ಆಲೂ ವೆಜಿಟೆಬಲ್ ಬೋಂಡಾ

ಬೇಕಾಗುವ ಪದಾರ್ಥಗಳು:

  • ಬೇಯಿಸಿ ಪುಡಿಮಾಡಿದ ಆಲೂಗೆಡ್ಡೆ – ೪
  • ಬೇಯಿಸಿ ಪುಡಿಮಾಡಿದ ಬಟಾಣಿಕಾಳು – ಅರ್ಧ ಲೋಟ
  • ಸಬ್ಬಸ್ಸಿಗೆ ಸೊಪ್ಪು – ಅರ್ಧ ಲೋಟ
  • ಕೊತ್ತಂಬರಿಸೊಪ್ಪು – ರುಚಿಗೆ ತಕ್ಕಷ್ಟು
  • ಹಸಿಮೆಣಸಿನಕಾಯಿ ಪೇಸ್ಟ್ – ರುಚಿಗೆ ತಕ್ಕಷ್ಟು
  • ಹೆಚ್ಚಿದ ಈರುಳ್ಳಿ – ೨
  • ಉಪ್ಪು – ರುಚಿಗೆ ತಕ್ಕಷ್ಟು
  • ಚಿರೋಟಿರವೆ – ೨ ಚಮಚ
  • ಕಾರ್ನ್‌ಫ್ಲೋರ್/ಜೋಳದಹಿಟ್ಟು/ಮೈದಾಹಿಟ್ಟು – ೧ ಚಮಚ
  • ಶುಂಠಿ ಪೇಸ್ಟ್ – ೨ ಚಮಚ

ವಿಧಾನ:
ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಸೇರಿಸಿ, ಮೊದಲು ಹಾಗೆಯೇ ಕಲೆಸಿ, ನಂತರ ಬೇಕಾದಷ್ಟು ಮಾತ್ರ ನೀರು ಹಾಕಿ ಕಲೆಸಿ, ಉಂಡೆಮಾಡಿ ಎಣ್ಣೆಯಲ್ಲಿ ಕರಿಯಬೇಕು.