ಆಳಂದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಹಂಚನಾಳ ಅಧಿಕಾರ ಸ್ವೀಕಾರ

ಆಳಂದ:ನ.23: ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೋಮಶೇಖರ ಹಂಚಿನಾಳ ಅವರು ಸೋಮವಾರ ಅಧಿಕಾರ ವಹಿಸಿಕೊಂಡರು.

ಈ ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗುಲಮಡಿ ಅವರ ವರ್ಗಾವಣೆಯಿಂದ ಕೆಲವು ದಿನಗಳಿಂದ ತೆರುವಾಗಿದ್ದ ಸ್ಥಾನಕ್ಕೆ ಬೀದರ್ ಕ್ಷೇತ್ರ ಶಿಕ್ಷಣಾಧಿಕಾರಿ ಹಂಚನಾಳ ಅವರನ್ನು ಇಲ್ಲಿಗೆ ವರ್ಗಾಯಿಸಿ ಇಲಾಖೆ ಆದೇಶ ನೀಡಿದ ಹಿನ್ನೆಲೆಯಲಿ ಅವರು ಕಚೇರಿಗೆ ಆಗಮಿಸಿ ಅಧಿಕಾರ ವಹಿಸಿಕೊಂಡರು.

ಬಳಿಕ ರಾಜ್ಯ ಸರ್ಕಾರಿ ನೌಕರ ಸಂಘದ ಕಚೇರಿಯಲ್ಲಿ ನೂತನ ಶಿಕ್ಷಣಾಧಿಕಾರಿ ಹಂಚನಾಳ ಅವರಿಗೆ ಶಿಕ್ಷಕರು ಸಂಘದವರು ಸ್ವಾಗತಿಸಿ ಸನ್ಮಾನಿಸಿದರು.

ಸ್ವಾಗತ ಸನ್ಮಾನ ಸ್ವೀಕರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಹಂಚನಾಳ ಅವರು, ಶೈಕ್ಷಣಿಕ ಗುಣಮಟ್ಟತೆ ಗುರಿಸಾಧಿಸಲು ಪ್ರತಿಯೊಬ್ಬ ಶಿಕ್ಷಕರು ಶಿಕ್ಷಣ ಇಲಾಖೆಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಗುರಿಮುಟ್ಟಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಉತ್ತಮ ಆಡಳಿತಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.

ಈ ವೇಳೆ ಬೀದರ್ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ, ಕಮಲಾಪೂರ್ ಡೈಟ್ ಉಪನ್ಯಾಸಕ ರಾಜಶೇಖರ ಗೋಶಾಲ್, ಇಸೂಫ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯಾ ಗುತ್ತೇದಾರ ಮತ್ತಿತರು ಆಗಮಿಸಿದ್ದರು.

ಪ್ರಭಾರಿ ಸಮನ್ವಯಾಧಿಕಾರಿ ಬಸವರಾಜ ದೊಡ್ಡಮನಿ, ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಸಿದ್ಧರಾಮ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪಾ ಬಿರಾದಾರ, ಗೌರವ ಅಧ್ಯಕ್ಷ ಶಾಂತಪ್ಪ ಜಕ್ಕಾಣಿ, ಮತ್ತಿತರು ಸನ್ಮಾನಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಲೋಕಪ್ಪ ಜಾಧವ, ಶಿಕ್ಷಕರ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ಮಾನಾಜಿ, ಶಿಕ್ಷಣ ಸಂಯೋಜಕ ಪ್ರಕಾಶ ಕೊಟ್ರೆ, ಜಿತೇಂದ್ರ ತಳವಾರ, ಸಿಆರ್‍ಸಿಗಳಾದ ವಿದ್ಯಾಧರ್ ಬಾವಿಕಟ್ಟಿ, ಶಂಕರ ಮೊಟಗಿ, ಶಿಕ್ಷಕ ಶಂಕರ ಮಗಿ, ವೆಂಕಟೇಶ ಇಳಿಗಾರ, ರಾಜಕುಮಾರ ಅಷ್ಟಗಿ, ವಿಶ್ವನಾಥ ಘೋಡಕೆ, ದತ್ತಾತ್ರೆ ಮತ್ತಿತರು ಇದ್ದರು.