ಆಶಾ ಕಾರ್ಯಕರ್ತೆಯರಿಗೆ ೩ ತಿಂಗಳ ಸಂಬಳ ನೀಡಿದ ಶಾಸಕ ಗಣೇಶ್

ಬೆಳಗಾವಿ,ಮೇ.೧- ಚಿಕ್ಕೋಡಿ-ಸದಲಗಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಣೇಶ್ ಹುಕ್ಕೇರಿ, ಅವರು ಆಶಾ ಕಾರ್ಯಕರ್ತೆಯರಿಗೆ ತಮ್ಮ ಮೂರು ತಿಂಗಳ ಸಂಬಳ ನೀಡುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಶಾಸಕ ಗಣೇಶ್ ಹುಕ್ಕೇರಿ ಅವರು, ರಾಜ್ಯ ಸರ್ಕಾರ ನನಗೆ ನೀಡುವ ಸಂಬಳದಲ್ಲಿ ಒಂದು ತಿಂಗಳ ಸಂಬಳವನ್ನು ಮುಖ್ಯಮಂತ್ರಿಗಳ ಮನವಿಯಂತೆ ಕೋವಿಡ್ ನಿಧಿಗೆ ನೀಡುತ್ತಿದ್ದೇನೆ. ಅದನ್ನು ಹೊರತು ಪಡಿಸಿ, ಅದರ ಮುಂದಿನ ಮೂರು ತಿಂಗಳ ಸಂಬಳವನ್ನು ನನ್ನ ಕ್ಷೇತ್ರದ ಆಶಾಕಾರ್ಯಕರ್ತೆಯರಿಗೆ ನೀಡಲು ತೀರ್ಮಾನಿಸಿದ್ದೇನೆ.

ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು’ ಎಂದು ಡಿ. ವಿ.ಗುಂಡಪ್ಪನವರು ಹೇಳಿದಂತೆ, ತಮ್ಮ ಪ್ರತಿ ಕೆಲಸವನ್ನು ಅಚ್ಚುಕಟ್ಟಾಗಿ ಮನವಿಟ್ಟು ಮಾಡಿ, ನಮ್ಮ ನಾಡಿನ ಆರೋಗ್ಯ ಹಾಗೂ ನೈರ್ಮಲ್ಯವನ್ನು ಕಾಪಾಡಿಕೊಂಡು ಹೋಗುವಲ್ಲಿ ಬಹು ಮುಖ್ಯ ಪಾತ್ರವನ್ನು ನಿಭಾಯಿಸುತ್ತಿದ್ದಾರೆ ನಮ್ಮ ಆಶಾ ಕಾರ್ಯಕರ್ತೆಯರು. ’ಆಶಾ’ ಪದದ ಅರ್ಥ ’ಭರವಸೆ’(ಊoಠಿe), ಎಂಬುದನ್ನೇನು ನಾನಿಲ್ಲಿ ವಿಶೇಷವಾಗಿ ಹೇಳಬೇಕಿಲ್ಲ. ಕೊರೋನಾ ಮಹಾಮಾರಿಯ ಜೊತೆ ನಾವೆಲ್ಲ ಹೋರಾಡುತ್ತಿರುವ ಅತಿ ಕಷ್ಟದ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ನಮ್ಮ ನಾಡಿಗೆ ಆಶಾಕಿರಣ(ಖಚಿಥಿ oಜಿ hoಠಿe)ವಾಗಿದ್ದಾರೆ ಎಂದರೆ ತಪ್ಪಾಗಲಾರದು.
ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಸಮುದಾಯಕ್ಕೆ ತಿಳಿವಳಿಕೆ ನೀಡುವುದರಿಂದ ಹಿಡಿದು ಕ್ಷೇತ್ರದ ನಾಗರಿಕರಿಗೆಲ್ಲರಿಗೂ ಕೊರೋನಾ ಲಸಿಕೆಯನನ್ನು ಹಾಕಿಸುವವರೆಗೂ ಹಲವಾರು ಜವಾಬ್ದಾರಿಗಳನ್ನು ವಹಿಸುವ ಇವರ ಕಾರ್ಯ ಶ್ಲಾಘನಾರ್ಹ. ಹಾಗಾಗಿ ಈ ಕಾರ್ಯಕರ್ತೆಯರಿಗೆ ನನ್ನಿಂದ ಒಂದು ಪುಟ್ಟ ಕಾಣಿಕೆಯನನ್ನು ಈ ಕಾರ್ಮಿಕ ದಿನದಂದು ನೀಡಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾರೆ.