ಆಶಾ ಕಾರ್ಯಕರ್ತೆಯರಿಗೆ ಒಂದು ದಿನದ ಆಪ್ತ ಸಮಾಲೋಚನಾ ತರಬೇತಿ

(ಸಂಜೆವಾಣಿ ವಾರ್ತೆ)
ಹುಮನಾಬಾದ್:ಆ.29: ಪಟ್ಟಣದ ಹೊರ ವಲಯದಲ್ಲಿರುವ ಆರ್ಬಿಟ್ ಸೇವಾ ಸಂಸ್ಥೆ ಹಾಗೂ ಅಜೀಂಮ್ ಪ್ರೇಮಜಿ ಫೌಂಡೆಶನ್ ಸಂಯುಕ್ತಾಶ್ರಯದಲ್ಲಿ ಆರ್ಬಿಟ್ ಸಂಸ್ಥೆಯಲ್ಲಿ ಮಾನಸಿಕ ಅಸ್ವಸ್ಥರನ್ನು ಸಮುದಾಯ ಆಧಾರಿತವಾಗಿ ಪೂನರ್ವಸತಿ ಗೋಳಿಸುದಲ್ಲಿ ಆಶಾ ಕಾರ್ಯಕರ್ತೆಯರಿಗೆ ಒಂದು ದಿನದ ಆಪ್ತ-ಸಮಾಲೋಚನಾ ತರಬೇತಿ ಶಿಬಿರ ಜರುಗಿತು.
ಆರ್ಬಿಟ್ ಸಂಸ್ಥೆಯ ಕಾರ್ಯಕ್ರಮಗಳ ವ್ಯವಸ್ಥಾಪಕಿ ಸಿಸ್ಟರ್ ವಿಲ್ಮಾ ಮ್ಯಾಥ್ಯು ಅವರು ಪ್ರಸ್ತವಿಕವಾಗಿ ಮಾತಾಡಿ, ಮಾನಸಿಕ ಅಸ್ವಸ್ಥರು ಸಮುದಾಯದಿಂದ ತಳ್ಳಲ್ಪಟ್ಟವರಾಗಿದ್ದಾರೆ ಅವರನ್ನು ಸಮುದಾಯದಲ್ಲಿ ಪುನರ್ ಚೇತನಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಎ.ಪಿ.ಡಿ ಸಂಸ್ಥೆಯ ಕುಮಾರಿ ಅಲ್ಫಾ ಕ್ಲಿನಿಕಲ್ ಮನಶ್ಯಾಸ್ತ್ರಜÐ ಇವರು ಈ ತರಬೇತಿಯಲ್ಲಿ ಆಶಾ ಕಾರ್ಯಕರ್ತೆಯರು ಆಪ್ತಸಮಾಲೋಚನೆಯಾ ಕೌಶಲ್ಯಗಳನ್ನು ತಿಳಿದುಕೊಂಡು ಸ್ಥಳೀಯ ಮಟ್ಟದಲ್ಲಿ ಆಪ್ತ ಸಮಾಲೋಚನೆ ಮಾಡುವುದರ ಮುಲಕ ಮಾನಸಿಕ ರೋಗವನ್ನು ಗುರುತಿಸಿ ಅವರಿಗೆ ಸಹಾಯ ಮಾಡಬೇಕು ಎಂದು ತಿಳಿಸಿ ಹೇಳಿದರು.
ಈ ತರಬೇತಿಯಲ್ಲಿ ಮುಖ್ಯವಾಗಿ ಮಾನಸಿಕ ಅಸ್ವಸ್ರರ ಲಕ್ಷಣವಾದ ಮಂದ, ಮದ್ಯಮ ಹಾಗೂ ತೀವ್ರ ರೋಗಿಗಳ ಬಗ್ಗೆ ವಿವಿದ ರೀತಿಯ ಚಟುವತಿಕೆಯ ಮುಲಕ ಶಿಬಿರಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ತರಬೇತಿ ನೀಡಿದರು. ಈ ತರಬೇತಿಯಲ್ಲಿ ಒಟ್ಟು 35 ಆಶಾ ಕಾರ್ಯಕರ್ತೆಯರು ಹಾಗೂ ಸಂಸ್ಥೆಯ ಸಿಬ್ಬಂರಿವರ್ಗದವರು, ಇದ್ದರು. ಮಹಾದೇವಿ ಹಾಗೂ ತಂಡದವರು. ಪ್ರಾರ್ಥಿಸಿದರು. ರವಿ ಕೋಡ್ಡಿಕರ್. ಸ್ವಾಗತಿಸಿದರು. ಅರುಣಕುಮಾರ, ಪ್ರೀತಿ ವಂದಿಸಿದರು.