ಆಶಾ ಕಾರ್ಯಕರ್ತೆಯ ವಜಾ ಆದೇಶ ಹಿಂಪಡೆಯಲು ಆಗ್ರಹ

ಬಳ್ಳಾರಿ ಡಿ 19 :: ನಗರದ ಕೋಟೆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆ ರಾಮಕ್ಕ ಅವರ ವಜಾ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ನಗರದಲ್ಲಿ ನಿನ್ನೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ರಾಮಕ್ಕ ಅವರನ್ನು ನಿಯಮಬಾಹಿರವಾಗಿ ವಜಾ ಮಾಡಲಾಗಿದೆ. ಕರ್ತವ್ಯಲೋಪದ ಕುರಿತು ಮೂರು ಬಾರಿ ನೋಟಿಸ್ ಕೊಡದೇ ಆದೇಶ ಹೊರಡಿಸಲಾಗಿದೆ. ಸಮರ್ಪಕ ವಿಚಾರಣೆಯನ್ನೂ ನಡೆಸಿಲ್ಲ’ ಎಂದು ಸಂಘದ ರಾಜ್ಯ ಕಾರ್ಯದರ್ಶಿ ಡಿ ನಾಗಲಕ್ಷ್ಮಿ ದೂರಿದರು. ಸಂಘದ ಜಿಲ್ಲಾ ಸಲಹೆಗಾರ ಎ.ದೇವದಾಸ್, ಜಿಲ್ಲಾ ಗೌರವಾಧ್ಯಕ್ಷೆ ಎ.ಶಾಂತ, ಕಾರ್ಯದರ್ಶಿ ಗೀತಾ, ರಾಜೇಶ್ವರಿ, ಅಂಬಿಕಾ, ರೇಷ್ಮಾ ನೇತೃತ್ವ ವಹಿಸಿದ್ದರು.