
ಬೇಕಾಗುವ ಸಾಮಗ್ರಿಗಳು
*ಆಲೂಗಡ್ಡೆ – ೧/೪ ಕೆ.ಜಿ
*ಬಟಾಣಿ – ೧೫೦ ಗ್ರಾಂ
*ಪನೀರ್ – ೧೦೦ ಗ್ರಾಂ
*ಚಾಟ್ ಮಸಾಲ – ೧ ಚಮಚ
*ಶುಂಠಿ – ೧ ಚಮಚ
*ಹಸಿರು ಮೆಣಸಿನಕಾಯಿ – ೫
*ಕಾರ್ನ್‌ಫ್ಲೋರ್ – ೫೦ ಗ್ರಾಂ
*ಗರಂ ಮಸಾಲ – ೧ ಚಮಚ
*ಉಪ್ಪು- ೧ ಚಮಚ
*ತುಪ್ಪ – ೨೦೦ ಗ್ರಾಂ
ಮಾಡುವ ವಿಧಾನ :
ಹಸಿ ಆಲೂಗಡ್ಡೆಯನ್ನು ಬೇಯಿಸಿ, ತುರಿದು ಬೌಲ್‌ಗೆ ಹಾಕಿ. ಇದಕ್ಕೆ ತುರಿದ ಪನೀರ್, ನೀರು ಹಾಕದೆ ರುಬ್ಬಿದ ಬಟಾಣಿ ಹಾಕಿ ಚೆನ್ನಾಗಿ ಬೆರೆಸಿ. ಈ ಮಿಶ್ರಣಕ್ಕೆ ಚಾಟ್ ಮಸಾಲ, ತುರಿದ ಶುಂಠಿ, ಹಸಿರು ಮೆಣಸಿನಕಾಯಿ, ಕಾರ್ನ್‌ಫ್ಲೋರ್, ಗರಂಮಸಾಲ, ಉಪ್ಪು ಹಾಕಿ ಮಿಕ್ಸ್ ಮಾಡಿ. ಪೂರಿ ದಪ್ಪದಷ್ಟು ಉಂಡೆಗಳನ್ನು ಮಾಡಿ. ವಡೆಯಾಕಾರಕ್ಕೆ ತಟ್ಟಿ, ತುಪ್ಪದಲ್ಲಿ ಶ್ಯಾಲೋ ಫ್ರೈ ಮಾಡಿದರೆ ಆಲೂ ಮಟರ್ ಟಿಕ್ಕಿ ಸವಿಯಲು ರೆಡಿ.