ಆಳಂದ ಬಡಾವಣೆಗಳಲ್ಲಿ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಚಾಲನೆ

ಆಳಂದ:ಜ.20: ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಈ ಅವಧಿಯಲ್ಲಿ 1600 ಕೋಟಿಗೂ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.

ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ ಇಲಾಖೆಯಿಂದ ಮಂಜೂರಾದ 3 ಕೋಟಿ ರೂಪಾಯಿ ವೆಚ್ಚದ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗಳ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.

ಆಳಂದ ಪಟ್ಟಣಕ್ಕೆ ಮೂಲಭೂತ ಸೌಲಭ್ಯ ಒದಗಿಸಲು ಅನುದಾನ ನೀಡಿದ್ದೇನೆ ಅಲ್ಲದೇ ಪಟ್ಟಣಕ್ಕೆ ನಿರಂತರ ನೀರು ಒದಗಿಸುವ ಯೋಜನೆಯ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

ಧಾರ್ಮಿಕ ಕ್ಷೇತ್ರದಲ್ಲಿ ನನ್ನ ಅನುದಾನದ ಬಹುಪಾಲು ನೀಡಿದ್ದೇನೆ. ನಮ್ಮೆಲ್ಲರ ಏಳಿಗೆಗೆ ಕಾರಣವಾದ, ನಮಗೆ ಸಕಾಲಕ್ಕೆ ಮಾರ್ಗದರ್ಶನ ಮಾಡುವ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ಬಹಳ ಜನರ ನಂಬಿಕೆಯ ಆಧ್ಯಾತ್ಮ ಕೇಂದ್ರಗಳಾದ ಮಠ, ಮಂದಿರ, ಗುಡಿ ಮತ್ತು ಗುಂಡಾರಗಳಿಗೆ ಮತಕ್ಷೇತ್ರದ ಇತಿಹಾಸದಲ್ಲಿಯೇ ಐತಿಹಾಸಿಕ ಎನ್ನುವಂತೆ ಹೆಚ್ಚು ಅನುದಾನ ನೀಡಿ ದೇವಸ್ಥಾನಗಳ ಹಾಗೂ ಮಠ ಮಾನ್ಯಗಳ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಲಾಗಿದೆ. ಈ ಮಠಗಳು ಎಲ್ಲ ಸಮಾಜದ ಎಲ್ಲ ವರ್ಗಗಳಿಗೆ ಸೇರಿದ ಮಠಗಳಾಗಿವೆ ಎಂದು ಹೇಳಿದರು.

ಜಿಪಂ ಕಿರಿಯ ಅಭಿಯಂತರ ಸಂದೀಪ, ಗುತ್ತಿಗೆದಾರÀ ಬಸವರಾಜ ಕೆರೂರ, ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ, ಮಾಜಿ ಅಧ್ಯಕ್ಷ ವಿಠ್ಠಲರಾವ ಪಾಟೀಲ, ಸದಸ್ಯ ಸೋಮಶೇಖರ ಹತ್ತರಕಿ, ಸಂತೋಷ ಹೂಗಾರ, ಮುಖಂಡ ಚನ್ನು ಪಾಟೀಲ, ಶ್ರೀಮಂತ ನಾಮಣೆ, ಯುವರಾಜ ಹತ್ತರಕಿ, ಮುರಳೀಧರ ಏಕಬೋಟೆ, ಚಕ್ರಪಾಣಿ ಸುರೆ, ಶೇಖರ ಶಹಾ, ಅರುಣ ಜೋಶಿ, ಕಾಂತು ಗುತ್ತೇದಾರ, ಉಸ್ಮಾನ ಸುತಾರ, ತುಳಸಿರಾಮ, ತುಕ್ಕಪ್ಪ, ಅಂಬರೀಷ, ದಿಲೀಪ ಶಿಂಧೆ, ಮಲ್ಲು ಧಾಬಾ, ಈಶ್ವರ ಕಮಲಾಪುರ, ಭೀಮಾ ಭಾಸಗಿ, ವಿಜಯಕುಮಾರ ಕೊಥಳಿಕರ, ಮಲ್ಲಿಕಾರ್ಜುನ ತುಕಾಣೆ, ಕಲ್ಯಾಣಿ ಸಾವಳಗಿ, ಅಪ್ಪಾಸಾಬ ಬಿರಾದಾರ, ಪರಶುರಾಮ ಪೂಜಾರಿ ಮತ್ತಿತರು ಉಪಸ್ಥಿತರಿದ್ದರು.