ದುರಾಸೆಯು ಅನೇಕ ವಿಧವಾದ ಅಕ್ರಮಗಳಿಗೆ, ಆಮಿಷಗಳಿಗೆ ಅವಕಾಶವನ್ನು ಮಾಡಿಕೊಡುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.ಹುಬ್ಬಳ್ಳಿಯ ವಿಮಲೇಶ್ವರ ನಗರದ ವಾಸಿ ರಾಜಶೇಖರ ಮೆಣಸಿನಕಾಯಿ ಅವರ ಮನೆಯಂಗಳದಲ್ಲಿ ನಡೆದ ನಿತ್ಯ ಕಲ್ಯಾಣ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ದುರಾಸೆ-ನಿರಾಸೆ ಆಚೆಗಿನ ಬದುಕು ವಿಷಯ ಚಿಂತನ ಮಾಡಿದ ಶ್ರೀಗಳು, ಆಸೆಯ ಜೊತೆ ಸಾಗೋಣ, ಆದರೆ ದುರಾಸೆಯ ಜೊತೆ ಸಾಗಬಾರದು ಇದು ಅನೇಕ ವಿಧವಾದ ಅಕ್ರಮಗಳಿಗೆ, ಆಮಿಷಗಳಿಗೆ ಅವಕಾಶವನ್ನು ಮಾಡಿಕೊಡುತ್ತದೆ. ಆಸೆ ಇರುವವನು ಜೀವನದಲ್ಲಿ ಅತೃಪ್ತಿಯನ್ನು ಅನುಭವಿಸುತ್ತಾನೆ. 12ನೇ ಶತಮಾನದ ಶರಣರು ಬದ್ಧತೆಯ ಜೊತೆ ಬದುಕಿದರು. ಇದು ಉಳಿಯುವ ಶತಮಾನ. ಆದರ್ಶದಿಂದ ತುಂಬಿದ ಶತಮಾನ. ಮಾನವನ ದುಃಖ ನಿವಾರಿಸಿದ ಶತಮಾನ. ಆಯಾಯ ಶತಮಾನದಲ್ಲಿ ನಡೆದ ಲೋಕಕಲ್ಯಾಣದ ಕಾರ್ಯಗಳು ಆ ಶತಮಾನವನ್ನು ಶಾಶ್ವತವಾಗಿ ಉಳಿಸುತ್ತವೆ ಎಂದರು.ಅತಿಥಿ ರಂಜಾನ್ ದರ್ಗಾ ಮಾತನಾಡಿ, ಶರಣರು ಆಸೆಯಿಂದ ದೂರ ಉಳಿದಿದ್ದರು. ಹಂಚಿಕೊAಡು ತಿನ್ನುವ ಸಂದೇಶ ಶರಣರದು. ಆಸೆಯೆಂಬುದು ಅರಸಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯ ಎಂಬAತೆ, ನಾನು ದುಡಿದು ಬದುಕುತ್ತೇನೆಂಬ ವಿಶ್ವಾಸ ನಮಗಿರಲಿ ಎಂಬ ಧ್ಯೇಯ ನಮ್ಮದಾಗಬೇಕು ಎಂದು ತಿಳಿಸಿದರು.ಸವಣೂರು ದೊಡ್ಡಹುಣಸೆ ಕಲ್ಮಠದ ಶ್ರೀ ಚನ್ನಬಸವ ಸ್ವಾಮಿಗಳು ಮಾತನಾಡಿದರು. ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಶಿಗ್ಗಾವಿಯ ಶ್ರೀ ಸಂಗನಬಸವ ಸ್ವಾಮಿಗಳು, ಹುಬ್ಬಳ್ಳಿ ಚಂದ್ರಶೇಖರ ಸ್ವಾಮಿಗಳು ವೇದಿಕೆಯಲ್ಲಿದ್ದರು.