
ಕಲಬುರಗಿ,ಮೇ.23- ಬೆಳವಣಿಗೆ ಕುಂಠಿತ ಮಕ್ಕಳನ್ನು ಸಾಮಾನ್ಯ ಮಕ್ಕಳಂತೆ ಪಾಲನೆ ಮಾಡುವುದು ತುಂಬಾ ಅವಶ್ಯಕವಾಗಿz.É ಅಂತಹ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತವಾದ ಚಟುವಟಿಕೆಗಳನ್ನು ಮಾಡಿಸುವುದರಿಂದ ಮಕ್ಕಳಲ್ಲಿರುವಂತಹ ನ್ಯೂನ್ಯತೆಯ ಪ್ರಾಮಾಣ ಕಡಿಮೆ ಮಾಡಬಹುದು ಹಾಗೂ ಇಂತಹ ಮಕ್ಕಳಿಗೆ ಕುಟುಂಬದಲ್ಲಿಯೇ ಚಟುವಟಿಕೆ ಕಾರ್ಯಗಳು ಪ್ರಾರಂಭವಾಗಬೇಕು ಎಂದು ಸೇವಾ ಸಂಗಮ ಸಂಸ್ಥೆಯ ಶೀಘ್ರ ಪತ್ತೆ ಹಚ್ಚುವಿಕೆ ಮತ್ತು ಆರಂಭಿಕ ಶಿಕ್ಷಣ ಕಾರ್ಯಕ್ರಮದ ಯೋಜನ ನಿರ್ವಾಹಣಅಧಿಕಾರಿ ಸದಾನಂದ ಅಭಿಪ್ರಾಯ ತಿಳಿಸಿದರು.
ನಗರದ ಸೇವಾ ಸಂಗಮ ಸಮಾಜ ಸೇವಾ ಸಂಸ್ಥೆ ಸಭಾಂಗಣದಲಿಸೇವಾ ಸಂಗಮ ಸಂಸ್ಥೆ ಮತ್ತು ಅಜೀಂ ಪ್ರೇಮಜಿ ಪೌಂಡೇಷನ ಸಂಯೋಗದಲ್ಲಿ ಶೀಘ್ರ ಪತ್ತೆ ಹಚ್ಚುವಿಕೆ ಮತ್ತು ಆರಂಭಿಕ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಮತ್ತು ಪಿ.ಎಚ್.ಸಿ.ಓ ರವರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ಬೆಳವಣಿಗೆಯಲ್ಲಿ ಕುಂಠಿತವಿರುವ ಮಕ್ಕಳ ಗುರುತಿಸುವ ಕಾರ್ಯ ಸಮುದಾಯದ ಮೂಲಕ ಆಗಬೇಕು, ಮಕ್ಕಳ ನ್ಯೂನ್ಯತೆ ಗುರುತಿಸಿ ಸೂಕ್ತವಾದ ಚಟುವಟಿಕೆ ಮಾಡುವುದರಿಂದ ಮಕ್ಕಳಲ್ಲಿ ಬದಲಾವಣೆ ಕಾಣಬಹುದು. ಇದರಲ್ಲಿ ಪೋಷಕರಪಾತ್ರ ತುಂಬಾ ಮುಖ್ಯವಾಗಿರುತ್ತದೆ. ಸೇವಾ ಸಂಗಮ ಸಮಾಜ ಸೇವಾ ಸಂಸ್ಥೆ ಕಲಬುರಗಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸೇವೆ ನೀಡುತ್ತಿದೆ.
ಖಾಜಾ ಹುಸೇನ ಮಾತನಾಡುತ್ತಾ 2016ರ ಕಾಯ್ದೆಯ ಬಗ್ಗೆ ವಿವರಿಸುತ್ತಾ ಗರ್ಭೀಣಿಯರು ಉತ್ತಮ ಪೌಷ್ಠಿಕ ಆಹಾರ, ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಅಂಗವಿಕಲತೆ ಬರುವುದಕ್ಕೆ ಯಾವೇಲ್ಲಾ ಕಾರಣಗಳಿವೆ ಎಂದು ತಿಳಿಸುತ್ತಾ ಮಕ್ಕಳಿಗೆ ಪೌಷ್ಠಿಕ ಆಹಾರ ಆರೋಗ್ಯ ತಪಾಸಣೆ ಸರಿಯಾದ ಸಮಯಕ್ಕೆ ದೂರಿಯುವ ಹಾಗೆ ನೋಡಿಕೊಳ್ಳಬೇಕು. ಬೆಳವಣಿಗೆಯಲ್ಲಿ ಕುಂಠಿತವಿರುವ ಮಕ್ಕಳನ್ನು ಸಾಮಾನ್ಯರಂತೆ ಕಾಣಬೇಕು, ಸಭೆ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೋಡಬೇಕು. ವಿಕಲಚೇತನರಿಗೆ ಸಮಾಜದಲ್ಲಿ ಒಳ್ಳೆಯ ಗೌರವ ದೂರಿಯುವ ಹಾಗೆ ಸಮುದಾಯದ ಜನರ ಜವಾಬ್ದಾರಿಯಾಗಿರಬೇಕು.
ಕಾರ್ಯಕ್ರಮದಲ್ಲಿ ಬ್ರದರ್ ಮ್ಯಾಥು, ಎಲ್.ಎಚ್.ವಿ ಮೇಲ್ವಿಚಾರಕಿಯಾದ ನಿರ್ಮಲಾದೇವಿ, ಶೋಭಾ ಭಾಗವಹಿಸಿದರು. ಕಲಬುರಗಿ ನಗರ ಮತ್ತು ಗ್ರಾಮೀಣ ಭಾಗದ 65 ಆಶಾ ಕಾರ್ಯಕರ್ತೆಯರು ಮತ್ತು ಪಿ.ಎಚ್.ಸಿ.ಓ ಭಾಗವಹಿಸಿದರು. ಸೇವಾ ಸಂಗಮ ಸಂಸ್ಥೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದರು. ಶ್ರೀಮತಿ ಜಗದೇವಿ ಸ್ವಾಗತಿಸಿ, ಲಕ್ಷ್ಮೀ ವಂದಿಸಿ ಶಿವಕಾಂತ ನಿರೂಪಿಸಿದರು.