ಆಲೂರ್ ಬಿ ಯಲ್ಲಿ ಜನಮನ ಸೆಳೆದ ಜಾನಪದ ಸೊಗಡು

ಕಲಬುರಗಿ:ನ.9:ಶ್ರೀ ಅಕ್ಕಮಹಾದೇವಿ ಸಂಗೀತ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಘ( ರಿ) ಸುಂಟನೂರ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಜಾನಪದ ಸೊಗಡು ಕಾರ್ಯಕ್ರಮ ಬಹಳ ಅದ್ಭುತವಾಗಿ ಆಲೂರ ಬಿ ಗ್ರಾಮದ ಹನುಮಾನ ದೇವಾಲಯದಲ್ಲಿ ನೆರವೇರಿತು ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಪಂಪಾಪತಿ ದೇವರು ಕಡಗಂಚಿ ಪೂಜ್ಯರು ವಹಿಸಿಕೊಂಡಿದ್ದರು ಅತಿಥಿಗಳಾಗಿ ಮಹಾಂತಯ್ಯ ಸ್ವಾಮಿ ಶರಣಯ್ಯ ಸ್ವಾಮಿ ಸದಾಶಿವ ಪಾಟೀಲ್ ಭಿಮಾಶಂಕರ ಖಜೂರಿ ಮಹನಿಂಗಪ್ಪಾ ಹರವಾಳ ಮಹೇಶ ಮಾಯಿ ಬಂಡಪ್ಪಾ ಹೊಸಮನಿ, ಮಹಂತಪ್ಪ ಮುತ್ತ ಬಸಣ್ಣ ಗುಂಡದ ಶ್ರೀ ಮತಿ ರುಕ್ಮಿಣಿ ಎಮ್ ಕೊರಳ್ಳಿ ಹಾಗೂ ಸಂಘದ ಅಧ್ಯಕ್ಷರಾದ ಶ್ರೀಮತಿ ಈರಮ್ಮ ಎಸ್ ಮಠ ಹಾಗೂ ಅನೇಕ ಗಣ್ಯರು ಭಾಗವಹಿಸಿದ್ದರು
ಕಲೆ ಸಾಹಿತ್ಯ ಸಂಸ್ಕ್ರತಿ ಜಾನಪದ ಕಲೆಗಳು ನಮ್ಮ ನಾಡಿನ ನರನಾಡಿಗಳು ಇದ್ದಹಾಗೆ ಜೀವನದಲ್ಲಿ ನಶ್ವರವಾದ ಈ ಪ್ರಪಂಚವನ್ನು ಮರೆಸಿ ನಿಜಾನಂದವನ್ನು ನೀಡುವ ಕಲೆ ಎಂದರು ಸಂಗೀತ ಕಲೆ ಇಂದಿನ ಕಾಲದಲ್ಲಿ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಹಳ ಅರ್ಥಪೂರ್ಣ ವಾದ ಕಾರ್ಯಕ್ರಮ ಗಳನ್ನ ಸಂಘ ಸಂಸ್ಥೆಗಳಿಗೆ ಮಾಡಲು ಅನುಮತಿ ಸುತ್ತಿರುವದು ಬಹಳ ಸಂತೋಷದ ವಿಷಯ ಅದಕ್ಕಾಗಿ ಸಮಾಜದಲ್ಲಿ ಸಂಸ್ಕೃತಿ ಯನ್ನು ಯುವ ಪೀಳಿಗೆಗೆ ತಿಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಪೂಜ್ಯರು ಕಾರ್ಯಕ್ರಮದ ಕುರಿತು ಸಾನಿಧ್ಯ ವಹಿಸಿದ ಪಂಪಾಪತಿ ಪೂಜ್ಯರು ಮಾತನಾಡಿದರು
ಜಾನಪದ ಸೊಗಡು ಕಾರ್ಯಕ್ರಮ ದಲ್ಲಿ ನಾಡಿನ ಹೆಸರಾಂತ ಕಲಾವಿದರಾದ ಅಣ್ಣಾರಾವ ಶೇಳ್ಳಗಿ ಮತ್ತಿಮೂಡ, ನಾಗಲಿಂಗಯ್ಯ ಶಾಸ್ತ್ರಿಗಳು ಸ್ಥಾವರಮಠ, ಸೈದಪ್ಪಾ ಚೌಡಪೂರ ಬಸಯ್ಯ ಗುತ್ತೆದಾರ ತೇಲ್ಲೂರ, ಉದಯ ಶಾಸ್ತ್ರಿಗಳು ಭೀಮಳ್ಳಿ,ತೋಟೆಂದ್ರ ಶಾಸ್ತ್ರಿಗಳು ಅಬ್ಬೆತುಮಕೂರ, ಚೇತನ್ ಬಿ ಕೋಬಾಳ್,ಮಹಾಲಿಂಗಯ್ಯ ಎಸ್ ಮಠ ಶರಣಮ್ಮ ಕೆ ಮಠಪತಿ, ಗುರುರಾಜ ಬಿರಾದಾರ ಸುಂಟನೂರ, ಸಾಗರ ಜಮಾದಾರ ಆಲೂರ ಅಣ್ಣಾರಾವ ಸುತಾರ ಆಲೂರ,ವಾದ್ಯ ಸಹಕಾರದಲ್ಲಿ ಸಂತೋಷ ಕೊಡ್ಲಿ ಗದಗ,ಅನೀಲ ಮಠಪತಿ, ಶ್ರೀ ಶೈಲ ಎಮ್ ಗುತ್ತೆದಾರ, ಇವರೆಲ್ಲರಿಂದ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು, ನಾಗಲಿಂಗಯ್ಯ ಸ್ಥಾವರಮಠ ರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.