ಆಸೀಸ್ ಬೌಲಿಂಗ್ ದಾಳಿಗೆ ಭಾರತ ಧೂಳಿಪಟ, ಕಾಂಗರೂಳಿಗೆ 10 ವಿಕೆಟ್ ಭರ್ಜರಿ ಜಯ

ವಿಶಾಖಪಟ್ಟಣ, ಮಾ.19-ಮಾರಕ ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲೂ ಮಿಂಚಿದ ಆಸ್ಟ್ರೇಲಿಯಾ, ಭಾರತದ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಮೂರು ಪಂದ್ಯ ಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿ ಸಮಬಲ ಸಾಧಿಸಿದೆ. ಈ ಮೂಲಕ ಮೊದಲ ಪಂದ್ಯದ ಸೋಲಿನ ಸೇಡನ್ನು ತೀರಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ, ಆಸೀಸ್ ಬೌಲಿಂಗ್ ದಾಳಿಗೆ ಧೂಳಿಪಟವಾಯಿತು. ಕೇವಲ 26 ಓವರ್ ಗಳಲ್ಲಿ 117 ರನ್ ಗಳ ಅಲ್ಪಮೊತ್ತಕ್ಕೆ ಕುಸಿಯಿತು.
ಕೊಹ್ಲಿ 31,ಅಕ್ಷರ್ ಪಟೇಲ್ 26,ರವೀಂದ್ರ ಜಡೇಜಾ 16, ರೋಹಿತ್ ಶರ್ಮಾ 13 ರನ್ ಗಳಿಸಿದ್ದನ್ನು ಹೊರತುಪಡಿಸಿ ಉಳಿದ ಆಟಗಾರರು ಎರಡಂಕಿ ತಲುಪಲು ತಿಣುಕಾಡಿ ಪೆವಿಲಿಯನ್ ನತ್ತ ಮುಖಮಾಡಿದರು.
ಭಾರತವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ಸ್ಟಾರ್ಕ್ 5 ವಿಕೆಟ್ ಕಿತ್ತರೆ,ಅಬ್ಬೊಟ್ 3 ಹಾಗೂ ನಾಥನ್ ಎಲ್ಲಿಸ್ ಎರಡು ವಿಕೆಟ್ ಪಡೆದರು.
117 ರನ್ ಗಳ ಗುರಿಯನ್ನು ಕೇವಲ 11 ಓವರ್ ವಿಕೆಟ್ ನಷ್ಟವಿಲ್ಲದೆ 121 ರನ್ ಗಳಿಸಿ
ಸುಲಭ ಜಯ ಸಾಧಿಸಿತು. ಮಿಚಿಲ್ ಮಾರ್ಷ್ 36 ಎಸೆತಗಳಲ್ಲಿ ಆರು ಬೌಂಡರಿ ಆರು ಸಿಕ್ಸರ್ ಬಾರಿಸಿ 66 ಹಾಗೂ 30 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 51 ರನ್ ಗಳಿಸಿ ಅಜೇಯರಾಗುಳಿದರು.
ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಭಾರತ, ಎರಡನೇ ಪಂದ್ಯದಲ್ಲಿ ಹೀನಾಯವಾಗಿ ಸೋತು ತೀವ್ರ ಮುಖಭಂಗ ಅನುಭವಿಸಿದೆ.
ಎರಡೂ ತಂಡಗಳು ಸರಣಿಯಲ್ಲಿ ಸಮಬಲ ಸಾಧಿಸಿರುವ ಹಿನ್ನೆಲೆಯಲ್ಲಿ ಮೂರನೇ ಪಂದ್ಯ ತೀವ್ರ ಕುತೂಹಲ ಕುತೂಹಲ ಕೆರಳಿಸಿದೆ.