ಆಶಾ ಕಾರ್ಯಕರ್ತೆಯರಿಗೆ ಕೋವಿಡ್ ಸುರಕ್ಷಾ ಕಿಟ್ಸ್

ಹೊಸಪೇಟೆ ಮಾ31: ಜಿಲ್ಲಾ ಪಂಚಾಯಿತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಶಾ ಕಾರ್ಯಕರ್ತೆಯರಿಗೆ ಕ್ಷೇತ್ರ ಕಾರ್ಯದಲ್ಲಿ ಕೋವಿಡ್ ಸೋಂಕು ತಗುಲದಂತೆ ತಡೆಯಲು ಕೋವಿಡ್ ಸುರಕ್ಷಾ ಕಿಟ್‍ನ್ನು ವಿತರಿಸಲಾಯಿತು.
ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಕಿಟ್‍ಗಳನ್ನು ವಿತರಿಸಿ ಪ್ರತಿಹಂತದಲ್ಲಿಯೂ ಕ್ಷೇತ್ರಕಾರ್ಯದಲ್ಲಿ ನಿರತರಾದ ಕಾರ್ಯಕರ್ತೆಯರು ಸುರಕ್ಷತೆ ಇಲಾಖೆಯ ಹೊಣೆಯಾಗಿದ್ದು ಅದನ್ನು ಸಂರಕ್ಷಿಸಲು ಈ ಸಾಧನಗಳನ್ನು ನೀಡಲಾಗುತ್ತಿದೆ. 286 ಕಾರ್ಯಕರ್ತೆಯರಿಗೆ ಕಿಟ್ ವಿತರಿಸಲಾಗಿದ್ದು ಸಭೆಯಲ್ಲಿ ಕ್ಷೇತ್ರ ಆರೋಗ್ಯಾಧಿಕಾರಿ ಎಂ.ಪಿ.ದೊಡಮನಿ, ತಾಲೂಕು ಪಂಚಾಯಿತ ವ್ಯವಸ್ಥಾಪಕ ನಾಗರಾಜರಾವ್ ಮತ್ತು ಎಂ.ಧರ್ಮನಗೌಡ ಹೆಚ್‍ಐವಿ ಏಡ್ಸ್ ಮೇಲ್ವಿಚಾರಕ ಗಿರೀಶ ಮತ್ತು ವೆಂಕಟೇಶ್, ಆಶಾಮೆಂಟರ್‍ಗ್ರೇಸಿ ಹಾಜರಿದ್ದರು.