ಆಲೆಟ್ಟಿ: ನಿಯಂತ್ರಣ ತಪ್ಪಿ ತೋಟಕ್ಕೆ ಬಿದ್ದ ಜೀಪು-ಪ್ರಯಾಣಿಕರು ಪಾರು

ಸುಳ್ಯ, ಡಿ.೨೫- ಸುಳ್ಯದಿಂದ ಆಲೆಟ್ಟಿ ರಸ್ತೆ ಮೂಲಕ ರಂಗತ್ತಮಲೆಗೆ ಸಂಚರಿಸುತ್ತಿದ್ದ ಜೀಪು ಚಾಲಕನ ನಿಯಂತ್ರಣ ತಪ್ಪಿ ಆಲೆಟ್ಟಿ ರಾಧಾಕೃಷ್ಣ ರೈ ಯವರ ತೋಟಕ್ಕೆ ಬಿದ್ದ ಘಟನೆ ನಡೆದಿದೆ. ಜೀಪಿನ ಚಾಲಕ ರವಿ ಸೇರಿ ೩ ಮಂದಿ ಪ್ರಯಾಣಿಕರು ಜೀಪಿನಲ್ಲಿದ್ದರು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸದೆ ಪ್ರಯಾಣಿಕರು ಪಾರಾಗಿದ್ದಾರೆ