ಆಶಾ ಕಾರ್ಯಕರ್ತೆಯರಿಂದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ

ಬೆಳಗಾವಿ, ಏ2: ಬೆಳಗಾವಿ ಲೋಕಸಭಾ ಉಪ ಚುನಾವಣೆ -2021 ಕುರಿತು ಜಿಲ್ಲಾ ಸ್ವೀಪ್ ಸಮೀತಿ ವತಿಯಿಂದ ಮತದಾರರಿಗೆ ಮತದಾನದ ಜಾಗೃತಿಗಾಗಿ ಗುರುವಾರ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಸುಮಾರು 100 ಜನ ಬೆಳಗಾವಿ ನಗರ ಮತ್ತು ಗ್ರಾಮೀಣ ಆಶಾ ಕಾರ್ಯಕರ್ತೆಯರಿಂದ ಮತದಾನ ಜಾಗೃತಿ ಕುರಿತು ಕಾಲ್ನಡಿಗೆ ಜಾಥಾ ಕಾರ್ಯಕ್ರಮ ನಡೆಯಿತು.
ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿಗಳಾದ ಪಿ.ಬಿ.ದುಡಗುಂಟಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಶಶಿಕಾಂತ ಮುನ್ಯಾಳ ಅವರು ಚಾಲನೆ ನೀಡಿದರು.
ಅನಗೋಳದ ಹರಿ ಮಂದಿರದಿಂದ ಪ್ರಾರಂಭವಾದ ಜಾಥಾ ಗೋವಾವೇಸ್‍ನ ಬಸವೇಶ್ವರ್ ವೃತ್ತದಲ್ಲಿ ಅಂತ್ಯಗೊಂಡಿತು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಡಾ.ಶ್ರೀಕಾಂತ ಸುಣಧೋಳಿ,ಡಾ.ಮಾಸ್ತಿಹೋಳಿ, ಡಾ.ದೊಡವಾಡ, ಡಾ. ಸಂಜೀವ ಡುಮ್ಮಗೋಳ ಮತ್ತು ಬಿ.ಇ.ಓ ರವಿ ಭಜಂತ್ರಿ, ಜಿಲ್ಲಾ ಸ್ವೀಪ್ ಐಕಾನ್ ರಾಘವೇಂದ್ರ ಅನ್ವೇಕರ, ಜಿಲ್ಲಾ ಸ್ವೀಪ್ ಸಮಿತಿ ತಂಡದ ಪಿ.ಪಿ.ದೇಶಪಾಂಡೆ, ಐ.ಡಿ.ಹಿರೇಮಠ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.