ಆಷಾಢ ಏಕಾದಶಿ: ಪಂಢರಾಪುರಕ್ಕೆ 2 ವಿಶೇಷ ರೈಲು

ಬೀದರ್:ಜೂ.27: ಇದೇ ತಿಂಗಳು 29 ರಂದು ಇರುವ ಆಷಾಢ ಏಕಾದಶಿಯ ನಿಮಿತ್ಯ, ಬೀದರನಿಂದ ಪಂಢರಾಪೂರಕ್ಕೆ ಇಂದಿನಿಂದ 29ರ ವರೆಗೆ ಎರಡು ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ, ಸಮಸ್ತ ಪಂಢರಿನಾಥನ ಭಕ್ತರು ಈ ವಿಶೇಷ ರೈಲಿನ ಸದೂಪಯೋಗ ಪಡೆದುಕೊಳ್ಳಬೇಕೆಂದು ಕೇಂದ್ರ ಸಚಿವ ಭಗವಂತ ಖೂಬಾ ವಿನಂತಿಸಿದ್ದಾರೆ.

ಮೊದಲನೆ ವಿಶೇಷ ರೈಲು ಇಂದು (ರೈಲು ಸಂಖ್ಯೆ: 07505) ಮಂಗಳವಾರ ಬೆ. 11.00 ಗಂಟೆಗೆ ಅಕೋಲಾದಿಂದ ಹೊರಟು ಹಿಂಗೋಳಿ, ಬಾಸಮತ, ಪರಭಣಿ, ಪರಳಿ ಮೂಲಕ ಭಾಲ್ಕಿಗೆ ರಾತ್ರಿ. 9.30 ಗಂಟೆಗೆ ಹಾಗೂ ಬೀದರಗೆ ರಾತ್ರಿ. 10.05 ಗಂಟೆಗೆ ಬರಲಿದೆ, ಇಲ್ಲಿಂದ ಜಹಿರಾಬಾದ, ವಿಕಾರಾಬಾದ, ಸೇಡಂ, ಚಿತ್ತಾಪೂರ, ಕಲಬುರಗಿ, ಸೊಲ್ಹಾಪೂರ ಮಾರ್ಗವಾಗಿ ಮರುದಿನ ದಿನಾಂಕ: 28-06-2023 ರ ಬೆಳಿಗ್ಗೆ 9.20ಕ್ಕೆ ಪಂಢರಾಪೂರಕ್ಕೆ ತಲುಪಲಿದೆ.

ಇದೇ ರೈಲು (ರೈಲು ಸಂಖ್ಯೆ: 07506) ಅದೇ ದಿನ ದಿನಾಂಕ: 28-06-2023 ರಾತ್ರಿ 9.50ಕ್ಕೆ ಪಂಢರಾಪೂರದಿಂದ ಹೊರಟು, ಬಂದ ಮಾರ್ಗವಾಗಿ ಮರುದಿನ ದಿನಾಂಕ: 29-06-2023ರ ಬೆಳಿಗ್ಗೆ 9.33ಕ್ಕೆ ಬೀದರ ಹಾಗೂ 10.05ಕ್ಕೆ ಭಾಲ್ಕಿಗೆ ತಲುಪಲಿದೆ ಅಲ್ಲಿಂದ ನೇರವಾಗಿ ಸಾಯಂಕಾಲ 7.45ಕ್ಕೆ ಅಕೋಲಾ ತಲುಪಲಿದೆ.

ಎರಡನೆ ವಿಶೇಷ ರೈಲು (ರೈಲು ಸಂಖ್ಯೆ: 07501) , ದಿನಾಂಕ: 28-06-2023 ರಂದು ಬೆಳಿಗ್ಗೆ 11.00 ಗಂಟೆಗೆ ಅದಿಲಾಬಾದನಿಂದ ಹೊರಟು ನಾಂದೇಡ, ಪರಳಿ ವೈಜಿನಾಥ, ಉದಗೀರ ಮೂಲಕ ಭಾಲ್ಕಿಗೆ ರಾತ್ರಿ 9.30 ಹಾಗೂ ಬೀದರಗೆ 10.05 ನಿಮಿಷ್ಯಕ್ಕೆ ಬರಲಿದೆ, ಇಲ್ಲಿಂದ ಸೇಡಂ, ಚಿತ್ತಾಪೂರ, ಕಲಬುರಗಿ, ಸೋಲ್ಹಾಪೂರ ಮಾರ್ಗವಾಗಿ ಮರುದಿನ ದಿನಾಂಕ: 29-06-2023 ರಂದು ಬೆಳಿಗ್ಗೆ 9.20ಕ್ಕೆ ಪಂಢರಾಪೂರಕ್ಕೆ ತಲುಪಲಿದೆ.

ಅದೇ ದಿನ ದಿನಾಂಕ: 29-06-2023 ರಂದು(ರೈಲು ಸಂಖ್ಯೆ: 07502) ರೈಲು ರಾತ್ರಿ. 9.50ಕ್ಕೆ ಪಂಢರಾಪೂರದಿಂದ ಹೊರಟು, ಬಂದ ಮಾರ್ಗವಾಗಿ ಬೀದರಗೆ ಮರುದಿನ ದಿ. 30-06-2023 ರ ಬೆಳಿಗ್ಗೆ 9.30ಕ್ಕೆ ಭಾಲ್ಕಿಗೆ 10.05ಕ್ಕೆ ತಲುಪಲಿದೆ. ಅಲ್ಲಿಂದ ನೇರವಾಗಿ ರಾತ್ರಿ 8.45ಕ್ಕೆ ಅದಿಲಾಬಾದ ತಲುಪಲಿದೆ.

ಈ ಎರಡು ವಿಶೇಷ ರೈಲಿನ ಸದೂಪಯೋಗ ಜನತೆ ಪಡೆದುಕೊಂಡು, ಎಲ್ಲರೂ ಸುರಕ್ಷಿತವಾಗಿ ದೇವರ ದರುಶನ ಪಡೆದುಕೊಂಡು ಬರಬೇಕು, ಎಲ್ಲಿಯೂ ಗಡಿಬಿಡಿ ಮಾಡದೆ, ಶ್ರದ್ಧಾಪೂರ್ವಕವಾಗಿ ಪಂಢರಿನಾಥನ ದರುಶನ ಪಡೆದುಕೊಂಡು ಬರಲು ಕೇಂದ್ರ ಸಚಿವರಾದ ಭಗವಂತ ಖೂಬಾರವರು ಎಲ್ಲಾ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.