ಆಶ್ರಯ ಕಾಲೋನಿ ನಿರ್ಮಾಣಕ್ಕೆ ಸೂಕ್ತ ಸ್ಥಳ ನೀಡಲು ಮನವಿ

ಹರಪನಹಳ್ಳಿ.ಜು.೨೭: ಶಾಸಕ ಜಿ.ಕರುಣಾಕರ ರೆಡ್ಡಿಯವರು ವಿಧಾನಸಭಾ ಕ್ಷೇತ್ರದ ಲಕ್ಷ್ಮೀಪುರ ಗ್ರಾಮ ಪಂಚಾಯಿತಿಯ ಸತ್ತೂರು, ಚೌಡಾಪುರ, ಹೊಸಹಳ್ಳಿ, ಗೊಲ್ಲರಹಟ್ಟಿ ಗ್ರಾಮಗಳಲ್ಲಿ ಜೆ.ಜೆ.ಎಂ ಕಾಮಗಾರಿಗೆ ನೆರವೇರಿಸಿದರು. ಭೂಮಿ ಪೂಜೆ ನಂತರ, ಶಾಸಕರು ಸತ್ತೂರು ಗ್ರಾಮಸ್ಥರ ಕುಂದು ಕೊರತೆಗಳನ್ನು ಆಲಿಸುವ ಸಂದರ್ಭದಲ್ಲಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಕ್ಕೆ ಸರ್ವೇ 36/ಬಿಎ ವಿಸ್ತೀರ್ಣ 7.91 ಸೆಂಟ್ಸ್ ನಷ್ಟು ಸ್ಥಳಾವಕಾಶ ಲಭ್ಯವಾಗಿದ್ದು ಶೀಘ್ರವೇ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಬೇಕು. ಅನೇಕರಿಗೆ ಮನೆಗಳು ಇಲ್ಲ, ನಿವೇಶನವಿಲ್ಲ ಎಂದು ಗ್ರಾಮಸ್ಥರು ಮನವಿ ಮಾಡಿದಾಗ ಆಶ್ರಯ ಕಾಲೋನಿ ನಿರ್ಮಾಣಕ್ಕೆ ಸೂಕ್ತ ಸರ್ಕಾರಿ ಜಾಗವನ್ನು ಹುಡುಕುವಂತೆ ತಹಸೀಲ್ದಾರ್ ಹಾಗೂ ಗ್ರಾಮಲೆಕ್ಕಾಧಿಕಾರಿಗಳಿಗೆ ಸೂಚಿಸಿದರು.ಚೌಡಾಪುರ ಗ್ರಾಮಕ್ಕೆ ಭೇಟಿ ನೀಡಿ ದೇವಸ್ಥಾನಕ್ಕೆ ದೀಪಮಾಲಿ ಕಂಬಕ್ಕೆ ಸಹಾಯಧನ, ಮನೆಗಳನ್ನು ನೀಡುವಂತೆ ಗ್ರಾಮಸ್ಥರು ಕೋರಿದರು, ಪ್ರಯತ್ನ ಮಾಡುವುದಾಗಿ ಹೇಳಿದರುಗೊಲ್ಲರಹಟ್ಟಿ ,ಲಕ್ಷ್ಮಿಪುರ , ಜಂಬುಲಿಂಗನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸರಿಂದ ದೂರು ಸ್ವೀಕರಿಸಿದ ನಂತರ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್, ಬಿಇಒ ಯು.ಬಸವರಾಜ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಜಯಸಿಂಹ, ಜೆಇ ಪ್ರಕಾಶ್ ನಾಯ್ಕ, ಪಿಎಸ್ಐ ಪ್ರಶಾಂತ್, ಶಾಸಕರ ಪುತ್ರ ವಿಷ್ಣುವರ್ಧನ್ ರೆಡ್ಡಿ,ಪಿ.ಟಿ.ಶಿವಾಜಿನಾಯ್ಕ,ಕಣಿವೆಹಳ್ಳಿ ಮಂಜುನಾಥ,ಭಂಗಿ ಚಂದ್ರಪ್ಪ,ಎಂ.ಮಲ್ಲೇಶ್,ಹೇಮಂತನಾಯ್ಕ, ಬಾಗಳಿ ಕೊಟ್ರೇಶಪ್ಪ, ಶಾಸಕರ ಆಪ್ತ ಕಾರ್ಯದರ್ಶಿ ಹೆಚ್.ಎಸ್ ಹೇಮಂತ್ ಕುಮಾರ್, ಸೇರಿದಂತೆ ಇತರರು ಇದ್ದರು.