ಆಶಾರಾಣಿ ಎಸ್.ಪಾಟೀಲ ಅವರಿಗೆ ಪಿಎಚ್.ಡಿ

ಕಲಬುರಗಿ:ಎ.16: ನಗರದ ಶರಣಬಸವ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ (ಎಕ್ಸ್‍ಕ್ಲೂಸಿವಲಿ ಫಾರ್ ವುಮೆನ್ಸ್) ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಸಹ ಪ್ರಾಧ್ಯಾಪಕಿ ಆಶಾರಾಣಿ ಎಸ್.ಪಾಟೀಲ ಅವರು ಮಂಡಿಸಿದ “ಮಲ್ಟಿಯೂಸರ್ ಡಿಟೆಕ್ಷನ್ ಟೆಕ್ನಿಕ್ ಫಾರ್ ಫೋರ್ತ್ ಆ್ಯಂಡ್ ಫಿಪ್ತ್ ಜನರೇಷನ್ ಮೊಬೈಲ್ ಕಮ್ಯುನಿಕೇಷನ್ ಸಿಸ್ಟ್‍ಮ್” ಮಹಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಇತ್ತೀಚಿಗೆ ನಡೆದ 20ನೇ ಘಟಿಕೋತ್ಸವದಲ್ಲಿ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.

ಪೂಜ್ಯ ದೊಡ್ಡಪ್ಪ ಅಪ್ಪ ಕಾಲೇಜ್ ಆಫ್ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಡಾ. ಗಂಗಾಧರ ಎಸ್.ಬಿರಾದಾರ ಮಾರ್ಗದರ್ಶನ ಮಾಡಿದಾರೆ.