ಆಲ್ ಖೈದ ನಾಯಕರ ಹತ್ಯೆ ತಾಲಿಬಾನ್ ಹೇಳಿಕೆ -ಪಾಕ್ ತಿರಸ್ಕಾರ

ವಾಷಿಂಗ್ಟನ್/ ಇಸ್ಲಾಮಾಬಾದ್, ಆ.೨೯- ಅಲ್ ಖೈದಾ ಮುಖ್ಯಸ್ಥನನ್ನು ಕೊಲ್ಲಲು ಅಮೆರಿಕ, ಇಸ್ಲಮಾಬಾದ್ ವಾಯುಪ್ರದೇಶ ಬಳಸಿಕೊಂಡಿದೆ ಎಂಬ ತಾಲಿಬಾನ್ ಹೇಳಿಕೆಯನ್ನು ಪಾಕಿಸ್ತಾನ ತಿರಸ್ಕರಿಸಿದೆ.
ಕಳೆದ ಜುಲೈನಲ್ಲಿ ಅಲ್ ಖೈದಾ ನಾಯಕ ಅಯ್ಮನ್ ಅಲ್-ಜವಾಹಿರಿಯನ್ನು ಅಮೇರಿಕಾ ಸೇನಾ ಪಡೆ ಹತ್ಯೆ ಮಾಡಲಾಗಿತ್ತು. ಅಮೇರಿಕಾ ತನ್ನ ದಾಳಿಗೆ ಇಸ್ಲಾಮಾಬಾದ್‌ನ ವಾಯುಪ್ರದೇಶ ಬಳಸಲಾಗಿದೆ ಎಂದು ತಾಲಿಬಾನ್ ನೀಡಿದ್ದ ಪಾಕಿಸ್ತಾನ ಸಾರಾಸಗಟಾಗಿ ತಿರಸ್ಕರಿಸಿದೆ.
ಅಫ್ಘಾನಿಸ್ತಾನದ ವಾಯುಪ್ರದೇಶದಲ್ಲಿ ಗಸ್ತು ತಿರುಗಲು ಡ್ರೋನ್‌ಗಳನ್ನು ಕಾನೂನುಬಾಹಿರವಾಗಿ ಬಳಸುವುದು. ದೇಶದ ಗಡಿಯ ಉಲ್ಲಂಘನೆಯಾಗಿದೆ ಎಂದು ಅಫ್ಘಾನಿಸ್ತಾನದ ಹಂಗಾಮಿ ರಕ್ಷಣಾ ಸಚಿವ ಮುಲ್ಲಾ ಯಾಕೂಬ್ ಹೇಳಿದ್ದಾರೆ.
ಮುಲ್ಲಾ ಯಾಕೂಬ್ ಮತ್ತು ತಾಲಿಬಾನ್ ಸೇನಾ ಪಡೆಗಳ ಮುಖ್ಯಸ್ಥರು ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದು, ಅಮೇರಿಕಾದ ಡ್ರೋಣ್‌ಗಳು ಪಾಕಿಸ್ತಾನದ ವಾಯುಪ್ರದೇಶ ಬಳಸಿಕೊಂಡು ಪಾಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ಪ್ರವೇಶಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಅಫ್ಘಾನಿಸ್ತಾನಕ್ಕೆ ಪ್ರವೇಶಿಸಲು ಮತ್ತು ದಾಳಿ ಮಾಡಲು ಅಮೇರಿಕಾ, ಪಾಕಿಸ್ತಾನದ ವಾಯುಪ್ರದೇಶ ಬಳಸಿಕೊಳ್ಳಲಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.
ಅಲ್-ಖೈದಾ ನಾಯಕ ಅಯ್ಮನ್ ಅಲ್-ಜವಾಹಿರಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಡ್ರೋನ್ ದಾಳಿಯಲ್ಲಿ ಹತ್ಯೆಯಾಗಿದ್ದರು. ಇದನ್ನು ಅಮೇರಿಕಾ ಅಧ್ಯಕ್ಷ ಅಧ್ಯಕ್ಷ ಜೋ ಬಿಡೆನ್ ಅವರು ನೇರ ಪ್ರಸಾರದಲ್ಲಿ ವೀಕ್ಷಿಸಿದ್ದರು.
ಅಮೇರಿಕಾ ಡ್ರೋನ್‌ನಿಂದ ಹಾರಿಸಲಾದ ಎರಡು ಹೆಲ್‌ಫೈರ್ ಕ್ಷಿಪಣಿಗಳು ಅಲ್-ಖೈದಾ ಮುಖ್ಯಸ್ಥನನ್ನು ಕೊಂದಿದ್ದವು. ಜೊತೆಗೆ ಅಕ್ಕ ಪಕ್ಕದಲ್ಲಿ ಬೇರೆಡೆ ಸ್ವಲ್ಪ ಹಾನಿಯನ್ನುಂಟುಮಾಡಿದ್ದವು.
ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ), ಅಕಾ ಪಾಕಿಸ್ತಾನಿ ತಾಲಿಬಾನ್ ಮತ್ತು ಪಾಕಿಸ್ತಾನ ಸರ್ಕಾರದ ನಡುವಿನ ಶಾಂತಿ ಮಾತುಕತೆಗೆ ಭಯೋತ್ಪಾದಕ ಗುಂಪು ಮಧ್ಯಸ್ಥಿಕೆ ವಹಿಸಿರುವ ಸಮಯದಲ್ಲಿ ತಾಲಿಬಾನ್‌ನ ಹಾಲಿ ರಕ್ಷಣಾ ಸಚಿವರ ಹೇಳಿಕೆ ಹೊರ ಬಂದಿವೆ.