ಆಳಂದ ಹನುಮಾನ ಜಾತ್ರೆ ರದ್ದು

ಆಳಂದ :ಎ.24:ಕೊರೊನಾ ಹಾವಳಿ ತಿವ್ರಗತಿಯಲ್ಲಿ ಹರಡುತ್ತಿರುವ ಹಿನ್ನೇಲೆಯಲ್ಲಿ ಆಳಂದ ಪಟ್ಟಣದ ದೇವತಾ ಹನುಮಾನ ಜಾತ್ರೆಯನ್ನು ರದ್ದು ಪಡಿಸಲು ಸಭೆಯಲ್ಲಿ ತಿರ್ಮಾನಸಲಾಯಿತು. ಈ ಕುರಿತು ದೇವಸ್ಥಾನದ ಕಚೇರಿಯಲ್ಲಿ ಕಂದಾಯ ನೀರಿಕ್ಷಕ ಶರಣಬಸಪ್ಪ ಅಕ್ಕಿ ನೇತೃತ್ವದಲ್ಲಿ ನಡೆದ ಸಭೇಯಲ್ಲಿ ತಿರ್ಮಾನಿಸಲಾಯಿತು.ಕೊವಿಡ್ 19 ವ್ಯಾಪಕವಾಘಿ ಹರಡುತ್ತಿರುವುದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಇದರ ನಿಯಂತ್ರಣಕ್ಕಾಗಿ 144 ಕಲಂ ಜಾರಿಗೊಳಿಸಿದ್ದಾರೆ ಮತ್ತು ಜಿಲ್ಲೆಯ ಎಲ್ಲ ಜಾತ್ರೆ ರಥೋತ್ಸವ ಆಚರಿಸದಂತೆ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಎಲ್ಲರ ಸರಕಾರಿ ಆದೇಶ ಪಾಲಿಸಿ ಸಹಕರಿಸಬೇಕು ಎಂದರು. ಈ ಸಂದರ್ಬದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಅಂಬಾದಾಸ ಪವಾರ ಬೀಮಾಶಂಕರ ಕುಂಬಾರ ಪರಸಭೆ ಸದಸ್ಯ ಶ್ರೀಶೈಲ ಪಾಟೀಲ ಮುಖಂಡ ಮಹಾಂತೇಶ ಡೊಳ್ಳೆ ಹಣಮಂತರಾವ ಪಾಟಿಲ ಸಂತೋಷ ವಾಲೆ ಇತರರು ಇದ್ದರು.