ಆಲೂರು ಭಾಗದ ಮೂರು ಕಡೆ ಯೋಗ್ಯವಲ್ಲದ ಕುಡಿಯುವ ನೀರಿನ ವರದಿ – ನಾಗರತ್ನಮ್ಮ.

ಕೂಡ್ಲಿಗಿ.ಜ.12:- ಆಲೂರು ಪಂಚಾಯತಿಯಲ್ಲಿ ಕೆಲವು ಕಡೆ ಪೈಪ್ ಲೈನ್ ದುರಸ್ತಿಯಾಗಬೇಕಿದ್ದು ಅಲ್ಲಿಂದ ಸರಬರಾಜಾಗುತ್ತಿರುವ ಮೂರ್ನಾಲ್ಕು ಭಾಗದ ನೀರು ಕುಡಿಯಲು ಯೋಗ್ಯವಿಲ್ಲವೆಂದು ಜಿಲ್ಲಾ ಕಾಲರಾ ನಿಯಂತ್ರಣ ಘಟಕದ ಆರೋಗ್ಯಾಧಿಕಾರಿಗಳು ವರದಿ ಸಲ್ಲಿಸಿದ್ದಾರೆ ಆದರೆ ಸಂಬಂದಿಸಿದ ಕೂಡ್ಲಿಗಿ ತಾಲೂಕಿನ ಅಧಿಕಾರಿಗಳು ಭೇಟಿ ನೀಡಿಲ್ಲ ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ ಎಂದು ತಾಲೂಕು ಪಂಚಾಯತಿ ಅಧ್ಯಕ್ಷೆ ನಾಗರತ್ನಮ್ಮ ಲಿಂಗಪ್ಪ ದೂರಿದರು.
ಅವರು ಇತ್ತೀಚಿಗೆ ನಡೆದ ಕೂಡ್ಲಿಗಿ ತಾಲೂಕು ಪಂಚಾಯತಿಯ ಸಭಾಂಗಣದಲ್ಲಿ ಜರುಗಿದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಡಿಸೇಂಬರ್ ತಿಂಗಳಲ್ಲೇ ಆಲೂರಿನ ನಾಲ್ಕು ಕಡೆಯ ಪೈಪ್ ಲೈನಿನಿಂದ ಸರಬರಾಜಾಗುವ ನೀರಿನ ಮಾದರಿಯನ್ನು ಜಿಲ್ಲಾ ಕಾಲರಾ ನಿಯಂತ್ರಣ ಘಟಕ ತೆಗೆದುಕೊಂಡುಹೋಗಿ ಮೂರು ಭಾಗದಲ್ಲಿ ಸರಬರಾಜು ಆಗುವ ನೀರು ಜನರಿಗೆ ಕುಡಿಯಲು ಯೋಗ್ಯವಿಲ್ಲ ಆ ಭಾಗದ ಜನರಿಗೆ ಕ್ಲೋರೊನೇಶಿಯ ಮಾಡಿದ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಜಿಲ್ಲಾ ಕಾಲರಾ ನಿಯಂತ್ರಣ ಘಟಕದ ಉಪ ಮುಖ್ಯ ವೈದ್ಯಾಧಿಕಾರಿ ಪತ್ರದ ಮೂಲಕ ತಿಳಿಸಿದ್ದರು ಸಂಬಂದಿಸಿದ ಇಲಾಖೆ ಭೇಟಿ ನೀಡಿ ಸರಿಪಡಿಸಿಲ್ಲವೇಕೆ ಎಂದು ದೂರಿದರು.
ಅರಣ್ಯ ಪ್ರದೇಶಗಳತ್ತ ಜನರು ಸುತ್ತಾಡದಿರಿ ಅರಣ್ಯ ವನ್ಯಜೀವಿಗಳು ಅಪಾಯ ಮಾಡಬಹುದು ಎಂದು ಕೂಡ್ಲಿಗಿ ಮತ್ತು ಗುಡೇಕೋಟೆ ವಲಯಾರಣ್ಯಾಧಿಕಾರಿ ರೇಣುಕಾ ತಿಳಿಸಿದರು ಇತ್ತೀಚಿಗೆ ಗಂಗಾವತಿ ಸಮೀಪ ಚಿರತೆ ದಾಳಿ ಹೆಚ್ಚಾಗಿ ಜನರ ಪ್ರಾಣಕ್ಕೆ ಕುತ್ತು ತರುವಲ್ಲಿ ಮುಂದಾಗಿರುವ ಕಾರಣ ನಮ್ಮ ಭಾಗದ ಜನರಲ್ಲಿ ಮುಂಜಾಗ್ರತೆಗೆ ತಿಳಿಸಲಾಗಿದೆ ಎಂದರು.
ಕೋವಿಡ್ ಕಡಿಮೆಯಾಗಿದೆ ಎಂದು ತಿಳಿದುಕೊಳ್ಳದೆ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಇತ್ತೀಚಿಗೆ ಶಾಲೆ ಪ್ರಾರಂಭವಾದ ನಂತರ ಇಬ್ಬರು ಶಿಕ್ಷಕರಿಗೆ ಪಾಸಿಟಿವ್ ವರದಿ ಬಂದಿದೆ ಅವರನ್ನು ಕ್ವಾರಂಟೈನ್ ನಲ್ಲಿಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿಗಳು ತಿಳಿಸಿದರು.
ಉಳಿದಂತೆ ಕೃಷಿ, ಶಿಕ್ಷಣ ಇಲಾಖೆ, ಬಿಸಿಎಂ, ಸಮಾಜಕಲ್ಯಾಣ ಇಲಾಖೆ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿಯ ವರದಿ ಸಭೆಯಲ್ಲಿ ಪ್ರಸ್ತಾಪಿಸಿದರು. ತಾಲೂಕು ಪಂಚಾಯತಿ ಅಧ್ಯಕ್ಷೆ ನಾಗರತ್ನಮ್ಮಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು ಉಪಾಧ್ಯಕ್ಷೆ ರತ್ನಮ್ಮ ಲಿಂಗನಗೌಡ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಮತ್ತು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಜಿ. ಬಸಣ್ಣ ವೇದಿಕೆಯಲ್ಲಿ ಹಾಜರಿದ್ದರು ಅನೇಕ ಗ್ರಾ. ಪಂ ಪಿಡಿಓಗಳು ಮತ್ತು ಕೆಲ ಇಲಾಖೆ ಅಧಿಕಾರಿಗಳು ಸಭೆಗೆ ಗೈರಾಗಿದ್ದು ಕಂಡುಬಂದಿತ್ತು.