ಆಶಾ ಕಾರ್ಯಕರ್ತೆಯರ ಆನ್‍ಲೈನ್ ಚಳುವಳಿ

ವಾಡಿ:ಮೇ.28: ಆಶಾ ಕಾರ್ಯಕರ್ತೆಯರ ಕೊರೊನಾ ವಾರಿಯರ್ಸ ವಿಶೇಷ ಸೇವೆಗೆ ಪ್ರತಿ ತಿಂಗಳ ವಿಶೇಷಭತ್ಯೆ 5 ಸಾವಿರ, ಕರ್ತವ್ಯ ನಿರ್ವಹಣೆಯಲ್ಲಿ ಸೊಂಕಿತರಾದ ಆಶಾ ಕಾರ್ಯಕರ್ತೆಯರಿಗೆ ಕುಟುಂಬ ಸಶಕ್ತರಾಗಲು 25 ಸಾವಿರ, ಹಾಗೂ ಕೊವೀಡ್ 1ನೇ ಅಲೇಯಲ್ಲಿ ಮೃತರಾದವರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಆಶಾ ಕಾರ್ಯಕರ್ತೆಯರು ಎಐಯುಟಿಯುಸಿ ಕರೆ ನೀಡಿದ ಆನ್‍ಲೈನ್ ಚಳುವಳಿಯಲ್ಲಿ ಭಾಗವಹಿಸಿ ಸರ್ಕಾರದ ಗಮನ ಸೆಳೆದರು.

ವಾಡಿ ಪಟ್ಟಣದಲ್ಲಿ ಸಂಘಟನೆಯ ಮುಖಂಡರು ಹಾಗೂ ಆಶಾ ಕಾರ್ಯಕರ್ತೆಯರು ತಮ್ಮ, ತಮ್ಮ ಮನೆ ಹಾಗೂ ಕೆಲಸದ ಸ್ಥಳದಿಂದಲ್ಲೇ ಹೋರಾಟದಲ್ಲಿ ಭಾಗಿಯಾಗಿ ಭಿತ್ತಿಪತ್ರಗಳನ್ನು, ಪೋಟೊಗಳನ್ನು ಹಿಡಿದುಕೊಂಡು ಮನವಿಗೆ ಸ್ಪಂದಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದರು.

ಸರ್ವೆ ಮಾಡುವುದು, ಮಾತ್ರೆ ಹಂಚುವುದು, ಮಾಹಿತಿ ಅಪ್‍ಡೇಡ್ ಮಾಡುವುದು, ಸೊಂಕಿತರ ಮನೆಗಳಿಗೆ ಕಿಟ್ ನೀಡುವುದು, ಅವರನ್ನು ಶಿಪ್ಟ ಮಾಡುವುದು, ರೋಗ ಹರಡದಂತೆ ಜಾಗೃತರನ್ನಾಗಿ ಮಾಡುವುದು. 2ನೇ ಸಂರ್ಪಕಿತರನ್ನು ಗುರುತಿಸುವುದು. ಸೇರಿದಂತೆ ಸರ್ಕಾರ ಹೆಚ್ಚಿನ ಕೆಲಸ ನೀಡುತ್ತಿದೆ. ಆದರೂ, ಕುಟುಂಬ ಲೆಕ್ಕಿಸದೇ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿದ್ದೆವೆ. ಸರ್ಕಾರಕ್ಕೆ ಮಾತ್ರ ನಮ್ಮ ಗೋಳು ಕೇಳಿಸುತ್ತಿಲ್ಲ. ಅವಶ್ಯಕತೆಗೆ ಅನುಗುಣವಾಗಿ ಮಾಸ್ಕ್, ಸ್ಯಾನಿಟೈಸರ್ ವಿತರಿಸುತ್ತಿಲ್ಲ. ಕಳೆದ ಮೂರು ತಿಂಗಳಿನಿಂದ ವೇತನ ಕೂಡಾ ನೀಡಿರುವುದಿಲ್ಲ ಎಂದು ಆಶಾ ಕಾರ್ಯಕರ್ತೆಯರು ಬೇಸರ ವ್ಯಕ್ತಪಡಿಸಿದರು.

ಆನ್‍ಲೈನ್ ಚಳುವಳಿಯಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಕಾರ್ಯದರ್ಶಿ ಶರಣು ಹೇರೂರ್, ತಾಲ್ಲೂಕ ಅಧ್ಯಕ್ಷೆ ನಾಗಮ್ಮಾ ಕೊಲ್ಲೂರ್, ಆಶಾಗಳಾದ ಸಾವಿತ್ರಿ ಬಟಗೇರಾ, ವಿಜುಬಾಯಿ ರಾಠೋಡ, ರತ್ನಮ್ಮ ಕಟ್ಟಿಮನಿ, ದೇವಮ್ಮಾ ಒಡನಳ್ಳಿ, ಮಲ್ಲಮ್ಮಾ ಪಾಟೀಲ್, ಜ್ಯೋತಿ ಶಾಂಪೂರಹಳ್ಳಿ, ಅನೀತಾ ವಾಡೇಕರ್, ಜಯಶ್ರೀ ಸಿಂಧೆ, ಶಿವಲೀಲಾ ಹಡಪಾದ, ಕವಿತಾ ಕೋರವಾರ್, ರೇಣುಕಾ ದಂಡೋತ್ತಿ, ಸಂತೋಶಿ ರಾವೂರ, ಮಾಣಿಕಮ್ಮಾ, ತಿಪ್ಪಮ್ಮಾ, ಅರುಣಾ, ಮಲ್ಲಮ್ಮಾ, ಆಶಾ ರಾಠೋಡ ಭಾಗವಹಿಸಿದರು.