ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಜಿಲ್ಲಾ ಸಮಾವೇಶ

ಮಾನ್ವಿ,ಸೆ.೧೪- ನಮ್ಮ ಆಲ್ ಇಂಡಿಯ ಟ್ರೇಡ್ ಯೂನಿಯನ್ ಕಾಂಗ್ರೆಸ್ ಸಮಿತಿಯು ಕಳೆದ ೪೦ ವರ್ಷಗಳಿಂದ ಸಂಘಟಿತ ಹಾಗೂ ಅಸಂಘಟಿತ ವಲಯದಲ್ಲಿ ಕೆಲಸ ಮಾಡಲಾಗುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಇದೇ ಸೆಪ್ಟೆಂಬರ್ ೧೬ ಹಾಗೂ ೧೭ ರಂದು ಜಿಲ್ಲಾ ಮಟ್ಟದ ಸಮ್ಮೇಳನವನ್ನು ಆಯೋಜನೆ ಮಾಡಲಾಗಿದ್ದು ಜಿಲ್ಲೆಯ ಎಲ್ಲರೂ ಭಾಗವಹಿಸುವಂತೆ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ ಬಾಷುಮಿಯಾ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು ನಮ್ಮ ಸಂಘಟನೆಯು ಕಾರ್ಮಿಕರ ಹಕ್ಕುಗಳಿಗಾಗಿ ೧೯೨೦ ರಲ್ಲಿ ಆರಂಬಿಸಿ ಇಲ್ಲಿಯವರೆಗೆ ಬಹಳ ಬಡ ಕಾರ್ಮಿಕರ ಸೇವೆಯನ್ನು ಮಾಡಿರುತ್ತದೆ ಈ ಸಮ್ಮೇಳನಕ್ಕೆ ಅನೇಕ ಗಣ್ಯರು ಆಗಮಿಸುತ್ತಿದ್ದಾರೆ ಎಂದು ಸಂಘಟನೆಯ ಹೋರಾಟದ ಹಾದಿಯ ವಿವರಣೆ ನೀಡಿದರು.
ನಂತರ ಕಾಂ ಸಂಗಯ್ಯ ಸ್ವಾಮಿ ಚಿಂಚರಕಿ ಮಾತಾನಾಡಿ ಕಾರ್ಮಿಕರಿಗೆ ಕನಿಷ್ಠ ೩೧೫೦೦ ವೇತನ,ಸಮಾಜಿಕ, ವಿಮಾ ಭದ್ರತೆ,ಮನೆ ನಿರ್ಮಾಣಕ್ಕೆ ೧೦ ಲಕ್ಷ,ಪಿಂಚಣಿ ವ್ಯವಸ್ಥೆ,ಅಂಗನವಾಡಿ,ಆಶಾ,ಬಿಸಿಊಟ, ಕಾರ್ಮಿಕರನ್ನು ಖಾಯಂ ಗೊಳಿಸುವಂತೆ ನಮ್ಮ ಹಕ್ಕೊತ್ತಾಯವಿದೆ ಎಂದರು.
ಸೆಪ್ಟೆಂಬರ್ ೧೫ ರಂದು ಶ್ರಮಿಕ ವರ್ಗದ ಸೇವಾ ಕಾರ್ಯಕರ್ತರು ತಮ್ಮ ಕೆಲಸವನ್ನು ಬದಿಗೊತ್ತಿ ತಮ್ಮ ಬೇಡಿಕೆಗೆ ಆಗ್ರಹಿಸಿ ಕಾರ್ಮಿಕರ ವಿರೋಧಿ ನೀತಿಯನ್ನು ಖಂಡಿಸಿ ಅಂಗನವಾಡಿ ಬಂದ್ ಮಾಡುವ ಉದ್ದೇಶ ಹಾಗೂ ಅಶುದ್ದ ಆಹಾರವನ್ನು ನೀಡದಿರುವುದು, ಮಕ್ಕಳಿಗೆ ಸಮವಸ್ತ್ರ ನೀಡಬೇಕು ಹಾಗೂ ಸರಿಯಾದ ಸಮಯಕ್ಕೆ ಸಂಬಳ ಹಾಗೂ ಬಾಡಿಗೆಯನ್ನು ನೀಡಬೇಕು ಎಂದು ಮಾನ್ವಿ ಸೇರಿದಂತೆ ರಾಜ್ಯದ ಜಿಲ್ಲಾ ವಿರುದ್ಧ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿ ಎಚ್ ಕಂಬಳಿ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಡಿ ಎಚ್ ಕಂಬಳಿ,ವೆಂಕನಗೌಡ ಗದ್ರಚಾಗಿ,ಎಂ ಬಿ ಸಿದ್ದರಾಮಯ್ಯ ಸ್ವಾಮಿ,ವೆಂಕೋಬ ನಾಯಕ,ವತಾನುದ್ಧೀನ್ ಹಟ್ಟಿ, ಸಂಗಯ್ಯ ಸ್ವಾಮಿ,ಚನ್ನಮ್ಮ ,ಲಲಿತಾ ಸಾಲಿ,ಸರಸ್ವತಿ, ಸರಸ್ವತಿ ಇಂದಿರಾನಗರ,ನಾಗಮ್ಮ, ವೆಂಕಮ್ಮ ರಾಠೋಡ, ಪಾರ್ವತಿ ಇದ್ದರು.