ಆಶಾದೀಪ ಕ್ರಿಕೆಟ್ ಕ್ಲಬ್‌ನ ಯುವಕರ ನೀರುಣಿಸುವ ಕಾರ್ಯ ಶ್ಲಾಘನೀಯ

ಮಾನ್ವಿ,ಏ.೧೩- ಬೇಸಿಗೆಯ ಈ ದಿನಗಳಲ್ಲಿ ವಿವಿಧ ಕಾರ್ಯಗಳಿಗಾಗಿ ಹಳ್ಳಿಗಳಿಂದ ಬರುವ ಜನರಿಗೆ ಉಚಿತವಾಗಿ ನೀರುಣಿಸುವುದು ಪುಣ್ಯದ ಕಾರ್ಯವೆಂದು ವರದಿಗಾರರು ಹಾಗೂ ಜಿಲ್ಲಾ ಕಸಾಪದ ಗೌರವಕಾರ್ಯದರ್ಶಿಗಳಾದ ತಾಯಪ್ಪ ಬಿ ಹೊಸೂರವರು ಹೇಳಿದರು.
ಬುಧುವಾರ ಕೋನಾಪೂರಪೇಟೆಯ ಅಂಬೇಡ್ಕರ ಭವನದ ಹತ್ತಿನ ಆಶಾ ದೀಪ ಕ್ರೀಕೆಟ್ ಕ್ಲಬ್‌ನ ಯುವಕರು ನಿರ್ಮಿಸಿಕೊಂಡ ನೀರಿನ ಅರವಟ್ಟಿಕೆಯನ್ನು ಉದ್ಘಾಟಿಸಿ ಮಾತನಾಡುತ್ತ ಎಲ್ಲಾ ದಾನಗಳಲ್ಲಿ ಅನ್ನದಾನ ಹಾಗೂ ನೀರಿನ ದಾನವು ಶ್ರೇಷ್ಠವಾಗಿದ್ದು ಉರಿಬಿಸಿಲಿನ ಬೇಗೆಯಲ್ಲಿ ಬಾಯಾರಿ ಬಳಲಿದವರಿಗೆ ಉಚಿತವಾಗಿ ನೀರು ನೀಡುತ್ತಿರುವ ಆಶಾದೀಪ ಕ್ರಿಕೆಟ್ ಕ್ಲಬ್‌ನ ಯುವಕರ ಕಾರ್ಯ ಶ್ಲಾಘನೀಯವಾಗಿದ್ದು ತಮ್ಮ-ತಮ್ಮ ವೈಯುಕ್ತಿಕ ಕೆಲಸಗಳಿಗಾಗಿ ಹಳ್ಳಿಗಳಿಂದ ಬರುವ ಜನರಿಗೆ ತಪ್ಪದೇ ನಿರಂತರವಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಕೀಲರಾದ ಉರುಕುಂದ ಜಗ್ಲಿ, ಪ್ರಾಂಶುಪಾಲರಾದ ಬಾಲಪ್ಪ, ದೇವಣ್ಣ, ಸಿಮೋನ್, ಚಿದಾನಂದ ಬುದ್ದಿನ್ನಿ, ಲಕ್ಷ್ಮಣ ಬಳ್ಳಾರಿ, ಬಿ.ರಾಮಚಂದ್ರ, ಉಮೇಶ, ಸುನೀಲ್, ಬಾಲರಾಮ್, ಬಿ.ಉಮೇಶ, ಸೋನು ಬುದ್ದಿನ್ನಿ, ವಿಜಯ, ರಾಜ, ವೀರೇಶ, ವೀರಭದ್ರ ಸೇರಿದಂತೆ ಆಶಾ ದೀಪ ಕ್ರಿಕೇಟ್ ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದರು.