ಆಳಂದ : ಅಗ್ನಿಶಾಮಕ ಅಣುಕು ಪ್ರದರ್ಶನ

ಆಳಂದ:ಏ.19: ತಾಲೂಕಿನ ಮಾಜಿ ಸೈನಿಕರ ಅಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಸೇನಾ ತರಬೇತಿ ಶಿಬಿರದಲ್ಲಿ ತಾಲೂಕಿನ ಅಗ್ನಿಶಾಮಕ ಘಟಕದಿಂದ ಅಗ್ನಿಶಾಮಕ ಸೇವಾ ಸಪ್ತಾಹ ದಿನಾಚರಣೆಯ ಅಂಗವಾಗಿ ಅಗ್ನಿ ಅವಘಡ ಸುರಕ್ಷತೆಯ ಅಣುಕು ಪ್ರದರ್ಶನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಠಾಣೆಯ ಪ್ರಭಾರ ಠಾಣಾಧಿಕಾರಿ ಸಲೀಂ ಪಾಷಾ ಶಿಬಿರಾರ್ಥಿಗಳಿಗೆ ಅಗ್ನಿ ಅವಘಡಗಳು ಮತ್ತೆ ಸುರಕ್ಷತೆ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು, ನಂತರದಲ್ಲಿ ಅಗ್ನಿಶಾಮಕ ವಿಭಾಗದ ಸಿಬ್ಬಂದಿಯವರಿಂದ ಅಗ್ನಿ ಅವಘಡಗಳು ಸಂಭವಿಸಿದಾಗ ಅಗ್ನಿ ನಿಯಂತ್ರಿಸುವ ಅಣುಕು ಪ್ರದರ್ಶನ ನೀಡಲಾಯಿತು. ಹಾಗೆ ಈ ಕಾರ್ಯಕ್ರಮದಲ್ಲಿ ಆಳಂದ ತಾಲೂಕಿನ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾಗಿರುವ ಸಿದ್ದಲಿಂಗಪ್ಪ ಮಲಶೆಟ್ಟಿ, ವಿಜಯ ರಾಠೋಡ್, ಉಲ್ಲಾಸ ಸಿಂಗೆ, ತಾನಾಜಿ ಜಾಧವ್.ವಿದ್ಯಾರ್ಥಿ ನಿಲಯದ ನಿಲಯಪಾಲಕರಾದ ನಿಂಗಣ್ಣ ದೊಡ್ಮನಿ ಸಹಾಯಕರಾದ ಧರ್ಮಾ ಸಿಂಗೆ, ದಯಾನಂದ್ ಜಂಗಲೇ ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.