ಆಳಂದ ದರ್ಗಾದಲ್ಲಿನ ಲಿಂಗಕ್ಕೆ ಅವಮಾನಗೈದ ಕಿಡಗೇಡಿಗಳ ಬಂಧಿಸಿ:ಬಿ.ಆರ್. ಪಾಟೀಲ್

ಆಳಂದ :ನ.10: ಪಟ್ಟಣದ ಹಜರತ್ ಲಾಡ್ಲೇಮಶಾಖ ದರ್ಗಾ ಆವರಣದಲ್ಲಿನ ಪುರಾತನ ಕಾಲದ ಲಿಂಗಕ್ಕೆ ಯಾರೋ ಕಿಡಗೇಡಿಗಳು ಅವಮಾನ ಮಾಡಿದ್ದ ಕೃತ್ಯ ಖಂಡನೀಯ,ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ್ ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು,ಆಳಂದ ಯಾವತ್ತು ಶಾಂತಿ ಮತ್ತು ಸೌಹಾರ್ಧ ಮಯವಾಗಿದೆ.ಇಲ್ಲಿ ಯಾವುದೇ ಧಾರ್ಮಿಕ ಭೇದ,ಭಾವಗಳಿಲ್ಲ ,ಶಾಂತಿಯನ್ನು ಕದಡುವ ಸಲುವಾಗಿ ಹೀನ ಕಾರ್ಯ ಮಾಡಿರುವ ಕಿಡಗೇಡಿಗಳು ಯಾರೆ ಇರಲಿ ಅವರ ಮೇಲೆ ಕ್ರಮ ಜರುಗಿಸಿ ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು,ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.