ಆಳಂದ ಕ್ಷೇತ್ರಕ್ಕೆ ಅಂತರ್ಜಲ ಹೆಚ್ಚಳಕ್ಕೆ 114.50 ಕೋಟಿ ಅನುದಾನ

ಆಳಂದ:ಜ.12: ತಾಲೂಕಿನ ಸಣ್ಣ ನೀರಾವರಿ ಉಪ ವಿಭಾಗಕ್ಕೆ ಮೂರು ವರ್ಷಗಳಲ್ಲಿ ಸುಮಾರು 65 ಕೋಟಿ ಹಾಗೂ ಮಧ್ಯಮ ನೀರಾವರಿ ಇಲಾಖೆಯ ಮೂಲಕ 8 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಅನುಷ್ಠಾನಕ್ಕೆ 49.50 ಕೋಟಿ ರೂಪಾಯಿ ಸೇರಿ 114.50 ಕೋಟಿ ರೂಪಾಯಿ ಅನುದಾನವನ್ನು ರಾಜ್ಯ ಸರ್ಕಾರ ನೀಡಿದೆ.

ವಿವಿಧ ಯೋಜನೆಗಳ ಅಡಿಯಲ್ಲಿ ಕ್ಷೇತ್ರಕ್ಕೆ ಅನುದಾನ ನೀಡುವ ಮೂಲಕ ಕೊಂಚಮಟ್ಟಿಗೆ ಅಂತರ್ಜಲ ವೃದ್ಧಿಗೆ ಸರ್ಕಾರ ಮುಂದಿಜ್ಜೆ ಇಟ್ಟಿದೆ.

ಸಣ್ಣ ನೀರಾವರಿ ಇಲಾಖೆಗೆ 2018-19ರಿಂದ 2022ರವರೆಗೆ 65 ಕೋಟಿ ಅನುದಾನ ಮಂಜೂರಾಗಿದೆ. ಅತಿವೃಷ್ಟಿ ಹಾಗೂ ಪ್ರಹವಾದಿಂದ ಒಡೆದು ಹೋಗಿದ್ ತಾಲೂಕಿನ ಮಟಕಿ ಕರೆ ನಿರ್ಮಾಣ ಕಮಗಾರಿಗೆ 2 ಕೋಟಿ ಒದಗಿಸಿದ್ದರಿಂದ ಕಾಮಗಾರಿ ಕೈಗೊಳ್ಳಲಾಗಿದೆ.

6 ಕೆರೆ ಮಂಜೂರು: ಕ್ಷೇತ್ರದಲ್ಲಿ ಶಾಸಕ ಸುಭಾಷ ಗುತ್ತೇದಾರ ಅಧಿಕಾರಕ್ಕೆ ಬಂದ ಮೇಲೆ ಸಣ್ಣ ನೀರಾವರಿ ಇಲಾಖೆಯ ಮೂಲಕ ಆರು ಕೆರೆ, ಸಾವಳೇಶ್ವರದಲ್ಲಿ ಒಂದು ಚೆಕ್ ಡ್ಯಾಂ ಮತ್ತು ಜಿಡಗಾದಲ್ಲಿ ಎಸ್‍ಸಿಸಪಿ ಅಡಿಯಲ್ಲಿ 40 ಲಕ್ಷ ಹಾಗೂ ಇನ್ನಿತರ ಕಡೆ 9 ಚೆಕ್‍ಡ್ಯಾಂಗೆ 50 ಲಕ್ಷ ವೆಚ್ಚದಲ್ಲಿ ಚೆಕ್‍ಡ್ಯಾಂ, ನಸೀರವಾಡಿ ಗ್ರಾಮದ ಎಸ್ಟಿ ಸಮುದಾಯಕ್ಕೆ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಬೆಣ್ಣೆತೋರಾ ನದಿಯಿಂದ ಕೃಷಿಗೆ ನೀರು ಒದಗಿಸಲು ಪೈಪಲೈನ್ ಕಾಮಗಾರಿ ಕೈಗೊಂಡಿದೆ.

49.50ಕೋಟಿಗೆ ಮಂಜುರಾತಿ: ಪ್ರಸಕ್ತ ಸಾಲಿನ 10 ಜ. 2023ಕ್ಕೆ ಮಧ್ಯಮ ನೀರಾವರಿ ಇಲಾಖೆಯ ಮೂಲಕ 8 ಕೆರೆಗಳಿಗೆ ನೀರು ತುಂಬಿಸಲು 49.50ಕೋಟಿ ರೂಪಾಯಿ ನೀಡಲು ಸಕಾರ ಆಡಳಿತಾತ್ಮಕ ಮಂಜುರಾತಿ ನೀಡುವ ಮೂಲಕ ಆ ಭಾಗದ ಜನರ ಬಹುದಿನಗಳ ಕನಸು ನನಸಾಗಿಸಿದೆ.

ಮಧ್ಯಮ ನೀರಾವರಿ ಇಲಾಖೆಯ ಮೂಲಕ ಭೀಮಾ ನದಿಯಿಂದ ಅಮರ್ಜಾ ಅಣೆಕಟ್ಟೆಗೆ ನೀರು ತುಂಬಿಸುವುದು ಹಾಗೂ ಮಧ್ಯದಲ್ಲಿ ಬರುವ ಹಳ್ಳಿಗಳ 21 ಕೆರೆಗಳಿಗೆ ನೀರು ತುಂಬಿಸುವ 500 ಕೋಟಿ ರೂಪಾಯಿ ಯೋಜನೆಯಲ್ಲಿ ಕೈಬಿಟ್ಟು ಹೋಗಿದ್ದ 8 ಕೆರೆಗಳಿಗೆ ಕ್ಷೇತ್ರದ ಶಾಸಕ ಸುಭಾಷ ಗುತ್ತೇದಾರ ಅವರ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಈ 8 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮತ್ತೆ 49.50ಕೋಟಿ ರೂಪಾಯಿ ಆಡಳಿತಾತ್ಮಕ ಮಂಜೂರಾತಿ ನೀಡಿದ್ದು ಅಂದುಕೊಂಡಂತೆ ಸಕಾಲಕ್ಕೆ ಕಾಮಗಾರಿ ನಡೆದು ಕೆರೆಗಳಿಗೆ ನೀರು ತುಂಬಿಸಿದರೆ ಈ ಮೂಲಕ ನೀರಾವರಿಗೆ ವರವಾಗಲಿದೆ ಎಂದು ರೈತ ಸಮುದಾಯದ ಕನಸು ನನಸಾಗಲಿ ಅಧಿಕಾರಿಗಳು ಶ್ರಮಿಸಬೇಕಾಗಿದೆ.

8 ಕೆರೆ ಅನುಮೋದನೆ: ಕ್ಷೇತ್ರದ 8 ಕೆರೆಗಳನ್ನು ತುಂಬಿಸುವ ಸುಮಾರು 49.50 ಕೋಟಿ ಮೊತ್ತದ ಯೋಜನೆಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಅಫಜಲಪೂರ ಭೀಮಾನದಿಯಿಂದ ಪೈಪಲೈನ್ ಮೂಲಕ ಅಮರ್ಜಾ ಜಲಾಶಯ ತುಂಬಿಸುವ ಕಾರ್ಯ ಪ್ರಗತಿಯಲ್ಲಿದ್ದು ಈ ಯೋಜನೆಯಲ್ಲಿ ಬಿಟ್ಟು ಹೋಗಿದ್ದ 8 ಕೆರೆಗಳನ್ನು ಸೇರ್ಪಡೆಗೊಳಿಸಿ ಈ ಯೋಜನೆ ಪೂರ್ಣಗೊಳಿಸಲಾಗುತ್ತಿದೆ. ಇತ್ತೀಚಿಗೆ ಬೆಳಗಾವಿ ವಿಧಾನಸಭೆ ಅಧಿವೇಶನದ ಸಮಯದಲ್ಲಿ ಜರುಗಿದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಮಂಗಳವಾರ ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರತಿದೆ. ಈ ಯೋಜನೆಗೆ ಅನುಮೋದನೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸಂಪುಟದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವೆ.

ಸುಭಾಷ ಆರ್. ಗುತ್ತೇದಾರ ಶಾಸಕರು ಆಳಂದ.

65 ಕೋಟಿ ಬಿಡುಗಡೆ: ಸಣ್ಣ ನೀರಾವರಿ ಇಲಾಖೆಯ ಮೂಲಕ ಕ್ಷೇತ್ರದಲ್ಲಿ ಆರು ಕೆರೆ ಮಂಜುರಾಗಿದ್ದು, ಅವುಗಳಲ್ಲಿ ಕಡಂಚಿ ಗ್ರಾಮದ ಜಿನುಗು ಕರೆಗೆ 5 ಕೋಟಿ ನೀಡಿದ್ದು ಸದ್ಯ ಕಾಮಗಾರಿ ಪ್ರಗತಿಯಲಿದೆ. ವಳವಂಡವಾಡಿ 10 ಕೋಟಿ, ಕವಲಗಾ 1.6ಕೋಟಿ, ನಿಂಬರಗಾ 2 ಕೋಟಿ ಕಾಮಗಾರಿ ಆರಂಭ ಹಂತದಲಿದೆ. ತಡಕಲ್ 3.54ಕೋಟಿ ಮತ್ತು ಮಟಕಿ ಕರೆಗೆ 2 ಕೋಟಿ, ಸಾವಳೇಶ್ವರದಲ್ಲಿ ಅಣೆಕಟ್ಟೆ ನಿರ್ಮಾಣ 1 ಕೋಟಿ ವೆಚ್ಚದ ಕಾಮಗಾರಿ ಮುಗಿದಿದೆ. ಕೋತನಹಿಪ್ಪರಗಾ 1.4ಕೋಟಿ ವೆಚ್ಚದ ಕಾಮಗಾರಿ ಟೆಂಡರ್ ಹಂತದಲಿದೆ. ಐದರಿಂದ 10 ಲಕ್ಷ ಅನುದಾನದಲ್ಲಿ ಸುಮಾರು 50 ಲಕ್ಷ ವೆಚ್ಚದಲ್ಲಿ 9 ಚೆಕ್ ಡ್ಯಾಂಗೆ ಸುಮಾರು 65 ಕೋಟಿ ಅನುದಾನ ಇದಾಗಿದೆ.

ಶಾಂತಪ್ಪ ಜಾಧವ

ಎಇಇ ಸಣ್ಣ ನೀರಾವರಿ ಇಲಾಖೆಯ ಉಪ ವಿಭಾಗ