ಆಳಂದ ಮಹಾಂತೇಶ್ವರ ಮಠದ ಡಾ. ಚನ್ನಬಸವರ ಪಟ್ಟಾಧಿಕಾರಕ್ಕೆ ಸಿದ್ಧತೆ

??

ಆಳಂದ: ನ.19:ಸ್ಥಳೀಯ ಮಹಾಂತೇಶ್ವರ ಸಂಸ್ಥಾನ ಹಿರೇಮಠಕ್ಕೆ ನಿಯೋಜಿತ ಉತ್ತರಾಧಿಕಾರಿ ಆಗಿರುವ ಡಾ| ಚನ್ನಬಸವ ದೇವರ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮ ನಂದವಾಗಿ ಗ್ರಾಮದ ಶಾಖಾ ಮಠದಲ್ಲಿ ಫೆ. 1ರಿಂದ 3ವರೆಗೆ ಮೂರು ದಿನಗಳ ಕಾಲ ಧಾರ್ಮಿಕ, ಸಂಸ್ಕøತಿ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಯಲಿವೆ.

ಈ ಕುರಿತು ಪಟ್ಟಣದ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಪೀಠಾಧಿಪತಿ ಶ್ರೀ ಮಹಾಂತಲಿಂಗ ಶಿವಾಚಾರ್ಯರು ಸಾನ್ನಿಧ್ಯದಲ್ಲಿ ಶುಕ್ರವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಪ್ರಕಟಿಸಲಾಯಿತು.

ಈ ಪ್ರಯುಕ್ತ ನಂದವಾಡಿ ಮಠದಲ್ಲಿ ಪುರಾಣ, ಪ್ರವಚನ ಕಾರ್ಯಕ್ರಮ ಉಚಿತ ಸಾಮೂಹಿಕ ವಿವಾಹಮ ಮುತ್ತೈದೆಯರಿಗೆ ಉಡಿ ತುಂಬುವುದು, ಉಚಿತ ಆರೋಗ್ಯ ತಪಾಸಣೆ, ಹಿರಿಯ ಶ್ರೀಗಳಿಗೆ ರಕ್ತದಾನ ತುಲಾಭಾರ, ನೇತೃದಾನ ಜಾಗೃತಿ, ಅಯ್ಯಾಚಾರ-ದೀಕ್ಷೆ ಸೇರಿದಂತೆ ಇನ್ನಿತರ ಕಾರ್ಯಕ್ರಮ ಸಿದ್ಧತೆ ಭರದಿಂದ ನಡೆದಿದೆ ಎಂದು ಸಭೆಯಲ್ಲಿ ಪ್ರಮುಖರು ವಿವರಿಸಿದರು.

ಸಮಾರಂಭಕ್ಕೆ ರಂಭಾಪುರು ಜಗದ್ಗುರುಗಳು, ಸುತ್ತೂರ ಮಠದ ಶ್ರೀಗಳು, ಜಿಡಗಾ ಮುಗಳಖೋಡ ಮಠದ ಡಾ| ಮುರುಘರಾಜೇಂದ್ರ ಶ್ರೀಗಳು ಸೇರಿದಂತೆ ನೂರಕ್ಕೂ ಹೆಚ್ಚು ಮಠಾಧೀಶರು, ಶಾಸಕರು, ಸಚಿವರು ಮತ್ತು ರಾಜಕೀಯ ದುರೀರಣರು ಶ್ರೀಮಠದ ಭಕ್ತಾದಿಗಳು ಭಾಗವಹಿಸಲಿದ್ದಾರೆ.

ಜನವರಿ 10ರಿಂದ 31ರವರೆಗೆ ಪುರಾಣ ನಡೆಯಲಿದೆ. ಫೆ.1ರಂದು ಪೀಠಾಧಿಪತಿ ಶ್ರೀ ಮಹಾಂತಲಿಂಗ ಶಿವಾಚಾರ್ಯರು ಅವರ ಸಹಸ್ರ ಚಂದದರ್ಶನ 2ಸಾವಿರ ಮುತ್ತೈದೆಯರ ಉಡಿತುಂಬುವ ಕಾರ್ಯಕ್ರಮ ನಡೆಯಲಿದೆ.

ಫೆ. 2ರಂದು 50 ಜೋಡಿಗೆ ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆಯ ನಡೆಯಲಿದೆ. ಫೆ. 3ರಂದು ರಂಭಾಪುರಿ ಜದ್ಗುರುಗಳ ಸಾನ್ನಿಧ್ಯದಲ್ಲಿ ಹರ, ಗುರು ಚರಮೂರ್ತಿಗಳ ಸಮ್ಮುಖದಲ್ಲಿ ಡಾ| ಚನ್ನಬಸವ ದೇವರಿಗೆ ಗುರು ಪಟ್ಟಾಧಿಕಾರ ಮಹೋತ್ಸವ ನಡೆಯಲಿದೆ. ಈ ಪ್ರಯುಕ್ತ ಶ್ರೀಮಠದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶ್ರೀಮಠದ ಪೂಜ್ಯರು ಸಭೆಯಲ್ಲಿ ಹೇಳಿದರು.

ಕಾರ್ಯಕ್ರದಲ್ಲಿ ಸರ್ವರು ಪಾಲ್ಗೊಂಡು ಯಶಸ್ವಿಗೊಳಿಸೋಣಾ ಎಂದು ಪುರಸಭೆ ಸದಸ್ಯ ಶ್ರೀಶೈಲ ಪಾಟೀಲ, ಮಹಾಂತೇಶ ಡೊಳ್ಳೆ, ಶರಣು ಬಿ. ಕುಂಬಾರ, ಮಲ್ಲಿಕಾರ್ಜುನ ಬುಕ್ಕೆ, ಶಿವಲಿಂಗಯ್ಯಾ ಸ್ವಾಮಿ ಹೆಬಳಿ ಮತ್ತಿತರು ಮಾತನಾಡಿದರು. ಸಭೆಯಲ್ಲಿ ಅನೇಕ ಭಕ್ತರು ಪಾಲ್ಗೊಂಡಿದ್ದರು.