ಆಶಾ ಕಾರ್ಯಕರ್ತರ ಕುಂದುಕೊರತೆ ಸಭೆ ನಡೆಸಲು ಒತ್ತಾಯ

ರಾಯಚೂರು. ನ.20.ಆಶಾ ಕಾರ್ಯಕರ್ತರ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕುಂದುಕೊರತೆಗಳ ಸಭೆ ನಡೆಸಲು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘ ಜಿಲ್ಲಾ ಘಟಕದ ವತಿಯಿಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಹೊರಡಿಸಿದ ಸಮುದಾಯ ಪ್ರಕ್ರಿಯೆಗಳ ಮಾರ್ಗಸೂಚಿ 2014ರ ಅನ್ವಯ ಜಿಲ್ಲಾ ಹಾಗೂ ತಾಲೂಕು ಆಶಾ ಕಾರ್ಯಕರ್ತರ ಕುಂದು ಕೊರತೆಗಳ ನಿವಾರಣಾ ಘಟಕಗಳನ್ನು ರಚಿಸಲು ತೀರ್ಮಾನಿಸಿ ಆದೇಶವನ್ನು ಅ.5.2018ರಂದು ಹೊರಡಿಸಿದೆ. ಆದರೂ ಇದುವರೆಗೂ ಯಾವುದೇ ಕುಂದುಕೊರತೆಗಳು ನಡೆದಿಲ್ಲ, ಆದಕಾರಣ ಕೂಡಲೇ ರಾಜ್ಯದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಆಶಾ ಕಾರ್ಯಕರ್ತೆಯರಿಗೆ ಕುಂದುಕೊರತೆ ಸಭೆಗಳನ್ನು ಕರೆದು ಅವರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎನ್.ಎಸ್.ವೀರೇಶ್,ಈರಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.