ಆಸೆ ಇರಬೇಕು ಆದರೆ ದುರಾಸೆ ಇರಬಾರದು:ಡಾ.ಶಿವಲಿಂಗಯ್ಯಶಾಸ್ತ್ರೀ

ತಾಳಿಕೋಟೆ:ನ.17: ಪುರಾಣ ಪುಣ್ಯಕಥೆಗಳನ್ನು ಕೇಳಬೇಕು ಮಹಾತ್ಮರ ಚರಿತ್ರೆ ರಾಮಾಯಣ, ಮಹಾಭಾರತದಂತಹ ಕಥೆಗಳನ್ನು ಕೇಳಿದರೆ ಸನ್ಮಾರ್ಗದತ್ತ ಸಾಗಲು ಅನುಕೂಲವಾಗಲಿದೆ ಎಂದು ಖ್ಯಾತ ಪ್ರವಚನಕಾರರಾದ ಪೂಜ್ಯಶ್ರೀ ಡಾ.ಶಿವಲಿಂಗಯ್ಯಶಾಸ್ತ್ರೀಗಳು ಪುರಾಣಿಕಮಠ(ಮಸೂತಿ) ಅವರು ನುಡಿದರು.

ಬುಧವಾರರಂದು ಶ್ರೀ ಖಾಸ್ಗತ ಶಿವಯೋಗಿ ಹಾಗೂ ವಿರಕ್ತಶ್ರೀಗಳವರ ಹಾಗೂ ಶ್ರೀ ಮಠದ ಈ ಹಿಂದಿನ ಎಲ್ಲ ಅಜ್ಜಂದಿರ ಕುರಿತು ರಾಜವಾಡೆಯಲ್ಲಿ ಭಕ್ತನ ವೇದಿಕೆಯಲ್ಲಿ ಏರ್ಪಡಿಸಲಾದ ಅಜ್ಜನ ಉತ್ಸವ ಕಾರ್ಯಕ್ರಮದಲ್ಲಿ “ನಿನ್ನ ನೀ ತಿಳಿದುಕೋ’’ ಎಂಬ ವಿಷಯ ಕುರಿತು ಪ್ರವಚನ ನೀಡುತ್ತಿದ್ದ ಅವರು ಮನುಷ್ಯ ಜನ್ಮ ಬಹಳೇ ಪವಿತ್ರವಾಗಿದೆ 84 ಲಕ್ಷ ಜೀವರಾಶಿಗಳಲ್ಲಿ ತಿರುಗಿಬಂದ ಮಾನವ ಜನ್ಮ ಭಗವಂತ ಸೃಷ್ಠಿಮಾಡಿದ ಈ ದೇಹ ಕೊಡುಗೆಯಾಗಿದೆ ಎಂದರು. ಮನುಷ್ಯನಲ್ಲಿ ಸಣ್ಣ ಮನಸ್ಸು ದೊಡ್ಡ ಮನಸ್ಸು ಎಂಬವಗಳಿರುತ್ತವೆ ದುರಾಸೆ ಎಂಬುದು ಒತ್ತಿ ಬಂದಾಗ ಮೃತ್ಯುವೆಂಬುದು ಬರುತ್ತದೆ ಎಂದು ಆಸೆ ಆಸ್ತಿ ಮಾಡಿತು ದುರಾಸೆ ನಾಶ ಮಾಡುತ್ತದೆ ಎಂಬ ಕಥೆಯೊಂದನ್ನು ಹೇಳಿದ ಶಾಸ್ತ್ರೀಗಳು 12 ನೇ ಶತಮಾನದಲ್ಲಿ ಬಸವಣ್ಣನವರ ಅಲ್ಲಮಪ್ರಭುಗಳ ಚನ್ನಬಸವಣ್ಣನವರ ನಡೆನುಡಿಗಳನ್ನು ವಿವರಿಸಿ ಪುರಾಣ ಪ್ರವಚನದಿಂದ ಬುದ್ದಿ ಮತ್ತು ಸಂಸ್ಕಾರ ಬೆಳೆಯುತ್ತದೆ ಸಂಗೀತ ಕೇಳಲು ಪಶು ಪಕ್ಷೀಗಳು ದನಕರುಗಳು ಸಹಿತ ಆನಂದ ಪಡುತ್ತವೆಂದು ಮನುಷ್ಯ ಒಳ್ಳೆಯತನವನ್ನು ಅಪೇಕ್ಷೀಸಬೇಕು ಇರಬಾರದೆಂದ ಅವರು ಮನುಷ್ಯನಿಗೆ ದುಶ್ಚಟ ದಾಸರಾದರೆ ಪರಿವರ್ತನೆ ಆಗುವದು ಬಹಳೇ ಕಠಿಣ ಕಾರಣ ನಿನ್ನ ನೀ ತಿಳಿದುಕೋ ಎಂದರು.

ಇನ್ನೋರ್ವ ಅತಿಥಿ ಮುದ್ದೇಬಿಹಾಳದ ರಥ ಶಿಲ್ಪಿ ಪರಶುರಾಮ ಪವಾರ ಅವರು ಮಾತನಾಡಿ ಕುಟುಂಭ ಅನ್ನುವದು ವ್ಯವಸ್ಥಿತವಾಗಿರಬೇಕು ಅನುಷ್ಯನಿಗೆ ಕಾಯಕವೆಂಬುದು ಬೇಕು ಬಸವಣ್ಣನವರು ಹೇಳಿದಂತೆ ಕಾಯಕದಲ್ಲಿ ಕೈಲಾಸ ಕಾಣಬಹುದೆಂದ ಅವರು ಉದ್ಯಮಮಾಡಬೇಕು ಜೊತೆಗೆ ಬುದ್ದಿ ಇರಬೇಕು ಆವಾಗ ಕೌಶಲ್ಯವೆಂಬುದು ತಾನಾಗಿಯೇ ಬರುತ್ತದೆ ತಂದೆ ತಾಯಿಯ ಸೇವೆ ಮಾಡಬೇಕು ಗುರ ಹಿರಿಯರನ್ನು ಗೌರವದಿಂದ ಕಾಣಬೇಕು ಮಹಾತ್ಮರ ಸಂಘ ಮಾಡಬೇಕೆಂದರು.

ಇನ್ನೋರ್ವ ದೇವರ ಹಿಪ್ಪರಗಿಯ ಶ್ರೀಗಳು ಆಶಿರ್ವಚನ ವಿಯುತ್ತಾ ಖಾಸ್ಗತರು ಭಕ್ತರ ಹಿತದೃಷ್ಠಿಯಿಂದ ಅನೇಕ ನೋವನ್ನು ಆಲಿಸಿದ್ದಾರೆ ಜಾತಿಬೇದವಿಲ್ಲದೇ ಎಲ್ಲರೂ ನನ್ನವರುವೆಂಬ ಭಾವನೆಯೊಂದಿಗೆ ನಡೆದ ಶ್ರೀ ಖಾಸ್ಗತರು ಹಾಗೂ ವಿರಕ್ತಶ್ರೀಗಳು ಸಮಾಜಕ್ಕಾಗಿ ಸರ್ವತೋನ್ಮುಖ ಏಳಿಗೆಗೆ ಶ್ರಮಿಸಿರುವದು ಇಂದಿನ ಈ ಕಾರ್ಯಕ್ರಮವೆ ಕಾರಣವಾಗಿದೆ ಎಂದರು. ಭಗವಂತ ಜ್ಯೋತಿವೆಂಬುದನ್ನು ಕೊಟ್ಟಿದ್ದಾನೆ ಅದನ್ನು ಬೆಳಗಿಸಿದರೆ ಇಡೀ ಜೀವನವೇ ಬೆಳಗುವಂತೆ ಮಾಡುತ್ತದೆ ಜ್ಯೋತಿಗೆ ಪರಮಾತ್ಮನನ್ನು ಸಾಕ್ಷಾತ್ಕಾರ ಮಾಡುವಂತಹ ಶಕ್ತಿ ಇದೆ ಎಂದ ಶ್ರೀಗಳು ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರ ನೀಡಬೇಕು ಸಂಸ್ಕಾರವೆಂಬುದಕ್ಕೆ ಗಮನ ಕೊಡದಿದ್ದರೆ ಮುಂದಿನ ದಿನಮಾನಗಳಲ್ಲಿ ಕಷ್ಟದ ಕಾಲ ಬರಲಿದೆ ಎಂದು ಶ್ರೀಗಳು ಏಚ್ಚರಿಸಿದರು.

ಶ್ರೀ ಖಾಸ್ಗತಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು 5 ದಿನಗಳವರೆಗೆ ಜರುಗಲಿರುವ ಅಜ್ಜನ ಉತ್ಸವ ಕುರಿತು ಹಾಗೂ ನಿನ್ನ ನೀ ತಿಳಿದುಕೋ ವೆಂಬ ಪ್ರವಚನ ಸಾರಾಂಶವನ್ನು ಪ್ರಾಸ್ಥಾವಿಕವಾಗಿ ತಿಳಿಸಿದರು.

ವೇದಿಕೆಯ ಮೇಲೆ ಇದ್ದ ಎರಡು ಕೈ ಇಲ್ಲದ ಬಾಲಕಿ ಪಧವಿದರಳಾಗಿ ಕಾಲಿನಿಂದಲೇ ಬರೆದು ಶೈಕ್ಷಣಿಕ ಕ್ಷೇತ್ರದಲ್ಲಿ ಮುನ್ನುಗ್ಗಿದ ಮೈಲೇಶ್ವರ ಗ್ರಾಮದ ಭಾಗಮ್ಮಳಿಗೆ ಸನ್ಮಾನಿಸಿದರು.

ವೇದಿಕೆಯಲ್ಲಿದ್ದ ಪುರಸಭಾ ಮುಖ್ಯಾಧಿಕಾರಿ ಸುರೇಶ ನಾಯಕ, ಅವರಿಗೆ ಬಪ್ಪರಗಿಯ ಶರಣರಿಗೆ ಅತಿಥಿ ಪರಶುರಾಮ ಪವಾರವರಿಗೆ, ಶ್ರೀಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸಂಗೀತಗಾರರಾದ ದೇವರಾಜ ಯರಕಿಹಾಳ, ಸುರೇಶ ಹೂಗಾರ ಅವರು ಸಂಗೀತ ಸೇವೆ ಸಲ್ಲಿಸಿದರು.