ಆಳಂದ: ಪತ್ರಕರ್ತರಿಗೆ ಆಹಾರ ಕಿಟ್ ಮಾಸ್ಕ,ಸ್ಯಾನಿಟೈಸರ್ ವಿತರಣೆ

ಆಳಂದ :ಮೇ.20: ಇಲ್ಲಿನ ತಹಸೀಲ್ ಕಚೇರಿಯಲ್ಲಿ ಪತ್ರಕರ್ತರಿಗೆ ಸರಸಂಬಾ ದಯಾಲಿಂಗೇಶ್ವರ ಆಶ್ರಮದ ವತಿಯಿಂದ ಆಹಾರ ಕಿಟ್, ಮಾಸ್ಕ,ಸ್ಯಾನಿಟೈಸರ್ ವಿತರಿಸಿದರು.

ತಹಸೀಲ್ದಾರ ಯಲ್ಲಪ್ಪ ಸುಬೇದಾರ ಭಾಗವಹಿಸಿ ಮಾತನಾಡಿ ನಿರಗುಡಿಯ ಹವಾ ಮಲ್ಲಿನಾಥ ಮಹಾರಾಜರ ನಿರ್ದೇಶನದಂತೆ ಪ್ರಕಾಶ ಮುತ್ಯಾ ಅವರು ತಾಲೂಕಿನಲ್ಲಿ ಕೊರೊನಾ ಸಂಕಷ್ಟ್‍ದಲ್ಲಿರುವರಿಗೆ ಆಹಾರ ಕಿಟ್ಟ ವಿತರಿಸಿದ್ದಾರೆ. ಪುರಸಭೆ,ಅಗ್ನಿ ಶಾಮಕ ಠಾಣೆ,ತಹಸೀಲ್,ಪೊಲೀಸ್,ಗೃಹ ರಕ್ಷಕ ದಳ ಸಿಬ್ಬಂದಿಗಳಿಗೂ ಮಾಸ್ಕ್,ಸ್ಯಾನಿಟೈಸ್,ಕೈ ಗವಸ್ ವಿತರಿಸುವ ಮೂಲಕ ಶ್ರೀಮಠವು ಸಮಾಜಮುಖಿ ಕಾರ್ಯ ಮಾಡುತ್ತಿರುವದು ಮೆಚ್ಚುವಂತಾಗಿದೆ ಎಂದು ಬಣ್ಣಿಸಿದರು.ತಾಲೂಕಿನಲ್ಲಿ ಪಟ್ಟಣ ಪ್ರದೇಶ ಅಲ್ಲದೆ ಗ್ರಾಮೀಣ ಭಾಗಕ್ಕೆ ಕೊರೊನಾ ವೈರಸ್ ಹರಡುತ್ತಿರುವದನ್ನು ಎಲ್ಲರು ಸೇರಿ ಮುಂಜಾಗ್ರತೆವಹಿಸಿ ನಿಯಂತ್ರಣಕ್ಕೆ ತರಲು ಸರಕಾರದ ಜತೆಗೆ ಸಂಘ,ಸಂಸ್ಥೆಗಳು,ಜನ ಪ್ರತಿನಿಧಿಗಳು ಶ್ರಮಿಸಬೇಕಾಗಿದೆ,ಕೊರೊನಾ ವಾರಿಯರ್ಸ್ ಆಗಿ ಮುಂಚೋಣಿಯಲ್ಲಿರುವ ಪತ್ರಕರ್ತರು ಸಹ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.ಸರಸಂಬಾ ದಯಾಲಿಂಗೇಶ್ವರ ಆಶ್ರಮದ ಪೀಠಾಧಿಪತಿ ಪ್ರಕಾಶ ಮುತ್ಯಾ ಮಾತನಾಡಿದರು.ದಲಿತ ಸೇನೆ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಬೋಳನಿ,ಮುಖಂಡ ಅಶೋಕ ನಂದಗಾಂವ,ಮಲ್ಲಿನಾಥ ಕುಂಬಾರ,ಸೈಫನ್ ಪಟೇಲ್ ಅಂಬೇವಾಡ,ಪ್ರಕಾಶ ಇತರರು ಭಾಗವಹಿಸಿದರು.