ಕಲಬುರಗಿ,ಜು 2: ಪರಮಪೂಜ್ಯ ಸಂತ ಆಶಾರಾಮ್‍ಜಿ ಬಾಪೂ ಅವರ ಸಾಧಕ ಭಕ್ತರಿಂದ ನಾಳೆ ( ಜು.3) ಗುರು ಪೂರ್ಣಿಮೆಯ ಪರ್ವದ ಆಯೋಜನೆಯನ್ನು ಎಂಎಸ್‍ಕೆ ಮಿಲ್ ರಸ್ತೆಯಲ್ಲಿರುವ ಸಂತ ಆಶಾ ರಾಮ್ ಜಿ ರವರ ಆಶ್ರಮದ ಹೊಸ ಕಟ್ಟಡದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮವು ಬೆಳಗ್ಗೆ 7 ಗಂಟೆಗೆ ಮಹಾ ಮೃತ್ಯುಂಜಯ ಹವನ ದಿಂದ ಪ್ರಾರಂಭವಾಗಲಿದೆ. ಶಿವಗೀತೆಯ ಪಠಣೆ ಶ್ರೀ ಪಾದುಕಾ ಪೂಜೆ ಆಶಾ ರಾಮಾಯಣ ಪಾಠ ಹಾಗೂ ಸಂತ ಶ್ರೀ ಆಶಾ ರಾಮ್‍ಜಿ ಅವರ ಪ್ರವಚನದ ವಿಡಿಯೋ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷರಾದ ಎಸ್.ವೈ ಪಾಟೀಲ್ ಅವರು ತಿಳಿಸಿದ್ದಾರೆ