ಆಶಿಕಿ ಹಾಡು ಅನಾವರಣ..

“ಕ್ವಾಟ್ವೆ” ಚಿತ್ರ ಮಾಡಿ ಗಮನ ಸೆಳೆದಿದ್ದ ಜೆ.ಚಂದ್ರಕಲಾ ನಿರ್ದೇಶನದ ಚಿತ್ರ “ಆಶಿಕಿ”.ಯುವ ಪ್ರತಿಭೆಗಳಾದ ಸಂದೀಪ್, ಪ್ರದೀಪ್ ಮತ್ತು ಐಶ್ವರ್ಯ ಸಿಂಧೋಗಿ ಸುತ್ತ ಸಾಗುವ ತ್ರಿಕೋನ ಕಥೆಯನ್ನು ದೇಶದ ಹಲವು ಕಡೆ ಚಿತ್ರೀಕರಣ ಮಾಡುವ ಮೂಲಕ ಕನ್ನಡಕ್ಕೆ ಉತ್ತಮ ಚಿತ್ರ ನೀಡಲು ಮುಂದಾಗಿದ್ದಾರೆ.

ಹಾಡುಗಳ ಬಿಡುಗಡೆಗೆ ನಟ ಅಜಯ್, ನಿರ್ದೇಶಕ ಚೇತನ್,ಸಂಭಾಷಣಾಗಾರ ಮಾಸ್ತಿ ಸೇರಿದಂತೆ ಹಲವರು ಆಗಮಿಸಿ ಚಿತ್ರಕ್ಕೆ ಒಳ್ಳೆಯದಾಗಲಿ ಎಂದರು.

ಈ ವೇಳೆ ಮಾತಿಗಿಳಿದ ನಿರ್ದೇಶಕಿ ಚಂದ್ರಕಲಾ, ಕಥೆ ಇಷ್ಟಪಡುತ್ತಿದ್ದ ನಾಯಕರು, ನಿರ್ಮಾಪಕರು ನಿರ್ದೇಶಕಿಯಾಗಿ ಅವಕಾಶ ನೀಡಲು ಹಿಂಜರಿಯುತ್ತಿದ್ದರು.ಆ ಸಮಯದಲ್ಲಿ ನನ್ನ ಮೇಲೆ ವಿಶ್ವಾಸವಿಟ್ಟು ಬಂಡವಾಳ ಹಾಕಿದವರು ಚಂದ್ರಶೇಖರ್.

ಚಿತ್ರವನ್ನು 55 ದಿನಗಳ ಕಾಲ ಹಲವು ರಾಜ್ಯಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಮುದ್ದಾದ ಪ್ರೇಮಕಥೆಯನ್ನು ತೆರೆಯ ಮೇಲೆ ಕಟ್ಟಿಕೊಡಲು ಮುಂದಾಗಿದ್ದೇವೆ ಎನ್ನುವ ಮಾಹಿತಿ ಹಂಚಿಕೊಂಡರು.

ನಟ ಸಂದೀಪ್, ಸಿನಮಾ ಪತ್ರಕರ್ತನಾಗಿದ್ದೆ, ನಿರ್ದೇಶಕರು ನಾಯಕನಾಗುವ ಅವಕಾಶ ನೀಡಿದ್ದಾರೆ. ಇಡೀ ತಂಡ ಉತ್ತಮ ಪ್ರಯತ್ನ ಮಾಡಿದ್ದೇವೆ ಎಲ್ಲರ ಸಹಕಾರ ಮತ್ತು ಬೆಂಬಲವಿರಲಿ ಎಂದು ಕೇಳಿಕೊಂಡರು.

ನಟಿ ಐಶ್ವರ್ಯ ಸಿಂಧೋಗಿ, ಚಿತ್ರದ ಕುರಿತು ಮಾತನಾಡುವಾಗ ಒಂದಷ್ಟು ಎಮೋಷನ್‍ಗೆ ಒಳಗಾದರು ನಿರ್ದೇಶಕರು ಸೇರಿ ಇಡೀ ತಂಡ ಸಹಕಾರ ನೀಡಿತ್ತು. ಹೀಗಾಗಿ ಚಿತ್ರ ಚೆನ್ನಾಗಿ ಬಂದಿದೆ. ಹರಸಿ ಹಾರೈಸಿ ಎಂದರು.

ಮತ್ತೊಬ್ಬ ನಟ, ಪ್ರದೀಪ್ ಜಮ್ಮು ಕಾಶ್ಮೀರದಲ್ಲಿ ನೆಗಡಿ, ಜ್ವರ ಬಂದಾಗ ತೆಗೆದುಕೊಂಡ ಔಷಧಿ ಬಗ್ಗೆ ಮಾಹಿತಿ ನೀಡಿದರು. ಸಂಭಾಷಣಕಾರ ಮಾಸ್ತಿ  ಮಾತನಾಡಿ ಪ್ರಶ್ನೆ ಕೇಳುತ್ರಿದ್ದ ಸಂದೀಪ್  ನಾಯಕನಾಗ ಉತ್ತರ ನೀಡಲು ಮುಂದಾಗಿದ್ದಾರೆ. ಅದು ಸಿಹಿ ಆಗಿರಲಿ ಎಂದು ಶುಭ ಹಾರೈಸಿದರು.