ಕಲಬುರಗಿ.ಏ 10: ಪೂಜ್ಯ ಸಂತ ಆಸಾರಾಮ್‍ಜಿ ಅವರ ಕಲಬುರ್ಗಿ ಶಾಖೆಯ ಆಶ್ರಮದಲ್ಲಿ ಪೂಜ್ಯರ ಅವತರಣ ದಿವಸದ ನಿಮಿತ್ಯವಾಗಿ ನಾಳೆ ( ಏ 11) ಅವತರಣ ದಿನವನ್ನು ಆಯೋಜಿಸಲಾಗಿದೆ. ನಗರದ ಮೋಹನ ಲಾಡ್ಜ್ ಮುಂಭಾಗದಲ್ಲಿ ನಿರ್ಮಾಣವಾಗುತ್ತಿರುವ ಆಶ್ರಮದ ಕಟ್ಟಡದಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಬೆಳಗ್ಗೆ 9 ಗಂಟೆಗೆ ಮಹಾ ಮೃತ್ಯುಂಜಯ ಹವನ, 11 ಗಂಟೆಗೆ ಪಾದುಕ ಪೂಜೆ,ಮಧ್ಯಾಹ್ನ 12 ಗಂಟೆಗೆ ಆಸಾರಾಮಾಯಣ ಪಾಠ ಹಾಗೂ ಮಹಾಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಎಸ್.ವೈ ಪಾಟೀಲ್ ತಿಳಿಸಿದ್ದಾರೆ.