
(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.02: ರಂಗಭೂಮಿಯಲ್ಲಿ ವಿದ್ಯಾರ್ಥಿಗಳು, ಕಲಾವಿದರು ಆಸಕ್ತಿಯನ್ನುಹೊಂದಿ ಸಮಯ, ಸಿಸ್ತು ಪಾಲಿಸಿಕೊಂಡರೆ ಮಾತ್ರ ಯಶಸ್ವಿಯಾಗುತ್ತಾರೆಂದು ರಂಗ ನಿರ್ದೇಶಕ ಕೆ.ಜಗದೀಶ್ ಅಭಿಪ್ರಾಯಪಟ್ಟರು.
ಅವರು ನಿನ್ನೆ ಸಂಜೆ ರಂಗ ಜಂಗಮ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಡಿ.ಕಗ್ಗಲ್ ಮತ್ತು
ಭಾರತ ಸಂಸ್ಕೃತಿ ಮಂತ್ರಾಲಯ ಸಹಯೋಗದಲ್ಲಿ ಕರ್ಣಾಟಕ ರಾಜ್ಯೋತ್ಸವ ಪ್ರಯುಕ್ತ 25 ದಿನಗಳ ಕಾಲ ಹಮ್ಮಿಕೊಂಡಿರುವ ರಂಗತರಬೇತಿ ಶಿಬಿರವನ್ನು ನಗರದ ಡಿ.ಆರ್.ಕೆ. ರಂಗಸಿರಿಯ ಬೀ.ಚಿ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಆಂಗಿಕ ಅಭಿನಯವನ್ನು ಹೆಚ್ಚಾಗಿ ಬೆಳೆಸಿಕೊಳ್ಳಬೇಕು ಶಿಬಿರಾರ್ಥಿಗಳು ರಂಗ ತರಬೇತಿ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ವಿದ್ಯಾರ್ಥಿಗಳು ಕಲೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕು
ಶಿಬಿರಾರ್ಥಿಗಳಿಗೆ ಸಮಯ ಪ್ರಜ್ಞ ಬಹಳ ಮುಖ್ಯ ರಂಗಭೂಮಿಯಲ್ಲಿ ಯಾವುದು ಅಸಾಧ್ಯವಲ್ಲ ಬದುಕಿನ ಎಲ್ಲಾ ಭಾವನೆಗಳನ್ನು ನಟನೆಯ ಮೂಲಕ ನಾವು ಮೈಗೂಡಿಸಿಕೊಳ್ಳಲು ಸಾಧ್ಯವಿದೆ ಎಂದು ವಿವಿ ಸಂಘದ ಗ್ರಂಥಪಾಲಕ ಕರಡಕಲ್ ವೀರೇಶ್ ಹೇಳಿದರು.
ಯುವಕರಿಗೆ ಉತ್ತಮವಾದಂತಹ ಅವಕಾಶ ಕಲ್ಪಿಸಲಾಗಿದೆ ಇದನ್ನು ಸದುಪಯೋಗ ಪಡೆದುಕೊಳ್ಳಿ ಶಿಬಿರಾರ್ಥಿಯಾಗಿ ನಾನು ಸಹ ಭಾಗವಹಿಸುತ್ತಿದ್ದೇನೆ ಎಂದು ಉಪನ್ಯಾಸಕ ಎ.ಎಂ.ಪಿ. ವೀರೇಶಯ್ಯನವರು ಹೇಳಿದರು.
ನಂತರ ಜಡೇಶ ಎಮ್ಮಿಗನೂರು,ಹೊನ್ನೂರಸ್ವಾಮಿ, ವಿ ಎಸ್ ಕೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಲಗಶೆಟ್ಟಿ ಜಿಲಾನ್ ಬಾಷಾ, ಕೆ ಜಗದೀಶ್ ಅಣ್ಣಜಿ ಕೃಷ್ಣಾರೆಡ್ಡಿ ಕನ್ನಡ ಗೀತೆಗಳು ನಾಡು ನುಡಿ ಕುರಿತು ಗಾಯನವನ್ನು ಪ್ರಸ್ತುತಪಡಿಸಿದರು. ತರಬೇತಿ ಶಿಬಿರದ ನಿರ್ದೇಶಕ ವಿಷ್ಣು ಹಡಪದ ಹಾಗೂ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.