ಆಶಾ ಕಾರ್ಯಕರ್ತೆ ಸಾವು.

ಕೂಡ್ಲಿಗಿ.ಏ. 24 : – ಪಟ್ಟಣದ ಆಶಾಕಾರ್ಯಕರ್ತೆಯೊಬ್ಬರು ಇಂದು ಬೆಳಿಗ್ಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸಾವಪ್ಪಿದ ಘಟನೆ ತಿಳಿದಿದೆ.
ಗಂಗಮ್ಮ (38) ಕೂಡ್ಲಿಗಿ ಪಟ್ಟಣದ ಆಶಾಕಾರ್ಯಕರ್ತೆಯಾಗಿದ್ದು ಇವರು ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದಿದ್ದು ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆಂದು ತಿಳಿದ ತಕ್ಷಣ ಸಹದ್ಯೋಗಿ ಆಶಾಕಾರ್ಯಕರ್ತರು ಮತ್ತು ಸಹಾಯಕ ಆರೋಗ್ಯ ಮಹಿಳಾ ಮೇಲ್ವಿಚಾರಕರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮೃತರ ಮನೆಗೆ ಬೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆಂದು ತಿಳಿದಿದೆ.