ಆಳಂದ ಮಠದ ಹೆಸರು ಬಳಸಿ ಕೇದಾರ ದೇವರ ಪಟ್ಟಾಧಿಕಾರಕ್ಕೆ ಭಕ್ತರ ಆಕ್ಷೇಪ

ಆಳಂದ: ನ.19: ಪಟ್ಟಣದ ಸಂಸ್ಥಾನ ಹಿರೇಮಠದಲ್ಲಿ ಪೀಠಾಧಿಪತಿ ಸಿದ್ದೇಶ್ವರ ಶಿವಾಚಾರ್ಯರ ಸಮ್ಮುಖದಲ್ಲಿ ಭಕ್ತರು ಸಭೆ ನಡೆಸಿದರು. ಲಿಂಗೈಕ್ಯ ಸಿದ್ಧಲಿಂಗ ಶಿವಾಚಾರ್ಯರು ತಮ್ಮ ಜೀವಿತಾವದಿಯಲ್ಲಿಯೇ ಅಫಜಲಪೂರ ತಾಲೂಕಿನ ಮಾಶಾಳ ಗ್ರಾಮದಲ್ಲಿ ಆಳಂದ ಸಂಸ್ಥಾನ ಶಾಖಾ ಮಠವನ್ನು ಅಭಿವೃದ್ಧಿಪಡಿಸಿದರು. ಮತ್ತು ಆಳಂದ ಸಂಸ್ಥಾನ ಹಿರೇಮಠಕ್ಕೆ ಉತ್ತರಾಧಿಕಾರಿಯಾಗಿ ಸಿದ್ದೇಶ್ವರ ಶಿವಾಚಾರ್ಯರನ್ನು ಉಜ್ಜಯಿನಿ ಪಂಚಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ನೇತ್ರತ್ವದಲ್ಲಿ ಹಾಗೂ ಪೂಜ್ಯ ಗುರುಗಳ ಸಮ್ಮುಖದಲ್ಲಿಯೇ 26 ನವ್ಹೆಂಬರ 2015 ರಂದು ಪಟ್ಟಾಧಿಕಾರ ಮಾಡಲಾಗಿದೆ.

ಆದರೆ ಆಳಂದ ಭಕ್ತರ ಗಮನಕ್ಕೆ ತರದೆ ಮಾಶಾಳ ಸಂಸ್ಥಾನ ಶಾಖಾ ಮಠಕ್ಕೆ ಕೇದಾರ ದೇವರ ಪಟ್ಟಾಧಿಕಾರಕ್ಕೆ ಮುಂದಾಗಿರುವದಕ್ಕೆ ಭಕ್ತರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಪಟ್ಟಾಧಿಕಾರಕ್ಕೆ ವಿರೋಧವಿಲ್ಲ ಆದರೆ ಆಳಂದ ಸಂಸ್ಥಾನ ಹಿರೇಮಠ ಹೆಸರಿನ ಮೇಲೆ ಹಾಗೂ ಹಿಂದಿನ ಗುರುಗಳ ಭಾವಚಿತ್ರ ಬಳಸಿ ಮೂಲ ಸಂಸ್ಥಾನ ಹಿರೇಮಠದ ಪೀಠಾಧಿಪತಿಗಳ ಗಮನಕ್ಕೆ ತರದೆ ಇರುವದಕ್ಕೆ ಸೇರಿದ ಭಕ್ತರು ತಮ್ಮ ಆಕ್ಷೇಪ ವ್ಯಕ್ತಪಡಿಸಿದರು.

ಪ್ರಮುಖರಾದ ಶಿವಯ್ಯ ಸ್ವಾಮಿ, ಶಿವಲಿಂಗಯ್ಯ ಸ್ವಾಮಿ, ಗಂಗಾಧರಯ್ಯ ಸ್ವಾಮಿ, ಸಿದ್ಧಲಿಂಗಯ್ಯ ಸ್ವಾಮಿ, ಎಪಿಎಂಸಿ ಮಾಜಿ ಸದಸ್ಯ ರೇವಣಸಿದ್ದಪ್ಪ ನಾಗೂರೆ, ಪುರಸಭೆ ಸದಸ್ಯ ಶ್ರೀಶೈಲ್ ಪಾಟೀಲ್, ಸೋಮಶೇಖರ ಹತ್ತರಕಿ, ವಕೀಲ್ ಸಂಘದ ಮಾಜಿ ಅಧ್ಯಕ್ಷ ಬಾಬಾಸಾಹೇಬ ಪಾಟೀಲ್, ಬಸವ ಸೇನಾ ಸಂಸ್ಥಾಪಕ ಲಿಂಗರಾಜ ಪಾಟೀಲ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಮಾಜದ ಮುಖಂಡರಾದ ಸಿ.ಕೆ.ಪಾಟೀಲ್, ನಿಜಲಿಂಗಪ್ಪ ಕೋರಳ್ಳಿ, ಬಸವರಾಜ ಪಾಟೀಲ್, ಭೀಮಾಶಂಕರ ಕುಂಬಾರ, ಸಂಗನಬಸಪ್ಪ ಪಾಟೀಲ್, ಚಂದ್ರಶೇಖರ ಹತ್ತಿ, ಮಹಾದೇವಪ್ಪ ಪಾಟೀಲ್, ಬಾಬುರಾವ ಬನಶಟ್ಟಿ, ವಿಠ್ಠಲರಾವ ತಡಕಲೆ, ಶಿವಪುತ್ರಪ್ಪ ಮಂಠಾಳೆ, ಬಾಬುರಾವ ಹತ್ತಿ, ಮಹಾಂತೇಶ ಡೋಳ್ಳೆ, ಸಂಗಮೇಶ ಸಜ್ಜನ್, ದಿನೇಶ ಪಾಟೀಲ್, ಬಸವರಾಜ ಕೋಡ್ಲೆ, ಮಲ್ಲಿನಾಥ ಹತ್ತರಕಿ, ಹಣಮಂತರಾವ ಪಾಟೀಲ್ ಸೇರಿದಂತೆ ಶ್ರೀಮಠದ ಭಕ್ತರು ಪಾಲ್ಗೊಂಡಿದರು.