
ಆಳಂದ:ಮಾ.3: ಗಡಿಭಾಗದ ಆಳಂಗಾ ಗ್ರಾಮದಲ್ಲಿ 2019-20ನೇ ಸಾಲಿನ ಡಿಎಂಎಫ್ ಯೋಜನೆಯಡಿ ಮಂಜೂರಾದ ರೂ. 1.14 ಕೋಟಿ ವೆಚ್ಚದಲ್ಲಿ ಕೆರೆ ನಿರ್ಮಾಣ ಕಾಮಗಾರಿಯ ಶಾಸಕ ಸುಭಾಷ ಗುತ್ತೇದಾರ ಪೂಜೆ ನೆರವೇರಿಸಿದರು.
ಇದೇ ವೇಳೆ ಮಾತನಾಡಿದ ಅವರು, ರೈತರ ಆದಾಯ ದ್ವಿಗುಣಗೊಳ್ಳಬೇಕಾದರೆ ನೀರಾವರಿ ಸೌಲಭ್ಯ ಮಹತ್ವ ಅರಿತು ಈ ಭಾಗದ ಬಹುದಿನಗಳ ಬೇಡಿಕೆಯಾಗಿದ್ದು ಕೆರೆ ನಿರ್ಮಾಣ ಚಾಲನೆ ನೀಡಲಾಯಿತು. ಅಂತರ್ಜಾಲ ಹೆಚ್ಚಿಸಲು ಕೆರೆ ನಿರ್ಮಾಣ ಅನುಕೂಲವಾಗಲಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದ ಅವರು, ನಿರಂತರವಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದರ ಮೂಲಕ ಆಳಂದ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಸತತವಾಗಿ ದುಡಿಯುತ್ತೇನೆ ಎಂದರು. ಜಿಪಂ ಕಿರಿಯ ಅಭಿಯಂತರ ಸಂದೀಪ ಪಾಟೀಲ, ಗುತ್ತಿಗೆದಾರ ಗಂಗಾರಾಮ ಲೆಂಗಟಿ, ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ ಪಾಟೀಲ, ಮಾಣಿಕರಾವ ಕಾರಬಾರಿ, ಮಲ್ಲಿಕಾರ್ಜುನ ಕಂದಗೂಳೆ, ತಾಪಂ ಮಾಜಿ ಸದಸ್ಯ ಶಿವಪ್ಪ ವಾರಿಕ, ಶರಣಪ್ಪ ಹೊಸಮನಿ, ಮಹಿಬೂಬ ಶೇಖ, ಅಶೋಕ ಕೊರೆ, ದೊಂಡಿಬಾ ತಾತ್ಯಾ, ಬಾಬುರಾವ ಪಾಟೀಲ, ಗುರು ಪಾಟೀಲ, ಬಾಬುರಾವ ಮುಲಗೆ, ಬಜರಂಗ ಪಾಟೀಲ, ಇಂದ್ರಜಿತ ಕನಗರೆ, ಗ್ರಾಪಂ ಮಾಜಿ ಅಧ್ಯಕ್ಷ ಪ್ರಫುಲ್ಲ ಬಾಬಳಸುರೆ, ಸೂರಜ ಪಾಟೀಲ, ತಿಪ್ಪಣ್ಣ ಬಂಡೆ, ರಮೇಶ ಪೂಜಾರಿ ಉಪಸ್ಥಿತರಿದ್ದರು.