ಆಳಂದ ತಾಲೂಕು 131131 ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ

ಆಳಂದ :ಜೂ.5: ಪ್ರಸಕ್ತ ಮುಂಗಾರು ಹಂಗಾಮಿಗಾಗಿ ಐದು ಹೋಬಳಿ ಕೇಂದ್ರ ವ್ಯಾಪ್ತಿ ಸೇರಿ ಒಟ್ಟು ತಾಲೂಕಿನ ಮುಂಗಾರಿನ ಬಿತ್ತನೆಯ ಖುಷ್ಕಿ 124335 ಹೆಕ್ಟೇರ್ ಹಾಗೂ ನೀರಾವರಿ 6796 ಹೆಕ್ಟೇರ್ ಒಳಗೊಂಡು ಒಟ್ಟು 131131 ಹೆಕ್ಟೇರ್ ಪ್ರದೇಶದಲ್ಲಿ ಹಂಗಾಮಿನ ಬಿತ್ತನೆ ಕುರಿತು ಕೃಷಿ ಇಲಾಖೆ ತಾಂತ್ರಿಕ ಶಾಖೆ ಅಧಿಕಾರಿಗಳು ಗುರಿ ಅಂದಾಜಿಸಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆಯು ರೈತ ಸಮುದಾಯದಲ್ಲಿ ಆಶಾದಾಯಕವಾಗಿ ಕಂಡಿದೆ. ಇದರಿಂದಾಗಿ ಬಿತ್ತನೆಗೆ ಬೀಜ ಹಾಗೂ ಗೊಬ್ಬರ ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ.

3665 ಹೆಕ್ಟೇರ್ ತೃಣಧಾನ್ಯ ಬೆಳೆ:

ತಾಲೂಕಿನಲ್ಲಿ ಭತ್ತ ಬಿತ್ತನೆ ಕ್ಷೇತ್ರ 10 ಹೆಕ್ಟೇರ್, ಹೈಬ್ರಿಡ್ ಜೋಳ ಖುಷ್ಕಿ 500 ಹೆಕ್ಟೇರ್, ಮೆಕ್ಕೆ ಜೋಳ ನೀರಾವರಿ 400 ಹೆಕ್ಟೇರ್, ಖುಷ್ಕಿ 700 ಸೇರಿ 1100 ಹೆಕ್ಟೇರ್, ಸಜ್ಜೆ ಖುಷ್ಕಿ 2000 ಹೆಕ್ಟೇರ್, ನೀರಾವರಿ 40 ಸೇರಿ 2040 ಹೆಕ್ಟೇರ್ ಹಾಗೂ ಇತರೆ ಬೆಳೆ 15 ಹೆಕ್ಟೇರ್ ಸೇರಿ ತೃಣಧಾನ್ಯದ ಖುಷ್ಕಿ 3215 ಹಾಗೂ 450 ಸೇರಿ ಒಟ್ಟು 3665 ಹೆಕ್ಟೇರ್ ಗುರಿಯಿದೆ.

107000 ಹೆಕ್ಟೇರನಲಿ ಬೆಳೆಕಾಳು ಬಿತ್ತನೆ: ತೊಗರಿ ಖುಷ್ಕಿ 93600 ಹೆಕ್ಟೇರ್, ನೀರಾವರಿ 500 ಹೆಕ್ಟೇರ್ ಸೇರಿ 94100 ಹೆಕ್ಟೇರ್ ಪ್ರದೇಶ ಗುರಿಯಿದೆ. ಹುರಳಿ ಖುಷ್ಕಿ 35 ಹೆಕ್ಟೇರ್, ಉದ್ದು 6500 ಹೆಕ್ಟೇರ್, ಹೆಸರು 6300 ಹೆಕ್ಟೇರ್, ಅಲಸಂದಿ ಖುಷ್ಕಿ 15, ಅವರೆ 30 ಹೆಕ್ಟೇರ್, ಮಟಕಿ 20 ಹೆಕ್ಟೇರ್ ಬಿತ್ತನೆ ಎಣ್ಣೆಕಾಳು ಬೆಳೆಯ ಖುಷ್ಕಿ 106500 ಹೆಕ್ಟೇರ್ ಹಾಗೂ ನೀರಾವರಿ 500 ಸೇರಿ ಒಟ್ಟು 107000 ಹೆಕ್ಟೇರನಲ್ಲಿ ನಡೆಯಲಿದೆ.

ಎಣ್ಣೆಕಾಳು ಬೆಳೆಗಳು: ಶೇಂಗಾ ಖುಷ್ಕಿ 200 ಹೆಕ್ಟೇರ್ ನೀರಾವರಿ 50 ಸೇರಿ 250 ಹೆಕ್ಟೇರ್, ಎಳ್ಳು ಖುಷ್ಕಿ 750 ಹೆಕ್ಟೇರ್, ಸೂರ್ಯಕಾಂತಿ ಖುಷ್ಕಿ 5010 ಹೆಕ್ಟೇರ್, ನೀರಾವರಿ 565 ಸೇರಿ ಒಟ್ಟು 5575 ಹೆಕ್ಟೇರ ಗುರಿಯಿದೆ. ಔಡಲ ಖುಷ್ಕಿ 20 ಹೆಕ್ಟೇರ್, ಗುರೆಳ್ಳು ಖುಷ್ಕಿ 40 ಹೆಕ್ಟೇರ್, ಸೋಯಾಭಿನ್ 8000 ಹೆಕ್ಟೇರ್ ಸೇರಿ ಒಟ್ಟು ಎಣ್ಣೆಕಾಳು ಬೆಳೆಯ ಬಿತ್ತನೆಯ ನೀರಾವರಿ 615 ಹೆಕ್ಟೇರ್ ಮತ್ತು ಖುಷ್ಕಿ 14635 ಹೆಕ್ಟೇರ್ ಒಟ್ಟು ಗುರಿ ಹೊಂದಲಾಗಿದೆ.

ವಾಣಿಜ್ಯ ಬೆಳೆ: ಹೈ ಹತ್ತಿ ಖುಷ್ಕಿ 600 ಹೆಕ್ಟೇರ್, ಕಬ್ಬು ಹೊಸ ನಾಟಿ 1200 ಹೆಕ್ಟೇರ್, ಹಳೆಯ ಗದ್ದೆ 4031 ಹೆಕ್ಟೇರ್ ಸೇರಿ ಒಟ್ಟು ವಾಣಜ್ಯ ಬೆಳೆ ಖುಷ್ಕಿ 600 ಹೆಕ್ಟೇರ್ ಮತ್ತು ನೀರಾವರಿ 5231 ಸೇರಿ 5831 ಹೆಕ್ಟೇರ್ ಆವರಿಸಿದೆ.

ಅಧಿಕೃತ ಬೀಜವನ್ನೇ ಬಿತ್ತನೆ ಮಾಡಿ:

ಶುಕ್ರವಾರದಿಂದ ಎಲ್ಲಾ ರೈತ ಸಂಪರ್ಕ ಕೇಂದಗಳಲ್ಲಿ ಬಿತ್ತನೆ ಬೀಜಗಳ ರಿಯಾಯಿ ದರದಲ್ಲಿ ವಿತರಣೆ ನಡೆಯಲಿದ್ದು, ರೋಹಿಣಿ ಉತ್ತಮ ಮಳೆಯಾಗುತ್ತಿದೆ. ಈ ಸಂದರ್ಭದಲ್ಲಿ ಹೆಸರು, ಉದ್ದು ಸಜ್ಜೆ ಹೀಗೆ ಅಲ್ಪಾವಧಿ ಬೆಳೆ ಬಿತ್ತನೆ ಕೈಗೊಳ್ಳಬಹುದಾಗಿದೆ. ಇಳಕಲಿಗೆ ಅಡ್ಡಲಾಗಿ ಬಿತ್ತನೆ ಕೈಗೊಳ್ಳಬೇಕು ಇದರಿಂದ ಕೊಚ್ಚಿಹೋಗುವ ಮಣ್ಣು ತಡೆಯುತ್ತದೆ. ಕಳೆದ ಸಾಲಿನಲ್ಲಿ ಬಿತ್ತನೆ ಬೆಳೆ ಕೈಬಿಟ್ಟು ಈ ಬಾರಿ ಬೆಳೆ ಪರಿವರ್ತನೆ ಆಗಬೇಕು. ಶಿಫಾರಸು ಮಾಡಿದ ಬೀಜವನ್ನೇ ರೈತ ಸಂಪರ್ಕ ಕೇಂದ್ರ ಅಥವಾ ಅಧಿಕೃತ ಬೀಜ ಮಾರಾಟಗಾರರಿಂದ ಪಡೆದು ಬೀಜೋಪಚಾರದೊಂದಿಗೆ ಬಿತ್ತನೆ ಕೈಗೊಳ್ಳಬೇಕು. ರಾಸಾಯನಿಕ ಗೊಬ್ಬರವನ್ನು ನಿಯಮಿತವಾಗಿ ಬಳಕೆ ಮಾಡಬೇಕು. ಕೊಟ್ಟಿಗೆ ಗೊಬ್ಬರ ಬಳಸಿದರೆ ಸೂಕ್ತ.

ಶರಣಗೌಡ ಪಾಟೀಲ ಸಹಾಯಕ ಕೃಷಿ ನಿರ್ದೇಶಕರು ಆಳಂದ.