ಆಳಂದ ಜೆಸ್ಕಾಂ ಉಪ ವಿಭಾಗದಲ್ಲಿ ಗ್ರಾಹಕರ ಜನ ಸ್ಪಂದನ

ಆಳಂದ:ನ.22:ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗದ ನಿರ್ದೇಶನದ ಮೇರೆಗೆ ಕಲಬುರಗಿ ಜಿಲ್ಲಾ ಕಾರ್ಯ ಮತ್ತು ಪಾಲನೆ ವೃತ್ತದ ವ್ಯಾಪ್ತಿಯಲ್ಲಿ ಬರುವ ಆಳಂದ ಜೆಸ್ಕಾಂ ಉಪ ವಿಭಾಗದಲ್ಲಿ ಜನ ಸ್ಪಂದನ ಕಾರ್ಯಕ್ರಮ ಕೇವಲ ಕಾಟಾಚಾರಕ್ಕೆ ನಡೆಯಿತು.

ಶನಿವಾರ ಬೆಳಗ್ಗೆ 10 ರಿಂದ 1.30 ವರೆಗೆ ನಿಗದಿ ಪಡಿಸಿದ ಸಮಯದಲ್ಲಿ ನಡೆಯಬೇಕಾದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಪಟ್ಟಣದ ಹಾಗೂ ಗ್ರಾಮೀಣ ಭಾಗದಿಂದ ಸುಮಾರು ನೂರಾರು ಗ್ರಾಹಕರ ಸೇರಬೇಕಾದ ಕಾರ್ಯಕ್ರಮದಲ್ಲಿ ಕೇವಲ ಬೇರಳಕೆಯಷ್ಟೇ ಹಾಜರು ಇದ್ದರು.

ಅಧೀಕ್ಷಕರು ಇಂಜಿನಿಯರ್ ಕಾರ್ಯ ಮತ್ತು ಪಾಲನೆ ವಿಭಾಗ ಪವಾರ ಮಾನಸಿಂಗ ಜನ ಸ್ಪಂದನೆ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ಆಲಿಸಲು ಈ ಜನ ಸ್ಪಂದನ ಸಭೆಯ ನಡೆಯುತ್ತಿದ್ದೇವೆ. ಇದರಲ್ಲಿ ಗ್ರಾಹಕರ ಯಾವುದೇ ಸಮಸ್ಯೆಗಳು ಆಗಲಿ ಶ್ರೀಘ್ರದಲ್ಲಿಯೇ ಪರಿಹರಿಸಲಾಗುವುದು ಎಂದು ಹೇಳಿದರು. ಕುಂದು ಕೊರತೆಗಳು ಹೇಳಲು ಗ್ರಾಹಕರೇ ಇರಲಿಲ್ಲ ಹೀಗಾಗಿ ಇಂದು ಒಂದು ಜನರಿಗೆ ಹಿರಿಯ ಅಧಿಕಾರಿಗಳಿಗೆ ತೊರಿಸುವ ಸಲುವಾಗಿ ನಡೆದÀ ಜನ ಸ್ಪಂದನ ಎಂದು ಬೇರಳಕೆಯಷ್ಟೇ ಇದ್ದ ಗ್ರಾಹಕ ಆರೋಪಿಸಿದರು.

ಜನ ಸ್ಪಂದನ ಸಭೆಯ ಕುರಿತು ಆಳಂದ ಉಪ ವಿಭಾಗಕ್ಕೆ ಒಳ ಪಡುವ ಪಟ್ಟಣದ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಈ ವಿಷಯನೇ ಯಾರಿಗೂ ತಿಳಿಯದದಂತೆ ಆಗಿದೆ. ಯಾವ ಗ್ರಾಹಕರು ಕಾರ್ಯಕ್ರಮಕ್ಕೆ ಬರಲು ಯಾವುದೇ ಮಾಹಿತಿ ದೊರೆಯಲಿಲ್ಲಾ ಅಧಿಕಾರಿಗಳ ಸಾರ್ವಜನಿಕರ ಕೆಲಸಕ್ಕೆ ಮತ್ತು ಸ್ವ ಕೆಲಸಕ್ಕೆ ಪೋನ ಕರೆ ಮಾಡಿದರೇ ಪೋನ ಸ್ವೀಕರಿಸುವುದಿಲ್ಲ ತಂದ ನಂತರ ಪೋನ ಸ್ವರ್ಚ ಆಫ್ ಮಾಡಿ ಬಿಡುತ್ತಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಇತ್ತ ಜನ ಪ್ರತಿನಿಧಿಗಳು ಕಣ್ಣೆತ್ತು ನೋಡುವರೇ ?.

ಈ ಜನ ಸ್ಪಂದನದಲ್ಲಿ ಕೇವಲ ಇಲಾಖೆ ಅಧಿಕಾರಿಗಳಾದ್ ಸಂತೋಷ ಚವ್ಹಾಣ ಕಾರ್ಯ ಮತ್ತು ಪಾಲನೆ ವಿಭಾಗ ಗ್ರಾಮೀಣ ವಿಭಾಗ ಕಲಬುರೆಗಿ, ಮಾಣಿಕರಾವ ಕುಲಕರ್ಣಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು, ವಿಕಾಸ ಸುಭಾಶ್ಚಂದ್ರ ಎಇಟಿ, ಶಾಖಾಧಿಕರಿಗಳಾದ ಸುಮಿತಕುಮಾರ, ಧಾಮಸ್ ಬಿ, ಅಶೋಕ , ಪರಮೇಶ್ವರ ಬಡಿಗೇರ, ಧಾನೇಶ್ವರ, ಪ್ರಭಾಕರ,ಪ್ರವೀಣಕುಮಾರ ಸೇರಿದಂತೆ ಸಿಬ್ಬಂದಿಗಳೇ ಸಭೆಯಲ್ಲಿ ಹೆಚ್ಚಾಗಿದರು.


ಆಳಂದ ಪಟ್ಟಣದಲ್ಲಿ ಜನ ಸ್ಪಂದನ ನಡೆಯಿತು ಆದರೆ ಯಾರಿಗೂ ಮಾಹಿತಿ ಇಲ್ಲ, ಇವರು ಮತ್ತೋಮೆ ಜನ ಸ್ಪಂದನ ನಡೆಸಿದರೆ É ಜನರು ಕೊಂದು ಕೊರತೆಗಳನ್ನು ಹೇಳುತ್ತಾರೆ. ದಿನ ನಿತ್ಯಕೆ ಸುಮಾರು 8 ರಿಂದ 10 ಬಾರಿ ವಿದ್ಯುತ್ ಕಡಿತವಾಗುತ್ತದೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ಹೇಳಿದರೇ ಯಾವುದೇ ಅಧಿಕಾರಿಗಳು ಮತ್ತು ಲೈನ ಮೈನ ಹಣ ಕೊಡದೇ ಕೆಲಸ ಮಾಡುವುದಿಲ್ಲ. ಗ್ರಾಮೀಣ ಭಾಗದ ರೈತರ ಹೋಲಗಳ ಟಿಸಿ ಸುಟ್ಟರೇ 3-4 ತಿಂಗಳು ರೈತರಿಗೆ ಸತ್ತಾಯಿಸುತ್ತಿದ್ದಾರೆ. ಇದು ನಿಲ್ಲಬೇಕು ಸಮಪರ್ಕ ವಿದ್ಯುತ್ ಕೊಡಬೇಕು

ದವಲಪ್ಪ ವಣದೆ, ಕರವೇ ವಕ್ತಾರರು ಆಳಂದ