ಆಳಂದನಲ್ಲಿ ಭಕ್ತಿಭಾವದ ಮಧ್ಯ ಶ್ರೀ ನರೇಂದ್ರಚಾರ್ಯರ ಪಾದುಕ ದರ್ಶನ ಪೂಜೆ

ಆಳಂದ: ಜ.11:ಪಟ್ಟಣದ ಎಸ್‍ಆರ್‍ಜಿ ಶಾಲಾ ಮೈದಾದನಲ್ಲಿ ಮಂಗಳವಾರ ಕಲಬುರಗಿಯ ಸ್ವ-ಸ್ವರೂಪಾ ಸಂಪ್ರದಾಯ ಆಯೋಜಿಸಿದ್ದ ಮಹಾರಾಷ್ಟ್ರದ ನಾಣೀಜಧಾಮ ದಕ್ಷಿಣ ಪೀಠದ ಅನಂತ ಶ್ರೀ ವಿಭೂಷಿತ ಜಗದ್ಗುರು ರಾಮಾನಂದಾಚಾರ್ಯ ಶ್ರೀ ಸ್ವಾಮಿ ನರೇಂದ್ರಾಚಾರ್ಯ ಮಹಾರಾಜರ ಪಾದುಕಾ ದರ್ಶನ ಕಾರ್ಯಕ್ರಮ ವಿದ್ಯುಕ್ತವಾಗಿ ನೆರವೇರಿತು.

ವಿವಿಧ ಭಾಗಗಳಿಂದ ಆಗಮಿಸಿದ್ದ 350ಕ್ಕೂ ಹೆಚ್ಚು ಕುಟುಂಬಗಳ ಭಕ್ತರು ಭಾಗವಹಿಸಿ ನರೇಂದ್ರಚಾರ್ಯ ಮಹಾರಾಜರ ಪಾದುಕ ಮತ್ತು ಗುರುಪೂಜೆ, ಶ್ರೀಗಳ ಪಾದುಕು ಸ್ವಾಗತ, ಸಮಾಜಿಕ ಉಪಕ್ರಮ, ಗುರುಪೂಜಾ, ಆರತಿ ಸಮಾರಂಭ, ಧಾರ್ಮಿಕ ಪ್ರವಚನ, ಭಕ್ತ ದೀಕ್ಷಾ, ದರ್ಶನ ಮತ್ತು ಪುಷ್ಪವೃಷ್ಟಿ ಕಾರ್ಯಕ್ರಮ ನೆರವೇರಿಸಿದರು.

ಈ ವೇಳೆ ವೇದಿಕೆಯಲ್ಲಿ ನಾಣಜೀಧಾಮದಿಂದ ಆನ್‍ಲೈನ್ ಮೂಲಕ ಶ್ರೀ ಸ್ವಾಮಿ ನರೇಂದ್ರಚಾಅರ್ಯಜಿ ಮಹಾರಾಜರು ನೀಡಿದ ಆಶೀರ್ವಚನ ಪ್ರಸಾರವನ್ನು ಭಕ್ತಾದಿಗಳು ಆಲಿಸಿದರು.

52 ಮಂದಿ ಬಡ ರೈತರಿಗೆ ಬೆಳೆಗೆ ಔಷಧಿ ಸಿಂಪರಣೆ ಪಂಪಗಳನ್ನು ಉಚಿತವಾಗಿ ವಿತರಿಸಲಾಯಿತು.

ಸಮಾರಂಭದಲ್ಲಿ ಮಹಾರಾಷ್ಟ್ರದ ನಾಣಜ ಗ್ರಾಮದ ರಾಣಭರೇ ಸರ್ ಅವರು ಮಾತನಾಡಿ, ಗುರು ಸೇವೆ ಜೀವನಮುಕ್ತಿಗೆ ದಾರಿಯಾಗಿದೆ. ಸೇವೆಯಿಂದ ಲಾಭವಿದೆ. ದುಶ್ಚಟಗಳಿಂದ ಮುಕ್ತರಾಗಿ ಗುರುವಿನ ಪಾದುಕ ದರ್ಶನ ಪೂಜೆ ಮಾಡುವುದರಿಂದÀ ಬದುಕಿಗೆ ನೆಮ್ಮದಿ ದೊರೆಯುತ್ತದೆ ಎಂದರು.

ಕಲಬುರಗಿ ಸ್ವ-ಸ್ವರೂಪ ಸಂಪ್ರದಾಯದ ಜಿಲ್ಲಾ ಅಧ್ಯಕ್ಷ ಸೋಮನಾಥ ನಾಗಬುಜಂಗೆ, ನಿರೀಕ್ಷಕ ಶುಶಿಲ ಪಾಟೀಲ, ಲೋಚನರಾವ್, ಮರಾಠಾ ಸಮಾಜದ ತಾಲೂಕು ಅಧ್ಯಕ್ಷ ನಾಗನಾಥ ಏಟೆ, ಮಾಳಿ ಸಮಾಜದ ಅಧ್ಯಕ್ಷ ಪಂಡಿತ ಶೇರಿಕಾರ, ಮರಾಠಾ ಸಮಾಜದ ದತ್ತಾತ್ರೆಯ ಬಾಬ್ರೆ, ಕೆಕೆಎಂಎಪಿ ತಾಲೂಕು ಅಧ್ಯಕ್ಷ ನರೇಶ ಬೋಸ್ಲೆ, ಮನೋಹರ ಮಾನೆ, ಅಂಬಾದಾಸ ಸಿಂಧೆ, ನಾಗರಾಜ ಗೊಬ್ಬೂರ್, ಉಜ್ವಲತಾಯಿ ಜಾಧವ್, ಸುನೀತಾ ಸಿಂಧೆ, ವಿದ್ಯಾ ಐಯಳಕರ, ಗಣೇಶ ಯರವಳ, ರೈತ ಕಾಂತು ಗಣಮುಖಿ, ಅಶೋಕ ಜಾಧವ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

ಮುಖಂಡ ತಾನಾಜಿ ಪವಾರ ನಿರೂಪಿಸಿದರು. ರಾಹುಲ ಚಿಟ್ಟೆಕರ್ ಸ್ವಾಗತಿಸಿದರು.