ಆಲೆಟ್ಟಿ ಪ್ರೌಢಶಾಲೆಗೆ ರೋಟರಿ ಸುಳ್ಯ ಸಿಟಿ ವತಿಯಿಂದ ಬಾಲಕಿಯರ ಶೌಚಾಲಯ ಹಸ್ತಾಂತರ

ಸುಳ್ಯ, ಮಾ.೧೯- ರೋಟರಿ ಸುಳ್ಯ ಸಿಟಿ ವತಿಯಿಂದ ಆಲೆಟ್ಟಿ ಸರಕಾರಿ ಪ್ರೌಢಶಾಲೆಗೆ ನೂತನವಾಗಿ ನಿರ್ಮಿಸಿದ ಬಾಲಕಿಯರ ಶೌಚಾಲಯವನ್ನು ಹಸ್ತಾಂತರಿಸುವ ಕಾರ್ಯಕ್ರಮನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕ್ಲಬ್‌ನ ಅಧ್ಯಕ್ಷ ರೊ.ಗುರುವಿಕ್ರಮ್ ಪ್ರಸಾದ್ ವಹಿಸಿದ್ದರು. ಜಿಲ್ಲಾ ಗವರ್ನರ್ ರೊ.ರಂಗನಾಥ ಭಟ್ ರವರು ಶೌಚಾಲಯವನ್ನು ಹಸ್ತಾಂತರಿಸಿದರು. ವೇದಿಕೆಯಲ್ಲಿ ಅಸಿಸ್ಟೆಂಟ್ ಗವರ್ನರ್ ರೊ. ರತ್ನಾಕರ ರೈ, ರೊ. ರಜನಿ ಭಟ್, ಝೋನಲ್ ಲೆಪ್ಟಿನೆಂಟ್ ಜಿತೇಂದ್ರ ಎನ್.ಎ, ಕ್ಲಬ್‌ನ ಜಿ.ಎಸ್.ಆರ್. ರೊ.ಡಾ.ಕೇಶವ ಪಿ.ಕೆ, ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ, ಎಸ್.ಡಿ.ಎಂ.ಸಿ.ಅಧ್ಯಕ್ಷ ನಿತ್ಯಾನಂದ ಕಲ್ಲೆಂಬಿ, ಕ್ಲಬ್ ಕಾರ್ಯದರ್ಶಿ ಗಿರೀಶ ನಾರ್ಕೋಡು, ಖಜಾಂಜಿ ಶಿವಪ್ರಸಾದ್ ಕೆ.ವಿ ಉಪಸ್ಥಿತರಿದ್ದರು. ಶಾಲೆಗೆ ಅತಿ ಅಗತ್ಯವಾಗಿ ಬೇಕಾಗಿರುವ ಸುಮಾರು ಎರಡೂವರೆ ಲಕ್ಷ ವೆಚ್ಚದಲ್ಲಿ ವ್ಯವಸ್ಥಿತವಾಗಿ ಶೌಚಾಲಯದ ನಿರ್ಮಾಣ ಕಾರ್ಯ ನಡೆದಿತ್ತು. ಈ ಸಂದರ್ಭ ಕ್ಲಬ್ ನ ಸದಸ್ಯರು, ಎಸ್.ಡಿ.ಎಂ.ಸಿ ಸದಸ್ಯರು,ಶಾಲಾ ಅದ್ಯಾಪಕ ವೃಂದದವರು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದರು.