ಆವಿಷ್ಕಾರದ ಮನೋಧರ್ಮವನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕು

ದಾವಣಗೆರೆ.ಮಾ.೨೭- ಶಿಕ್ಷಕ ಮೊದಲೋ ವಿದ್ಯಾರ್ಥಿ ಮೊದಲೋ” ಎಂಬ ಜಿಜ್ಞಾಸೆ ನಿರಂತರವಾಗಿ ಕಾಡುತ್ತಿದೆ ಯಾರು ನಿರಂತರವಾಗಿ ಕಲಿಯುತ್ತಿರುತ್ತಾರೋ ಅವರು ಶಿಕ್ಷಕರೂ ಹೌದು. ವಿದ್ಯಾರ್ಥಿಯೂ ಹೌದು ಎಂದು ನೂತನ ಕಾಲೇಜು ಪ್ರಾಚಾರ್ಯರಾದ ಪ್ರೊ.ಹೆಚ್.ಹಾಲಪ್ಪ ತಿಳಿಸಿದರು. ಅವರಿಂದು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ, ಬೆಂಗಳೂರು, ದಾವಣಗೆರೆ ವಿಜ್ಞಾನ ಕೇಂದ್ರ, ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ಭೌತ ಮತ್ತು ರಸಾಯನಶಾಸ್ತ್ರ ವಿಭಾಗದ ಆಶ್ರಯದಲ್ಲಿ ನಡೆದ “ಜಿಲ್ಲಾ ಮಟ್ಟದ ಗಣಿತ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರಾದವರು ವಿಜ್ಞಾನದ ಕುತೂಹಲ ಕೆರಳಿಸುವ ಮನೋಧರ್ಮವನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕು. ಮನುಷ್ಯನಿಗೆ ಸಹಜವಾಗಿ ಯೋಚನೆಯ ಕಲ್ಪಿಸಿಕೊಡುವವನೇ ನಿಜವಾದ ಶಿಕ್ಷಕ. ಶಿಕ್ಷಕ-ವಿದ್ಯಾರ್ಥಿ, ವಿದ್ಯಾರ್ಥಿ-ಶಿಕ್ಷಕ ಏಕಕಾಲದಲ್ಲಿ ರೂಪಿತರಾಗಿದ್ದಾರೆಯೇ ಎಂಬ ಜಿಜ್ಞಾಸೆ ಕಾಡುತ್ತಿದೆ. ಆದ್ದರಿಂದ ಶಿಕ್ಷಕರು ಶ್ರಮವಹಿಸಿದಲ್ಲಿ ಸುಸಂಸ್ಕೃತ ಮತ್ತು ಸದೃಢ ಸಮಾಜ ಕಟ್ಟಬಹುದೆಂದು ತಿಳಿಸಿದರು.ಆಶಯ ನುಡಿಗಳನ್ನಾಡಿದ ಬಿ.ಐ.ಇ.ಟಿ. ಕಾಲೇಜಿನ ನಿರ್ದೇಶಕರಾದ ಪ್ರೊ. ವೈ.ವೃಷಭೇಂದ್ರಪ್ಪನವರು ಮಾತನಾತನಾಡಿ “ಕಲಿಯುವ ಆಸಕ್ತಿ ಇದ್ದರೆ, ಕಲಿಸುವವರಿಗೂ ಆಸಕ್ತಿ ಬರುತ್ತದೆ”. ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಬದಲಾವಣೆಗಳಾಗಿವೆ. ಇಂತಹ ಸಂದರ್ಭದಲ್ಲಿ ಶಿಕ್ಷಕರ ಅನುಭವಗಳು ಮಕ್ಕಳ ಕಲಿಕೆಯ ದೃಷ್ಟಿಯಿಂದ ಮಹತ್ವ ಪಡೆಯುತ್ತವೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿದ್ದ ಡಯಟ್‌ನ ಉಪನಿರ್ದೇಶಕರಾದ ಶ್ರೀ ಹೆಚ್.ಕೆ. ಲಿಂಗರಾಜು ಮಾತನಾಡಿ ಇಂದಿನ ಪಠ್ಯಕ್ರಮ ಕಠಿಣವಾಗಿದ್ದರೂ ಮಗು ಕೇಂದ್ರಿತವಾಗಿದೆ. ಹೊಸ ಶಿಕ್ಷಣ ನೀತಿಯ ಅಂಶಗಳ ಪರಿಪಾಲನೆಗೆ ಶಿಕ್ಷಕರನ್ನು ಸಜ್ಜುಗೊಳಿಸಲು ಇಂತಹ ಕಾರ್ಯಾಗಾರಗಳು ಅಗತ್ಯವಾಗಿವೆ. ವಾಸ್ತವವಾಗಿ ಶಿಕ್ಷಕರ ಸಂಖ್ಯೆ ಜಾಸ್ತಿ ಇದ್ದರೂ ಪರಿಣಿತರ ಸಂಖ್ಯೆ ಕಡಿಮೆ ಇದೆ. ಈ ಕಾರಣಕ್ಕಾಗಿಯೇ ಶಿಕ್ಷಕರಿಗೆ ತರಬೇತಿಯ ಅಗತ್ಯವೆನಿಸಿದೆ ಎಂದು ತಿಳಿಸಿದರು. ಕರ್ನಾಟಕ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯ ಇಂಜಿನಿಯರ್ ಶ್ರೀಮತಿ ಅಂಜನಿ ಮಾತನಾಡಿ ಒಳ್ಳೆಯ ಪ್ರತಿಭೆ ಇದ್ದು, ತನ್ನ ಪ್ರತಿಭೆಯನ್ನು ಹೊರ ಹಾಕಿದಿದ್ದರೆ ಸಮಾಜಕ್ಕೆ ಉಪಯುಕ್ತವಾಗುವುದಿಲ್ಲ, ಶಿಕ್ಷಕರಾದವರು ಮಕ್ಕಳಲ್ಲಿ ಬೆಳೆಸುವ ಆಸಕ್ತಿ ಮಕ್ಕಳ ಮೇಲೆ ದೀರ್ಘಕಾಲಿಕ ಪರಿಣಾಮ ಬೀರುತ್ತದೆ. ಮಗುವಿಗೆ ಪ್ರೋತ್ಸಾಹ, ಕುತೂಹಲ ಕೆರಳಿಸುವ ಘಟನೆಗಳಿಂದ ಅವರನ್ನು ಜ್ಞಾನದ ಕಡೆ ಕರೆತರಬಹುದೆಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಮೈಸೂರಿನ ಶ್ರೀ ಹೆಚ್.ಎಲ್.ಸತೀಶ್, ಧಾರವಾಡದ ಶ್ರೀ ಸುರೇಶ್ ಕುಲಕರ್ಣಿ, ದಾವಣಗೆರೆಯ ಪ್ರೊ. ಶಿವಾನಂದ ಬಿ. ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಸಾಯನಶಾಸ್ತçದ ಮುಖ್ಯಸ್ಥರಾದ ಡಾ. ಬಿ.ಇ.ಬಸವರಾಜಪ್ಪನವರು ವಹಿಸಿದ್ದರು. ಆರಂಭದಲ್ಲಿ ಸಹಾಯಕ ಪ್ರಾಧ್ಯಾಪಕರಾದ  ನಾಗರಾಜ ಪ್ರಾರ್ಥಿಸಿದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ ಸ್ವಾಗತಿಸಿದರು, ಕಾರ್ಯಕ್ರಮದ ಸಂಚಾಲಕರಾದ ಜೆ. ಪದ್ಮನಾಭ ವಂದಿಸಿದರು.