ಆಳ ಅಧ್ಯಯನದಿಂದ ಯಶಸಾಧ್ಯ


ಧಾರವಾಡ,ಮಾ.10: : ವಿದ್ಯಾರ್ಥಿಗಳು ಅಧ್ಯಯನ ನಿರತರಾದಾಗ ಬೇಸರ ಹಾಗೂ ಜಡತ್ವದಿಂದ ಮುಕ್ತರಾಗಬೇಕು. ಆಳವಾದ ಅಧ್ಯಯನದಿಂದ ಮಾತ್ರ ಪರೀಕ್ಷೆಯಲ್ಲಿಯಶಸ್ಸು ಸಾಧಿಸಬಹುದುಎಂದುಧಾರವಾಡದ ಹೊಂಬೆಳಕು ಪ್ರತಿಷ್ಠಾನದಅಧ್ಯಕ್ಷರಾದಡಾ.ವೀಣಾ ಬಿರಾದಾರಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು, ತಾಲೂಕಿನಉಪ್ಪಿನ ಬೆಟಗೇರಿಎಂ.ಜಿ. ಹಳವೂರ ಉರ್ದು ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ‘ಪರೀಕ್ಷಾಪೂರ್ವ ಸಿದ್ಧತೆ ಹಾಗೂ ಅಧ್ಯಯನದಲ್ಲಿಏಕಾಗ್ರತೆ’ ಕುರಿತುಉಪನ್ಯಾಸ ಹಾಗೂ ಸಂವಾದಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ವಿನಾಕಾರಣ ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಭಯ ಹಾಗೂ ಉದ್ವೇಗ ಪಡಬಾರದು.ಅದು ವಿದ್ಯಾರ್ಥಿಯಲ್ಲಿಯ ಶಕ್ತಿಯನ್ನುಕುಂಠಿಸುತ್ತದೆ. ಹಾರ್ಡವರ್ಕ್ ಬದಲಾಗಿ ವಿದ್ಯಾರ್ಥಿಗಳು ಸ್ಮಾರ್ಟ್‍ವರ್ಕ ಮಾಡುವುದು ಲೇಸು. ನಿಮ್ಮ ಶಕ್ತಿಯ ಬಗ್ಗೆ ನಂಬಿಕೆ ಹಾಗೂ ಆತ್ಮವಿಶ್ವಾಸಇರಬೇಕು.ಪೂರ್ವಸಿದ್ಧತೆ ಚನ್ನಾಗಿದ್ದರೆ ಮಾತ್ರ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯ.ಪುನರಾವರ್ತನೆಯಿಂದ ವಿಷಯದಗ್ರಹಿಕೆ ಹೆಚ್ಚುವುದುಎಂದರು.
ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ವಿದ್ಯಾರ್ಥಿಗಳು ಸಿಕ್ಕ ಸಮಯವನ್ನು ಸದುಪಯೋಗಪಡಿಸಿಕೊಂಡು ಅಧ್ಯಯನ ಮಾಡಬೇಕು.ಸಾಧನೆ ಮಾಡಲುಛಲ ಮತ್ತುಆತ್ಮವಿಶ್ವಾಸ ಮುಖ್ಯ.ಚಂಚಲ ಚಿತ್ತವಾದ ಮನಸ್ಸನ್ನು ಒಮ್ಮುಖಗೊಳಿಸಿ ಅಧ್ಯಯನ ನಿರತರಾಗಬೇಕು.ನಿಮಗಾಗಿ ಏನೆಲ್ಲಾತ್ಯಾಗ ಮಾಡುತ್ತಿರುವ ಶಾಲಾ ಆಡಳಿತ ಮಂಡಳಿ, ಗುರುಗಳು ಹಾಗೂ ತಂದೆ-ತಾಯಿಗಳ ಶ್ರಮ ಸಾರ್ಥಕವಾಗುವಂತೆಅಧ್ಯಯನ ಮಾಡಬೇಕುಎಂದು ತಿಳಿಸಿದರು.
ಆಝಾದಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಅಬ್ದುಲ್‍ರಹಮಾನ್‍ಜೋರಮ್ಮನವರಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವುಗ್ರಾಮೀಣ ಮಕ್ಕಳಿಗಾಗಿ ಆಯೋಜಿಸಿದ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಕ್ರಮವುಅಭಿನಂದನೀಯ.ನಿರ್ದಿಷ್ಟಗುರಿಯೊಂದಿಗೆ ಗುರುಗಳ ಮಾರ್ಗದರ್ಶನದಲ್ಲಿಯಶಸ್ಸು ನಿಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದರು.
ಆಝಾದಎಜ್ಯುಕೇಶನ್ ಸೊಸೈಟಿಯ ಪದಾಧಿಕಾರಿಅಜೀಂಕರಡಿಗುಡ್ಡಅಧ್ಯಕ್ಷತೆ ವಹಿಸಿದ್ದರು.ಡೈಟ್ ನಿವೃತ್ತ ಶಿಕ್ಷಕ ಜಮೀಲ್‍ಅಹಮ್ಮದ ದಿಲಶಾದ್, ಪತ್ರಕರ್ತ ಚನಬಸಪ್ಪ ಲಗಮಣ್ಣವರ, ಪ್ರೊ. ವೀರನಗೌಡ ಮರಿಗೌಡ್ರ, ಮಹಮ್ಮದ ಮುನ್ನಾಸಾಹೇಬ ವೇದಿಕೆಯಲ್ಲಿದ್ದು ಮಾತನಾಡಿದರು.
ಪ್ರಾರಂಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಮುಖ್ಯಾಧ್ಯಾಪಕರಾದ ವಾಯ್.ಎಚ್.ಜೋರಮ್ಮನವರ ಸ್ವಾಗತಿಸಿದರು. ಕ.ವಿ.ವ. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣಒಡ್ಡೀಣ ಪ್ರಾಸ್ತಾವಿಕವಾಗಿ ಮಾತನಾಡಿದರು.ಎ.ಎ. ಕಿಲ್ಲೇದಾರ ನಿರೂಪಿಸಿದರು.ಎಂ.ಎಂ. ಕೊಹಲಿ ವಂದಿಸಿದರು.
ಕಾರ್ಯಕ್ರಮದಲ್ಲಿ ಎಂ.ಎ.ಅಥಣಿ, ಎ.ಎಂ. ಪೀರಜಾದೆ, ನಜೀಮಾಅತ್ತಾರ, ಆರ್.ಎಸ್. ಸನದಿ, ಎಂ.ಎಸ್. ಸೌದಾಗಾರ, ಸಭಾರೇಶಮವಾಲೆ ಸೇರಿದಂತೆ ವಿದ್ಯಾರ್ಥಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.