ಆಳಂದ ಪೊಲೀಸರ ಭರ್ಜರಿ ಬೇಟೆ ಸುಮಾರು 4.70 ಲಕ್ಷ ರೂ. ಬೆಳ್ಳಿ, ಬಂಗಾರ ವಶ ಆರೋಪಿಗಳ ಬಂಧನ

ಆಳಂದ :ಜ.12:ಪೊಲೀಸರ ಭರ್ಜರಿ ಬೇಟೆಯಲ್ಲಿ 2020-21ನೇ ಸಾಲಿನಲ್ಲಿ ಮನೆಗಳ ಬೀಗ ಮುರಿದು , ಮನೆಯಲ್ಲಿ ಇದ್ದ ಬೆಳ್ಳೆ, ಬಂಗಾರ ಆಭರಣಗಳು ಹಾಗೂ ನಗದು ಹಣ ಕಳವು ಆದ ಬಗ್ಗೆ ಆಳಂದ ಮತ್ತು ನಿಂಬರ್ಗಾ ಪೊಲೀಸ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು , ಸದರಿ ಪ್ರಕರಣಗಳ ಪತ್ತೆ ಕುರಿತು. ಜಿಲ್ಲಾ ಪೊಲೀಸ ಅಧೀಕ್ಷಕರಾದ ಇಶಾ ಪಂತ ಹಾಗೂ ಹೆಚ್ಚುವತಿ ಪೊಲೀಸ ಅಧೀಕ್ಷಕರಾದ ಪ್ರಸನ್ನಕುಮಾರ ದೇಸಾಯಿ ಅವರ ಮಾರ್ಗದರ್ಶನದಲ್ಲಿ ಆಳಂದ ಪೊಲೀಸ ಉಪಾಧೀಕ್ಷಕರಾದ ಮಲ್ಲಿಕಾರ್ಜುನ ಸಾಲಿ ಇವರ ನೇತೃತ್ವದಲ್ಲಿ ಮಂಜುನಾಥ ಎಸ್ , ಸಿಪಿಐ ಆಳಂದ ಮತ್ತು ಮಹಾಂತೆಶ ಪಾಟೀಲ್ ಪಿಎಸ್‍ಐ (ಕಾಸು) ಹಾಗೂ ಸಿಬ್ಬಂದಿಗಳಾದ ರವೀಂದ್ರ ವರ್ಮಾ, ಶಿವಾಜಿ ಚವ್ಹಾಣ, ಸುಧಾಕರ ಪಾಟೀಲ್, ಗೀತಾ, ಮಲ್ಲಿಕಾರ್ಜುನ ಗುಟ್ಟರ, ಗುರುರಾಜ, ಸಿದ್ಧರಾಮ ಬಿರಾದಾರ ಅವರ ವಿಶೇಷ ತಂಡ ರಚಿಸಿದ್ದು. ಸದರಿ ತಂಡ ಖಚಿತ ಮಾಹಿತಿ ಮೇರೆಗೆ ಇಂದು ಸದರಿ ಪ್ರಕರಣದಲ್ಲಿ ಆರೋಪಿತರಾದ ಗುಲಾಬ ತಂದೆ. ಗಂಗಾರಾಮ ಚವ್ಹಾಣ ಕುಮಸೂರ ನಾಯಕ ತಾಂಡಾ ಆಳಂದ, ಹೀರಾಚಂದ ಪ್ರಕಾಶ ಪಾಟೀಲ್ , ಜೈನ ಗಲ್ಲಿ ಆಳಂದ ಇವರನ್ನು ಪತ್ತೆ ಮಾಡಿ ಅವರಿಂಗ 101 ಗ್ರಾಂ. ಬಂಗಾರದ ಆಭರಣಗಲು, 150 ಗ್ರಾಂ ಬೆಳ್ಳಿ ಆಭರಣಗಳು ಒಟ್ಟು 4.76 ಲಕ್ಷ ರೂ. ಬೆಲೆ ಉಳ್ಳ ಬಂಗಾರ , ಬೆಳ್ಳಿ ವಶಕ್ಕೆ ಪಡಿಸಕೊಂಡು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಆಳಂದ ಮತ್ತು ನಿಂಬರ್ಗಾ ಠಾಣೆಯ ಒಟ್ಟು 4 ಪ್ರಕರಣ ಭಾಗಿಯಾಗಿವೆ.

ಸದರಿ ಪ್ರಕರಣದಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗು ಸಿಬ್ಬಂದಿ ಅವರಿಗೆ ಪೊಲೀಸ ಅಧೀಕ್ಷಕರು ಕಲಬುರಗಿ ಇವರು ಶ್ಲಾಂಘನೀಯ ವ್ಯಕ್ತ ಪಡಿಸಿದ್ದಾರೆ.