ಆಶಾ ಕಾರ್ಯಕರ್ತೆಯರಿಗೆ ದಿನಸಿ ಆಹಾರ ಧಾನ್ಯಗಳ ಕಿಟ್ ವಿತರಣೆ

ಮುದ್ದೇಬಿಹಾಳ:ಜೂ.9: ಇಂದು ಕೋರೊನಾ ಲಾಕ್ ಡೌನ್ ದಿಂದಾಗಿ ತೀರಾ ಕಡುಬಡವರು ತಮ್ಮ ಉದ್ಯೋಗ ಕಳೇದುಕೊಂಡು ತೀರಾ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಪುರಸಭೆ ಸದಸ್ಯ ರೀಯಾಜಹಮ್ಮದ ಢವಳಗಿಯವರು ತಮ್ಮ ಕೈಲಾದಷ್ಟು ಕೋರೊನಾ ವಾರಿಯರ್ಸಗಳಿಗೆ ಮತ್ತು ನಿರ್ಗತಿಕ ಕಡು ಬಡ ಕುಟುಂಭಗಳಿಗೆ ದಿನಸಿ ಆಹಾರ ಧಾಣ್ಯಗಳ ಕಿಟ್ ವಿತಯರಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ ಎಂದು ಎನ್ ಎಸ್ ಯೂ ಐ ಜಿಲ್ಲಾ ಅಧ್ಯಕ್ಷ ಸದ್ದಾಂ ಕುಂಟೋಜಿ ಹಾಗೂ ತಾಲೂಕಾ ಯೂಥ್ ಕಾಂಗ್ರೇಸ್ ಘಟಕದ ಅಧ್ಯಕ್ಷ ರಫೀಕ ಶಿರೋಳ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ಎಸ್ ಎಂ ಡಿ ಗ್ರುಪ್ ವತಿಯಿಂದ ಕೊರೋನಾ ವಾರಿಯರ್ಸ್‍ಗಳಾದ ಆಶಾ ಕಾರ್ಯಕರ್ತೆಯರಿಗೆ ದಿನಸಿ ಆಹಾರ ಧಾನ್ಯಗಳ ಕಿಟ್‍ಗಳನ್ನು ಮಂಗಳವಾರ ವಿತರಿಸಿ ಅವರು ಮಾತನಾಡಿದರು.

ಸಧ್ಯ ಕೋರೊನಾ ನಿಯಂತ್ರಿಸುವ ಕೋರೊನಾ ವಾರಿಯರ್ಸಗಳಾಗಿ ಪ್ರತಿ ಮನೆ ಮನೆಗೆ ತೆರಳಿ ಜನರಲ್ಲಿ ಕೋರೊನಾ ಜಾಗೃತಿ ಮೂಡಿಸುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನಿಯ. ಇಂತಹ ಆಶಾ ಕಾರ್ಯಕರ್ತೇಯರಿಗೆ ಸರಕಾರ ಕೇವಲ ಕಡಿಮೆ ಸಂಬಳ ನೀಡುತ್ತಿರುವುದು ಬೇಸರ ಸಂಗತಿ ಈ ಗಲೂ ಕಾಲ ಮಿಂಚಿಲ್ಲ ಕೇವಲ ಅವರಿಗೆ ಸಹಾಯಧನ ದ ಬದಲಾಗಿ ಸುಮಾರು 10 ಸಾವಿರ ಗೌರವಧನ ನೀಡುವ ನೀಡುವ ಗೌರವಿಸಬೇಕು ಎಂದರು.

ಎಸ್ ಎಂ ಡಿ ಗ್ರುಪ್ ಅಧ್ಯಕ್ಷ ಪುರಸಭೆ ಸದಸ್ಯ ರಿಯಾಜಹಮ್ಮದ ಢವಳಗಿ ಯೂಸುಪ್ ನಾಯ್ಕೋಡಿ ಯಾಸೀನ ಬಾಗವಾನ,ದಿಕ್ಷೀತ ದೇಸಾಯಿ,ಬಂದೇನವಾಜ ನಾಯ್ಕೋಡಿ, ರಾಜು ಮುದ್ನಾಳ,ಅಬೂಬ್ಕರ ಹಡಗಲಿ,ನಿಸಾರ ಮಮದಾಪೂರ, ಮೊಶಿನ ಘಾಟಿ, ದಾವಲ್ ಕಾನ್ಯಾಲ,ಮಾನಪ್ಪ ನಾಯಕ,ಜಾಕೀರ ನಾಯ್ಕೋಡಿ,ಮಹಿಬೂಬ ನಾಗರಾಳ,ದಾದ ಮೊಮೀನ,ಯುಸೂಫ ವಾಲಿಕಾರ, ಟಿಪ್ಪು ಮ್ಯಾಗೇರಿ,ಮಕಾನದಾರ ಸೇರಿದಂತೆ ಹಲವರು ಇದ್ದರು.