ಆಲೆಟ್ಟಿ ಬಿಜೆಪಿ ಕಾರ್ಯಕರ್ತರಿಗೆ, ವಿಜೇತರಿಗೆ ಅಭಿನಂದನಾ ಕಾರ್ಯಕ್ರಮ

ಸುಳ್ಯ, ಜ.೧೨- ಆಲೆಟ್ಟಿ ಪಂಚಾಯಿತಿಯ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ವಿಜಯಿಯಾದ ಪಂಚಾಯಿತಿ ಸದಸ್ಯರಿಗೆ ಅಭಿನಂದನೆ ಹಾಗೂ ಗೆಲುವಿಗಾಗಿ ಶ್ರಮಿಸಿದ ಬಿಜೆಪಿಯ ಕಾರ್ಯಕರ್ತರಿಗೆ ಕೃತಜ್ಞತೆಯನ್ನು ಅರ್ಪಿಸುವ ಕಾರ್ಯಕ್ರಮ ಬಡ್ಡಡ್ಕ ಶಾಲೆಯ ಸಭಾಭವನದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಬೂತ್ ಸಮಿತಿ ಅಧ್ಯಕ್ಷ ಪುಂಡರೀಕ ಕಾಪುಮಲೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಲೆಟ್ಟಿ ಸೊಸೈಟಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ಪಂ.ಮಾಜಿ ಅಧ್ಯಕ್ಷ ಹರೀಶ ರಂಗತ್ತಮಲೆ, ಸೊಸೈಟಿ ನಿರ್ದೇಶಕ ಶಿವರಾಮ ಕಾಪುಮಲೆ, ಪಂ.ಮಾಜಿ ಸದಸ್ಯ ಹೇಮನಾಥ ಬಡ್ಡಡ್ಕ, ಚುನಾಯಿತ ಪಂ.ಸದಸ್ಯರಾದ ಶಿವಾನಂದ ರಂಗತ್ತಮಲೆ, ಶಾಂತಪ್ಪ ಬಡ್ಡಡ್ಕ, ಶಶಿಕಲಾ ನಾಯಕ್ ದೋಣಿಮೂಲೆ, ಭಾಗೀರಥಿ ಪತ್ತುಕುಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಗದೀಶ ಕಾಪುಮಲೆಯವರು ಅಭಿನಂದನಾ ಭಾಷಣ ಮಾಡಿದರು.ಈ ಸಂದರ್ಭದಲ್ಲಿ ಗೆಲುವು ಪಡೆದ ಎಲ್ಲರನ್ನು ಶಾಲು ಹೊದಿಸಿ ಪುಷ್ಪಗುಚ್ಛ ನೀಡಿ ಅಭಿನಂದಿಸಲಾಯಿತು. ಪುಂಡರೀಕ ಕಾಪುಮಲೆ ಸ್ವಾಗತಿಸಿ, ಪವಿತ್ರ ಗೂಡಿಂಜ ವಂದಿಸಿದರು. ಧನ್ಯರಾಜ್ ಕಾಪುಮಲೆ ಕಾರ್ಯಕ್ರಮ ನಿರೂಪಿಸಿದರು.