ಆಸೀಸ್ ಮಡಿಲಿಗೆ ಚೊಚ್ಚಲ ಟಿ-20 ಚಾಂಪಿಯನ್ ಪಟ್ಟ

ದುಬೈ, ನ.14- ಟಿ-20 ವಿಶ್ಚಕಪ್ ಟೂರ್ನಿಯ ಲ್ಲಿಂದು ಆಸ್ಟ್ರೇಲಿಯಾ ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿದೆ.‌ ಈ ಮೂಲಕ ಚೊಚ್ಚಲ ಪ್ರಶಸ್ತಿ ಗೆಲ್ಲಬೇಕೆಂಬ ಕನಸು ಕಾಣುತ್ತಿದ್ದ ನ್ಯೂಜಿಲೆಂಡ್ ನ ಕನಸು ನುಚ್ಚುನೂರಾಯಿತು. ಅಲ್ಲದೆ ಕೇನ್ ವಿಲಿಯಮ್ಸ್ ಭರ್ಜರಿ ಆಟ ವ್ಯರ್ಥವಾಯಿತು.
ಇಂದು ನಡೆದ ಫೈನಲ್ ಪಂದ್ಯದಲ್ಲಿ 173 ರನ್ ಗಳ ಗೆಲುವಿನ ಗುರಿಯನ್ನು ಬೆನ್ನಹತ್ತಿದ ಆಸೀಸ್, ಕೇವಲ ಎರಡು ವಿಕೆಟ್ ಕಳೆದುಕೊಂಡು ನ್ಯೂಜಿಲೆಂಡ್ ವಿರುದ್ಧ ಎಂಟು ವಿಕೆಟ್ ಗಳಿಂದ ಭರ್ಜರಿ ಜಯಗಳಿಸಿ ಪ್ರಶಸ್ತಿ ಗೆದ್ದು ಬೀಗಿತು.


ಕೇವಲ ತಂಡದ ಮೊತ್ತ 15 ರನ್ ಗಳಿಸಿದ್ದಾಗ ಆರೋನ್ ಪಿಂಚ್ ಕೇವಲ 5 ರನ್ ಗಳಿಸಿ ನಿರ್ಗಮಿಸಿಸಿ ಮತ್ತೆ‌ ನಿರಾಸೆ ಮೂಡಿಸಿದರು.
ನಂತರ ಜತೆಗೂಡಿದ ಡೇವಿಡ್ ವಾರ್ನರ್ 4 ಬೌಂಡರಿ ಹಾಗೂ ಮೂರು ಸಿಕ್ಸರ್ ಬಾರಿಸಿ 53 ರನ್ ಗಳಿಸಿ ಬೋಲ್ಟ್ ಬೌಲಿಂಗ್ ನಲ್ಲಿ ನಿರ್ಗಮಿಸಿದರು.
ಮಿಚೆಲ್ ಮಾರ್ಷ್ ಮತ್ತು ಮ್ಯಾಕ್ಸ್ ವೆಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 18.5 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡು ಚಾಂಪಿಯನ್ ಪಟ್ಟ ಮುಡಿಗೇರಿಸಿತು.


ಮಾರ್ಷ್ 50 ಎಸೆತಗಳಲ್ಲಿ ಆರು ಬೌಂಡರಿ ನಾಲ್ಕು ಸಿಕ್ಸರ್ ಸಿಡಿಸಿ * 77 ಹಾಗೂ ಮ್ಯಾಕ್ಸ್ ವೆಲ್ 28 ರಬ್ ಗಳಿಸಿ ಔಟಾಗದೆ ಉಳಿದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 172 ರನ್ ಗಳ ಸವಾಲಿನ ಮೊತ್ತ ದಾಖಲಿಸಿತು.
ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಕೇನ್ ವಿಲಿಯಮ್ಸ್ 48 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 10 ಬೌಂಡರಿ ಸಿಡಿಸಿ 85 ರನ್ ಬಾರಿಸಿದ್ದರಿಂದ ತಂಡದ ಮೊತ್ತ 170ರ ಗಡಿ ದಾಟಿಸುವಲ್ಲಿ ನಿರ್ಣಾಯಕ ಪಾತ್ರವಹಸಿದರು.
ಗುಪ್ತಿಲ್ 28, ಗ್ಲೆನ್ ಫಿಲಿಪ್ಸ್ 18 ರನ್ ಗಳಿಸಿ ನಿರ್ಗಮಿಸಿದರು. ನೀಷಮ್13 ಹಾಗೂ ಸೈಫರ್ಟ್ 8 ರನ್ ಗಳಿಸಿ ಅಜೇಯ ರಾಗುಳಿದರು. ಹೇಜಲ್ ವುಡ್ ಮೂರು ಹಾಗೂ ಜಂಪಾ ಒಂದು ವಿಕೆಟ್ ಗಳಿಸಿದರು.