ಆಶಾ, ಅಂಗನವಾಡಿ ಕಾರ್ಯಕರ್ತೆಯರುಗಳ ಶ್ರಮ ಶ್ಲಾಘನೀಯ

ಕೆ.ಆರ್.ಪೇಟೆ:ಏ:04: ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕಳೆದ ಒಂದು ವರ್ಷದಿಂದಲೂ ಸೋಂಕಿತರನ್ನು ದಾಖಲು ಮಾಡುವುದು, ಹೋ ಐಸೋಲೇಷನ್ ಮಾಡುವುದು, ಕೊರೋನಾ ಸೋಂಕಿತರಿಗೆ ಮಾತ್ರೆ, ಔಷಧಿಗಳ ವಿತರಣೆ ಮಾಡುತ್ತಿದ್ದು ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಪ್ರಭಾರ ಪಿಡಿಓ ಮಲ್ಲೇಗೌಡ(ಕುಮಾರ್) ತಿಳಿಸಿದರು.
ಕೊರೋನಾ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಗ್ರಾ.ಪಂ. ನೌಕರರು ಕೆಲಸ ಮಾಡಬೇಕೆಂಬ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ನರೇಗ ಸಹಾಯಕ ನಿರ್ದೇಶಕರ ಆದೇಶದಂತೆ ತಾಲ್ಲೂಕಿನ ಮುರುಕನಹಳ್ಳಿ ಗ್ರಾಮಪಂಚಾಯಿತಿ ಆವರಣದಲ್ಲಿ ಅಂಗನವಾಡಿ, ಆಶಾ, ವಾಟರ್‍ಮ್ಯಾನ್, ಬಿಲ್‍ಕಲೆಕ್ಟರ್ ಮುಂತಾ ದುವರುಗಳ ಸಭೆಯಲ್ಲಿ ಮಹಾಮಾರಿಯ ನಿಯಂತ್ರಣಕ್ಕೆ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಮಾತನಾಡಿದರು.
ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆ ಯರು ಕಳೆದ ಒಂದು ವರ್ಷದಿಂದಲೂ ಸೋಂಕಿತರನ್ನು ದಾಖಲು ಮಾಡುವುದು, ಹೋ ಐಸೋಲೇಷನ್ ಮಾಡುವುದು, ಗ್ರಾಮದ ಆರೋಗ್ಯಕ್ಕಾಗಿ ಹಲವು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಆರೋಗ್ಯವಂತ ಸಮಾಜದ ನಿರ್ಮಾಣ ಮಾಡಲು ಶ್ರಮಿಸುತ್ತಿದ್ದಾರೆ. ಕೊರೋನಾ ವಾರಿಯರ್ಸ್ ಆಗಿರುವ ಅವರುಗಳ ಆರೋಗ್ಯ ಮುಖ್ಯವಾಗಿದ್ದು ನಿಮ್ಮೆಲ್ಲರ ಸುರಕ್ಷತೆಯ ದೃಷ್ಟಿಯಿಂದ ಕೊರೋನಾ ನಿಯಂತ್ರಿಸಲು ತಳಮಟ್ಟದಿಂದಲೂ ಜನರಿಗೆ ಅರಿವು ಮೂಢಿಸಬೇಕಾಗಿರುವುದರಿಂದ ಗ್ರಾಮಪಂಚಾಯಿತಿ ವ್ಯಾಪ್ತಿಯ ಎಲ್ಲಾ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇಂದಿನಿಂದಲೇ ಮನೆಮನೆ ಭೇಟಿ ನೀಡಿ ಕೊರೋನಾ ಲಸಿಕೆ ಹಾಕಿಸಿಕೊಳ್ಳುವುದು, ಕೊರೋನಾ ಸೋಂಕಿತರಿಗೆ ಮಾತ್ರೆ, ಔಷಧಿಗಳ ವಿತರಣೆ, ಸ್ಯಾನಿಟೈಸ್ ಮಾಡುವಿಕೆ, ಆರೋಗ್ಯ ತಿಳುವಳಿಕೆ ಮುಂತಾದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಾಗಿರುವುದರಿಂದÀ ನಿಮಗೆ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಮುಂತಾದುವುಗಳನ್ನು ವಿತರಿಸಲಾಗುತ್ತಿದೆ.
ಗ್ರಾಮ ಪಂಚಾಯಿತಿಯ ಎಲ್ಲರೂ ತಮ್ಮ ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಅಂಗಡಿ, ಹೋಟೆಲ್, ಡೈರಿ, ಸೊಸೈಟಿ ಮುಂತಾದ ಜನಸಂದಣಿ ಇರುವ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ರೂಪಾಂತರಿ ವೈರಸ್ ಮಾನವನಿಗೆ ಸಾಕಷ್ಟು ಹಾನಿಯನ್ನುಂಟು ಮಾಡುವುದರಿಂದ ಪ್ರತೀ ನಿಮಿಷವೂ ಪ್ರತೀ ಗಂಟೆಯೂ ಎಚ್ಚರವಾಗಿ ಇರಬೇಕು ಎಂದು ತಿಳಿಸಿದರು.
ಗ್ರಾ.ಪಂ. ಅಧ್ಯಕ್ಷ ಧನಂಜಯ, ಸದಸ್ಯ ಕುಮಾರ ಸ್ವಾಮಿ, ಗ್ರಾಮದ ಮುಖಂಡ ಬಾಲಕೃಷ್ಣ, ಗ್ರಾ.ಪಂ.ಸಿಬ್ಬಂಧಿಗಳಾದ ಗಣೇಶ್, ರವಿ, ಶೃತಿ, ಆಶಾ ಕಾರ್ಯಕರ್ತೆಯರುಗಳು ಇದ್ದರು.