ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಸನ್ಮಾನ

ಬಸವಕಲ್ಯಾಣ:ಮೇ.31: ತಾಲೂಕಿನ ಏರಬಾಗ ಗ್ರಾಮದಲ್ಲಿ ಭಾನುವಾರ ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ ಇವರು ಸಸಿ ನೆಡುವ ಜೋತೆ ವಿವಿಧ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಯಶಸ್ವಿ ಏಳು ವರ್ಷ ಪೂರೈಸಿದ ನಿಮಿತ್ಯ ಬಿಜೆಪಿವತಿಯಿಂದ ಸೇವಾ ಹೀ ಸಂಘಟನ್ ಅಡಿಯಲ್ಲಿ ವಿವಿದ ಸೇವಾ ಕಾರ್ಯಕ್ರಮಗಳ ಹಿನ್ನಲೆಯಲ್ಲಿ ಜಿಲ್ಲಾಧ್ಯಕ್ಷ ಮಂಠಾಳಕರ ಇವರು ಏರಬಾಗ ಗ್ರಾಮದಲ್ಲಿ ಮೂರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕೋರೊನಾ ಕಷ್ಟ ಕಾಲದಲ್ಲಿ ಜನಸೇವೆಯಲ್ಲಿ ತೊಡಗಿಸ ಗ್ರಾಮದ ಆಶಾ/ಆಂಗನವಾಡಿ ಕಾರ್ಯಕರ್ತರಿಗೆ ಹಾಗೂ ಗ್ರಾಮ ಪಂಚಾಯತಿಯ ಸಫಾಯಿ ಕರ್ಮಚಾರಿಗಳಿಗೆ ಗೌರವಿಸಿ ಸನ್ಮಾನಿಸಿದರು.

ಗ್ರಾಮದಲ್ಲಿ ಸಾರ್ವಜನಿಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆಯ ಜೋತೆ ಆಯಾ ಗ್ರಾಪಂ ವಾರ್ಡಗಳಲ್ಲಿ ಜನರಿಗೆ ಹಂಚಲು ಮಾಸ್ಕಗಳನ್ನು ಗ್ರಾಪಂ ಸದಸ್ಯರಿಗೆ ಹಸ್ತಾಂತರಿಸಿದರು.

ನಿಮಿತ್ಯ ಮಾತನಾಡಿದ ಇವರು ಕೋವಿಡ್ ಸೋಂಕಿನಿಂದ ಇಡೀ ವಿಶ್ವವೇ ಕಷ್ಟ ಎದುರಿಸುತ್ತಿದ್ದು ಸೋಂಕು ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬಿರಿದ ಹಿನ್ನೆಲಯಲ್ಲಿ ಬಡವರು, ವ್ಯಾಪಾರಿಗಳು, ಕೂಲಿ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದು, ಬಿಜೆಪಿಯು ಈ ನಿಮಿತ್ಯ ಜನರ ಜೋತೆ ಇರುವ ಮೂಲಕ ಸದಾ ಸ್ಪಂದಿಸುತ್ತಿದೆ ಎಂದರು.

ಪ್ರಮುಖರಾದ ಪ್ರಭಾಕರ ನಾಗರಾಳೆ, ಕರಬಸಪ್ಪ ಬಿರಾದಾರ, ಪ್ರಕಾಶ ತಾಳಮಡಗಿ, ಬಾಬುರಾವ ಜಾನವೀರ,ಶಶಿಧರ ಆನಂದಮಠ ಇದ್ದರು.